ಮಡಿಕೇರಿ, ಮಾ. ೧೭: ಸೋಮವಾರಪೇಟೆ ತಾಲೂಕಿನ ಅಬ್ಬೂರುಕಟ್ಟೆಯ ಹಿತ್ತಲಮಕ್ಕಿ, ಮೋರಿಕಲ್ಲು ಶ್ರೀ ಕೊರಗಜ್ಜ ಹಾಗೂ ಪರಿವಾರ ದೈವಗಳ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದ್ದು, ಇದೀಗ ದೇವಾಲಯಕ್ಕೆ ಪ್ರಮುಖ ಮೆಟ್ಟಿಲು ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನೆರವೇರಿಸಲಾಯಿತು.

ಸುಮಾರು ರೂ. ೬೦ ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೆತ್ತಿಕೊಳ್ಳಲಾಗಿದ್ದು, ಕಳೆದ ೨೦೨೫ನೇ ಸಾಲಿನಲ್ಲಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರು ಚಾಲನೆ ನೀಡಿದ್ದರು. ಬಹುತೇಕ ಕೆಲಸ ಕಾರ್ಯಗಳು ಪೂರ್ಣಗೊಂಡಿದ್ದು, ಇದೀಗ ಬಾಕಿ ಉಳಿದಿರುವ ಮೆಟ್ಟಿಲು ನಿರ್ಮಾಣ ಹಾಗೂ ಇತರ ಕೆಲಸಗಳಿಗೆ ಭೂಮಿ ಪೂಜೆ ನೆರವೇರಿಸಲಾಯಿತು. ತಲ್ತರೆಶೆಟ್ಟಳ್ಳಿಯ ನಿತಿನ್ ಪೂಜಾರಿ ಪೂಜಾ ಕಾರ್ಯ ನೆರವೇರಿಸಿದರು.

ಈ ಸಂದರ್ಭದಲ್ಲಿ ನೇರುಗಳಲೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪುಷ್ಪ, ಅರೆಯೂರು ಲೋಕನಾಥ್, ಕಿರಣ್ ಅರೆಯೂರು, ಕುಮಾರ್ ಅರೆಯೂರು, ತಿಮ್ಮಯ್ಯ ಮೋರಿಕಲ್ಲು, ವಸಂತ ಆಚಾರ್ಯ ಕಾಜೂರು, ರಕ್ಷಣಾ ವೇದಿಕೆ ಅಧ್ಯಕ್ಷ ದೀಪಕ್ ಕನ್ನಡಿಗ, ಕಿರಣ್ ಹೊಸಳ್ಳಿ, ನೇಗಳ್ಳಿಯ ರಾಮ್‌ದೇವ್, ಮುತ್ತಣ್ಣ, ದಂತೇಶ್, ಮನು ಗೌಡ, ದೀಪು ಅಬ್ಬೂರುಕಟ್ಟೆ, ನಾರಾಯಣ ರೈ ಅಬ್ಬೂರುಕಟ್ಟೆ, ವಿನು ತಣ್ಣೀರುಹಳ್ಳ, ಕ್ಷೇತ್ರದ ಆಡಳಿತ ಧರ್ಮದರ್ಶಿ ರೋಹಿತ್ ಪೂಜಾರಿ, ಹರೀಶ್ ಪೂಜಾರಿ, ಭಕ್ತರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಾರ್ಷಿಕ ಕೋಲ

ಸ್ವಾಮಿ ಕೊರಗಜ್ಜ, ಪಾಷಾಣಮೂರ್ತಿ ಹಾಗೂ ಪರಿವಾರ ದೈವಗಳ ನಾಲ್ಕನೇ ವರ್ಷದ ಕೋಲೋತ್ಸವ ಮುಂಬರುವ ಮೇ ೧ ಹಾಗೂ ಎರಡರಂದು ನಡೆಯಲಿದೆ ಎಂದು ಧರ್ಮದರ್ಶಿಗಳು ತಿಳಿಸಿದ್ದಾರೆ.