ಕುಶಾಲನಗರ, ಮಾ. ೧೮: ಪುನೀತ್ ರಾಜಕುಮಾರ್ ಗೆಳೆಯರ ಬಳಗದ ಆಶ್ರಯದಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬ ಆಚರಣೆ ನಡೆಯಿತು. ಕುಶಾಲನಗರ ಸರಕಾರಿ ಬಸ್ ನಿಲ್ದಾಣ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ವಿ.ಪಿ. ಶಶಿಧರ್ ಮಾತನಾಡಿ, ಪುನೀತ್ ಅವರ ಸರಳತೆ, ಸಮಾಜದ ಬಗ್ಗೆ ಅವರಿಗೆ ಇದ್ದ ಕಾಳಜಿ ತಾಳ್ಮೆ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ ಎಂದರು. ಈ ಸಂದರ್ಭ ಉದ್ಯಮಿ ಮೈಸಿ ಕತ್ತಣ್ಣೀರ, ಮಹೇಶ್, ಪೊಲೀಸ್ ಅಧಿಕಾರಿ ನಂದಕುಮಾರ್, ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿ ಮಲ್ಲೇಶ್, ಪುಷ್ಪ, ಆಟೋ ಚಾಲಕರ ಮಾಲೀಕರ ಸಂಘದ ಅಧ್ಯಕ್ಷ ಕಿಟ್ಟಿ, ಗೆಳೆಯರ ಬಳಗದ ಪ್ರಮುಖರಾದ ಗಿರೀಶ್, ಯೋಗೇಶ್ ರಮೇಶ್, ಗಿರಿ ಪ್ರಸಾದ್ ಆನಂದ್, ಕುಮಾರ್ ಮತ್ತಿತರರು ಇದ್ದರು.