ಸಿದ್ದಾಪುರ, ಮಾ ೧೮: ತ್ಯಾಗತ್ತೂರು-ವಾಲ್ನೂರು ಗ್ರಾಮದ ಶ್ರೀ ಭಗವತಿ ದೇವಾಲಯದ ವಾರ್ಷಿಕೋತ್ಸವ ವಿವಿಧ ಪೂಜಾ ಕೈಂಕರ್ಯಗಳೊAದಿಗೆ ತಾ. ೨೪ ರಿಂದ ೨೭ರವರೆಗೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ತಾ ೨೪ರಂದು ಸಂಜೆ ತಕ್ಕರ ಮನೆಯಿಂದ ಭಂಡಾರ ಇಳಿಸುವುದು, ಶ್ರೀದೇವಿ ಬಲಿ, ಮಹಾಪೂಜೆ, ತಾ ೨೫ ರಂದು ಮಧ್ಯಾಹ್ನ ೩ ಗಂಟೆಯಿAದ ಪಟ್ಟಣಿ ಎತ್ತು ಹೇರು, ಶ್ರೀದೇವಿ ಬಲಿ ಅಲಂಕಾರ ಪೂಜೆ, ಮಹಾಪೂಜೆ, ಅನ್ನ ಸಂತರ್ಪಣೆ, ತಾ. ೨೬ ರಂದು ಬೆಳಿಗ್ಗೆ ೧೦.೩೦ ಕ್ಕೆ ತುಲಾ ಭಾರ ಸೇವೆಗಳು, ಮಹಾಪೂಜೆ, ತೀರ್ಥಪ್ರಸಾದ, ಅನ್ನಸಂಪರ್ಪಣೆ. ಮಧ್ಯಾಹ್ನ ೩ಕ್ಕೆ ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಶ್ರೀದೇವಿಯ ಬಲಿ ಅವಭೃತ ಸ್ನಾನ, ಶ್ರೀದೇವಿಯ ಬಲಿ ನೃತ್ಯ, ಅಲಂಕಾರ ಪೂಜೆ, ಮಹಾಪೂಜೆ ಅನ್ನ ಸಂತರ್ಪಣೆ ನಡೆಯಲಿದೆ. ತಾ೨೭ರಂದು ಬೆಳಿಗ್ಗೆ ೯ಕ್ಕೆ ಶುದ್ಧ ಕಳಶ ಅನ್ನ ಸಂತರ್ಪಣೆ ನಡೆಯಲಿದೆ ಸೇರಿದಂತೆ ಇನ್ನಿತರ ಪೂಜೆ ನಡೆಯಲಿದೆ.