ಸಿದ್ದಾಪುರ, ಮಾ.೧೭: ಗುಹ್ಯ ಯೂತ್ ಹೆಲ್ತ್ ಕೇರ್ ಸಂಘದ ವತಿಯಿಂದ ಕೂಡುಗದ್ದೆ ಮಸೀದಿಯಲ್ಲಿ ಸಾಮೂಹಿಕ ಇಫ್ತಾರ್ ಕೂಟ ನಡೆಯಿತು.
ಗ್ರಾಮದ ಮುಸಲ್ಮಾನ ಹಾಗೂ ಹಿಂದೂ ಸಮುದಾಯದವರು ಇಪ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ಈ ಸಂದರ್ಭ ಮಸೀದಿಯ ಖತೀಬರಾದ ಹನೀಫ ರಹಮಾನಿ, ಯೂತ್ ಹೆಲ್ತ್ ಕೇರ್ ಅಧ್ಯಕ್ಷ ರಶೀದ್, ಉಪಾಧ್ಯಕ್ಷ ಅಬ್ದುಲ್ ಖಾದರ್, ಕಾರ್ಯದರ್ಶಿ ಹಂಸ ಮೌಲವಿ, ಗ್ರಾಮದ ಪ್ರಮುಖರಾದ ಪಿ.ಕೆ ಚಂದ್ರನ್, ರೆಜಿತ್ ಕುಮಾರ್, ವಿ.ಕೆ ಬಷೀರ್, ಎ.ಸ್ ಹಸ್ಸನ್, ಕಾರ್ಗಿಲ್ ಯುವಕ ಸಂಘದ ಪ್ರಮುಖರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.