ನಾಪೋಕ್ಲು, ಮಾ. ೧೭: ಚೇರಂಬಾಣೆಯ ಕಾರುಗುಂದ ಗೌಡ ಸಮಾಜದಲ್ಲಿ ಆಯೋಜಿಸಲಾಗಿದ್ದ ಚೇರಂಬಾಣೆಯ ಗೌಡ ಮಹಿಳಾ ಒಕ್ಕೂಟದ ಮೊದಲ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಸಮಾರಂಭದಲ್ಲಿ ಮಹಿಳಾ ಒಕ್ಕೂಟದಿಂದ ಗೌಡ ಜನಾಂಗದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಿಕ್ಷಣ ಕ್ಷೇತ್ರದಲ್ಲಿ ನಿವೃತ್ತ ಪ್ರಾಂಶುಪಾಲರು ಆನೆರ ಜಾನಕಿ, ಪೊಡನೋಳನ ನಳಿನಿ ಶಿವಾಜಿ ಸೇನಾ ಕ್ಷೇತ್ರ ನಿವೃತ್ತ ಸಿಆರ್‌ಪಿಎಫ್ ಕಡ್ಲೇರ ಧನವತಿ, ಸರಕಾರಿ ಕ್ಷೇತ್ರ ನಿವೃತ್ತ ಶಿರಸ್ತೇದಾರರು ಕಂದಾಯ ಇಲಾಖೆ , ಟಿ ಎ ಹೇಮಲತಾ ಸಾರ್ವಜನಿಕ ಕ್ಷೇತ್ರ, ಸಂಸ್ಥಾಪಕರು ಸಮೃದ್ಧಿ ಆಸ್ಪತ್ರೆ ಚೇರಂಬಾಣೆ, ಪಾರೆಮಜಲು ಸೀತಮ್ಮ ತಿಮ್ಮಯ್ಯ ಮುತ್ತಾರುಮುಡಿ ಶತಾಯುಷಿಗಳು. ಇವರನ್ನು ಮಹಿಳಾ ದಿನಾಚರಣೆಯ ಅಂಗವಾಗಿ ಗೌರವಿಸಿ ಸನ್ಮಾನಿಸಲಾಯಿತು.
ಚೇರಂಬಾಣೆಯ ಕಾರುಗುಂದ ಗೌಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಕಡ್ಲೆರ ತುಳಸಿ ಮೋಹನ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಚೆಟ್ಟಿಮಾನಿ ಗ್ರಾಮದ ನಿವೃತ್ತ ಪ್ರಾಧ್ಯಾಪಕಿ ಸುಳ್ಯಕೋಡಿ ಶಿವದೇವಿ ಅವನಿಶ್ಚಂದ್ರ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನ ಭರತ್, ಕೊಡಗು ದಕ್ಷಿಣ ಕನ್ನಡ ಒಕ್ಕಲಿಗ ಗೌಡ ಮಹಿಳಾ ಒಕ್ಕೂಟದ ಸ್ಥಾಪಕ ಅಧ್ಯಕ್ಷೆ ಪುದಿಯ ನೆರವನ ರೇವತಿ ರಮೇಶ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.