ಸೋಮವಾರಪೇಟೆ, ಮಾ.೧೭: ಹೋಂ ಸ್ಟೇ ಮತ್ತು ಟೂರಿಸಂ ಅಸೋಸಿಯೇಷನ್- ಸೋಮವಾರಪೇಟೆ ವತಿಯಿಂದ ಅರಕಲಗೂಡು ತಾಲೂಕಿನ ದೊಡ್ಡ ಬೆಮ್ಮತ್ತಿಯಲ್ಲಿರುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಾಗೂ ಹಾಸನ ಜಿಲ್ಲಾ ಕೃಷಿ ಸಮಾಜದ ಅಧ್ಯಕ್ಷ ಡಾ. ಎಂ.ಸಿ. ರಂಗಸ್ವಾಮಿ ಅವರ ವಿಶ್ವಮಟ್ಟದ ಹೈನುಗಾರಿಕೆ ಕೇಂದ್ರಕ್ಕೆ ಭೇಟಿ ನೀಡಲಾಯಿತು.
ಹೋಂ ಸ್ಟೇ ಮತ್ತು ಟೂರಿಸಂ ಅಸೋಸಿಯೇಷನ್ ನ ಅಧ್ಯಕ್ಷ ಸಿ.ಕೆ. ರೋಹಿತ್ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಸದಸ್ಯರುಗಳು ಹೈನುಗಾರಿಕೆ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಂಡರು.
ಹೈನುಗಾರಿಕಾ ಕೇಂದ್ರದ ವಿಶೇಷತೆಗಳನ್ನು ಡಾ. ಸಾದತ್ ವಿವರಿಸಿದರು. ಕೇವಲ ೧೫ ಸಿಬ್ಬಂದಿಯಿAದ ಸಾವಿರಕ್ಕೂ ಹೆಚ್ಚು ಹಸುಗಳನ್ನು ಮಾನವೀಯತೆಯಿಂದ ನಿರ್ವಹಿಸಲಾಗುತ್ತಿದೆ. ಯಾವುದೇ ಆಂಟಿಬಯಾಟಿಕ್ ಔಷಧಿಗಳನ್ನು ಬಳಸದೆ ಮತ್ತು ರಾಸಾಯನಿಕ ಮುಕ್ತ ಆಹಾರ ನೀಡಲಾಗುತ್ತಿದೆ ಎಂದು ಅವರು ಮಾಹಿತಿ ಒದಗಿಸಿದರು. ಹಾಲು, ಮೊಸರು, ಪನ್ನೀರ್, ತುಪ್ಪ, ಬೆಣ್ಣೆ, ಯೋಗಟ್ ಗಳನ್ನು ಸ್ವತಃ ಡೈರಿಯಲ್ಲಿ ಸಂಸ್ಕರಿಸಿ ಸರಬರಾಜು ಮಾಡಲಾಗುತ್ತಿದೆ ಎಂದು ಸಾದತ್ ಹೇಳಿದರು. ನಂತರ ವಿವಿಧ ತಳಿಯ ಏಲಕ್ಕಿ, ಅಡಿಕೆ, ಗಂಧದ ಮರ, ಕಾಫಿ ತೋಟ, ಸಪೋಟ, ಸೀತಾಫಲ, ಮಹಾಗನಿ ಬೆಳೆಯ ತೋಟಕ್ಕೆ ಭೇಟಿ ನೀಡಿ ಮಾಹಿತಿ ಪಡೆಯಲಾಯಿತು. ಹೋಂ ಸ್ಟೇ ಅಸೋಸಿಯೇಷನ್‌ನ ಸದಸ್ಯರುಗಳು ಭಾಗವಹಿಸಿದ್ದರು.