ವೀರಾಜಪೇಟೆ, ಮಾ. ೨೦: ವೀರಾಜಪೇಟೆಯ ಮೀನುಪೇಟೆಯಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಸ್ಥಾನದ ವತಿಯಿಂದ ೮೨ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವಕ್ಕೆ ಚಾಲನೆ ದೊರೆತಿದೆ. ತಾ. ೧೯ ರವರೆಗೆ ಮೂರು ದಿನಗಳ ಕಾಲ ಉತ್ಸವ ನಡೆಯಲಿದ್ದು, ಮಂಗಳವಾರ ಬೆಳಿಗ್ಗೆ ಗಣಪತಿ ಹೋಮದೊಂದಿಗೆ ತೆರೆ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ದೇವಾಲಯದ ಆವರಣದಲ್ಲಿರುವ ಧ್ವಜಸ್ತಂಭದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು.
ಸಂಜೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ ನಡೆಯಿತು. ಬುಧವಾರ ಮಧ್ಯಾಹ್ನ ೨ ಗಂಟೆಗೆ ದೇವರ ಮಲೆ ಇಳಿಸುವುದು, ಸಂಜೆ ೫ ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟ ನಡೆಯಿತು.
ಸಂಜೆ ೫:೩೦ ಗಂಟೆಗೆ ಮೊದಕಲಶದೊಂದಿಗೆ ತಾಲಪೋಲಿ ಮೆರವಣಿಗೆ, ಕಾಳಿಂಗ ಕಲಾ ಸಮಿತಿಯವರ ಸಿಂಗಾರಿ ಮೇಳ ಹಾಗೂ ತತ್ವಮಸಿ ಸಹಸ್ರ ವೆಳಕಾಟ್ಟಂ ಚಂಡೆಮೇಳದೊAದಿಗೆ, ಮಹಿಳೆಯರ ತಾಲಪ್ಪೊಲಿ ಮೆರವಣಿಗೆ ನಡೆಯಿತು. ಸಂಜೆ ೬ ಗಂಟೆಯಿAದ ಕುಟ್ಟಿಚಾತನ್, ಗುಳಿಗನ್, ವಸೂರಿಮಾಲ, ಪೋದಿ, ವಿಷ್ಣುಮೂರ್ತಿ ವೆಳ್ಳಾಟಂ ನೆರವೇರಿತು. ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ತಾ. ೧೯ ರಂದು ಪ್ರಾತಃಕಾಲ ೧ ಗಂಟೆಗೆ ಶಾಸ್ತಪ್ಪನ್ ಹಾಗೂ ಗುಳಿಗನ ಕೋಲ, ೪ ಗಂಟೆಗೆ ತಿರುವಪ್ಪನ್, ಬೆಳಿಗ್ಗೆ ೮ ಗಂಟೆಗೆ ಭಗವತಿ (ಪೋದಿ), ೧೦ ಗಂಟೆಗೆ ವಸೂರಿಮಾಲ, ೧೧ ಗಂಟೆಗೆ ವಿಷ್ಣುಮೂರ್ತಿ, ೧೨ ಗಂಟೆಗೆ ಅನ್ನಸಂತರ್ಪಣೆ, ಅಪರಾಹ್ನ ೩ ಗಂಟೆಗೆ ವಿಷ್ಣುಮೂರ್ತಿ ವಾರಣದೊಂದಿಗೆ ಉತ್ಸವ ಮುಕ್ತಾಯಗೊಳ್ಳಲಿದೆ.