ಚೆಯ್ಯಂಡಾಣೆ, ಮಾ. ೧೭: ಕೊಡಗು ಜಿಲ್ಲೆಯ ಪ್ರತಿಷ್ಠಿತ ಸಮನ್ವಯ ವಿದ್ಯಾ ಕೇಂದ್ರ ವೀರಾಜಪೇಟೆ ಅನ್ವಾರುಲ್ ಹುದಾ ಕ್ಯಾಂಪಸ್‌ನಲ್ಲಿ ಅಸ್ಮಾಉಲ್ ಹುಸ್ನಾ ರಾತೀಬ್ ಹಾಗೂ ವಾರ್ಷಿಕ ಬೃಹತ್ ಇಫ್ತಾರ್ ಸಂಗಮ ನಡೆಯಿತು.

ಅಸ್ಮಾಉಲ್ ಹುಸ್ನಾ ಅಧ್ಯಾತ್ಮಿಕ ಮಜ್ಲಿಸ್‌ಗೆ ಸಂಸ್ಥೆಯ ಮುದರ್ರಿಸ್ ಇಸ್ಮಾಯಿಲ್ ಸಖಾಫಿ ಉಳಿಕ್ಕಲ್ ನೇತೃತ್ವ ವಹಿಸಿದ್ದರು. ಅನ್ವಾರ್ ಸಂಸ್ಥೆಯ ಪ್ರಮುಖ ಹಾಗೂ ಕೂರ್ಗ್ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಅಹ್ಸನಿ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಂಜೆ ಮಾರ್ಹೂಂ ಕೂರತ್ ತಂಙಳ್ ಅವರ ಪುತ್ರ ಸಯ್ಯಿದ್ ಮಶೂದ್ ತಂಙಳ್ ಅಲ್ ಬುಖಾರಿ ಮಾತನಾಡಿ, ಇಂದಿನ ಯುವ ಸಮೂಹ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದು, ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಟ್ಟರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗಲಿದೆ ಎಂದರು. ನಂತರ ಸಾಮೂಹಿಕ ಪ್ರಾರ್ಥನೆಗೆ ನೇತೃತ್ವ ವಹಿಸಿದ್ದರು.

ಸಂಸ್ಥೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳನ್ನು ಬೀಳ್ಕೊಡಲಾಯಿತು. ಈ ಸಂದರ್ಭ ಸಯ್ಯಿದ್ ಶಿಹಾಬ್ ತಂಙಳ್, ರಶೀದ್ ಸಅದಿ ಅಯ್ಯಂಗೇರಿ, ಕೆಎಂಜೆ ಜಿಲ್ಲಾ ಕೋಶಾಧಿಕಾರಿ ಖಾಲಿದ್ ಫೈಝಿ, ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಕೂಬ್ ಮಾಸ್ಟರ್, ಎಸ್ ಎಸ್ ಎಫ್ ಜಿಲ್ಲಾಧ್ಯಕ್ಷ ಖಮರುದ್ದಿನ್ ಅನ್ವಾರಿ, ಫಯಾಝ್ ಅಹ್ಮದ್ ಮೈಸೂರು, ಅಬ್ದುಲ್ ಸಲಾಂ ಗೋಣಿಕೊಪ್ಪ, ಇಬ್ರಾಹಿಂ ಕಲ್ಲುಬಾಣೆ, ಅಲಿ ಸುಂಟಿಕೊಪ್ಪ, ಉಮರ್ ಕಲ್ಲುಬಾಣೆ, ನೌಫಲ್ ವೀರಾಜಪೇಟೆ ಮತ್ತಿತರರು ಉಪಸ್ಥಿತರಿದ್ದರು.