ಚೆಯ್ಯಂಡಾಣೆ, ಮಾ. ೧೭: ಎಡಪಾಲ ಸಮಸ್ತ ಕೋರ್ಡಿನೇಷನ್ ಸಮಿತಿ ವತಿಯಿಂದ ವಾರ್ಷಿಕ ಮಜ್ಲಿಸುನ್ನೂರ್ ಹಾಗೂ ಬೃಹತ್ ಇಫ್ತಾರ್ ಕೂಟ ಆಯೋಜಿಸಲಾಗಿತ್ತು.
ಶನಿವಾರ ಮಧ್ಯಾಹ್ನ ನಂತರ ಎಡಪಾಲ ಅಂಡತ್ಮಾನಿ ದರ್ಗಾ ಷರೀಫ್ನಲ್ಲಿ ಝಿಯಾರತ್ಗೆ ಹಾಗೂ ಜುಮಾ ಮಸೀದಿ ಆವರಣದಲ್ಲಿ ನಡೆದ ಮಜ್ಲಿಸುನ್ನೂರ್ ಅಧ್ಯಾತ್ಮಿಕ ಮಜ್ಲಿಸ್ಗೆ ಮುದರ್ರಿಸ್ ಶೈಖುನಾ ನಿಝಾರ್ ಫೈಝಿ ನೇತೃತ್ವ ವಹಿಸಿದ್ದರು.
ಪೊಯಾಪಳ್ಳಿ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಬಷೀರ್ ಹಾಜಿ ಕೆ.ಎ.ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕೊಡಗು ಜಿಲ್ಲಾ ನಾಇಬ್ ಖಾಝಿ ಹಾಗೂ ಸಮಸ್ತ ಮುಶಾವರ ಸದಸ್ಯರಾದ ಎಂ.ಎA.ಅಬ್ದುಲ್ಲಾ ಫೈಝಿ ಉದ್ಘಾಟಿಸಿ ಮಾತನಾಡಿದರು. ಎಸ್ ವೈಎಸ್ ಕೊಡಗು ಜಿಲ್ಲಾಧ್ಯಕ್ಷ ಸಿಪಿಎಂ ಬಷೀರ್ ಹಾಜಿ, ಎಡಪಾಲ ಎಸ್ ವೈ ಎಸ್ ನ ಕಾರ್ಯದರ್ಶಿ ಅಬೂಬಕ್ಕರ್ ಮುಸ್ಲಿಯಾರ್ ಕಾರ್ಯಕ್ರಮಕ್ಕೆ ಶುಭಹಾರೈಸಿ ಮಾತನಾಡಿದರು.
ಸಂಜೆ ೪ ಗಂಟೆಗೆ ಕೇರಳದ ಪ್ರಸಿದ್ಧ ವಾಗ್ಮಿ ಮೊಹಮ್ಮದ್ ಹನೀಫ್ ನಿಝಾಮಿ ಮುಖ್ಯ ಪ್ರಭಾಷಣ ನಡೆಸಿ ಹಿರಿಯರಿಗೆ ಗೌರವಕೊಟ್ಟು ಮುನ್ನೆಡೆಯಬೇಕು, ಇಸ್ಲಾಂಮಿನ ಆಚಾರ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬೇಕು,ದಾರಿ ತಪ್ಪುತಿರುವ ಯುವ ಸಮೂಹವನ್ನು ಸರಿ ದಾರಿಗೆ ಕೊಂಡೊಯ್ಯುವAತಾಗಬೇಕು ಎಂದ ಅವರು ಸೌಹಾರ್ದ ಇಫ್ತಾರ್ ಕೂಟ ಸಮಾಜಕ್ಕೆ ಮಾದರಿಯಾಗಿದೆ ಎಂದರು.
ಇದೆ ಸಂದರ್ಭ ಊರಿನ ಸಾಧನೆ ಮಾಡಿದ ಹಾಗೂ ಉನ್ನತ ಬಿರುದು ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ನೆರೆದಿದ್ದ ಸಹಸ್ರಾರು ಜನರು ಸಾಮೂಹಿಕ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.
ಈ ಸಂದರ್ಭ ಜಮಾಅತ್ ಉಪಾಧ್ಯಕ್ಷ ಉಮ್ಮರ್ ಹಾಜಿ (ಸಿಆರ್ ಪಿಎಫ್), ಪ್ರಧಾನ ಕಾರ್ಯದರ್ಶಿ ರಫೀಕ್, ಕೋಶಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯ ಮಮ್ಮದ್, ಕಡಂಗ ಮೊಯ್ಯದ್ದಿನ್ ಜಮಾಅತ್ ಅಧ್ಯಕ್ಷ ಅಬ್ದುಲ್ಲ, ಸದರ್ ಮೋಹಲೀಮ್ ಹಮೀದ್ ಫೈಝಿ, ಸಮಸ್ತ ಕೋಡಿನೇಷನ್ ಅಧ್ಯಕ್ಷ ಶಮೀಮ್, ಕಾರ್ಯದರ್ಶಿ ಜಲೀಲ್, ಕೋಶಾಧಿಕಾರಿ ಶರ್ಫುದ್ದಿನ್ ಹಾಗೂ ಧಾರ್ಮಿಕ, ಸಾಮಾಜಿಕ, ನೇತಾರರು ಉಪಸ್ಥಿತರಿದ್ದರು. ಹಾರಿಸ್ ದಾರಿಮಿ ಸ್ವಾಗತಿಸಿ, ಮಜೀದ್ ಮುಸ್ಲಿಯಾರ್ ಸರ್ವರನ್ನು ವಂದಿಸಿದರು.