ಸುಂಟಿಕೊಪ್ಪ, ಮಾ. ೧೮: ಇಲ್ಲಿಗೆ ಸಮೀಪದ ಕೆದಕಲ್‌ನ ಶ್ರೀ ಭದ್ರಕಾಳೇಶ್ವರಿ ದೇವಾಲಯದಲ್ಲಿ ವಿಷ್ಣುಮೂರ್ತಿ ಕೋಲ ನಡೆಯಿತು. ದಿನದ ಅಂಗವಾಗಿ ಮಧ್ಯಾಹ್ನ ೨ ಗಂಟೆಯಿAದ ವಿಷ್ಣುಮೂರ್ತಿ ಕಟ್ಟೆ ತೆರೆ ಹಾಗೂ ೩ ಗಂಟೆಯಿAದ ಸಕಲ ದೇವರ ದರ್ಶನ ಹಾಗೂ ಮಹಾಮಂಗಳಾರತಿ ನಡೆ ಭಂಡಾರ ಹಾಕುವುದು, ದೇವರ ಹರಕೆ ಇತ್ಯಾದಿ ಪೂಜಾ ಕೈಂಕರ್ಯಗಳು ನಡೆದವು. ದೇವಾಲಯದ ಅಧ್ಯಕ್ಷರು, ತಕ್ಕಮುಖ್ಯಸ್ಥರು, ಸಮಿತಿ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು. ನೆರೆದಿದ್ದ ಭಕ್ತರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.