ಮಡಿಕೇರಿ, ಮಾ. ೧೬: ಬೆಂಗಳೂರು ಕೊಡವ ಸಮಾಜದ ಆಶ್ರಯದಲ್ಲಿ ಯಲಹಂಕ ಹೊಸಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆದ ನಂಗಡ ನೆಲ - ನಂಗಡ ನಮ್ಮೆ ಕಾರ್ಯಕ್ರಮ ಸಂಭ್ರಮದ ತೆರೆ ಕಂಡಿತು. ಕಳೆದ ರಾತ್ರಿ ಹೊನಲು ಬೆಳಕಿನಲ್ಲಿ ಜರುಗಿದ ಪುರುಷರ ಹಾಕಿ, ಮಹಿಳಾ ಹಾಕಿ ಹಾಗೂ ಥ್ರೋಬಾಲ್ ಪಂದ್ಯಾವಳಿ ರೋಚಕವಾಗಿ ನಡೆದು ನೆರೆದಿದ್ದ ಸಾವಿರಾರು - ಮಂದಿ ಕ್ರೀಡಾಸಂಭ್ರಮದಲ್ಲಿ ಭಾಗಿಗಳಾದರು.

ಕ್ರೀಡಾ ಕಲರವದೊಂದಿಗೆ ವಿಶೇಷವಾಗಿ ವಾಲಗ ತಂಡಗಳ ವಾದ್ಯ ಪೈಪೋಟಿಯೂ ವಿಶೇಷ ಗಮನ ಸೆಳೆಯಿತು. ತಡರಾತ್ರಿ ೧೦.೩೦ ರ ವೇಳೆಗೆ ಪುರುಷರ ಹಾಕಿ ಫೈನಲ್ ಮುಕ್ತಾಯಗೊಳ್ಳುತ್ತಿದ್ದಂತೆ ಎರಡೂ ದಿನಗಳು ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಭಾಗಿಗಳಾಗಿ ದ್ದವರು ಕುಣಿದು ಕುಪ್ಪಳಿಸಿದರು. ಸಿಡಿಮದ್ದು ಪ್ರದರ್ಶನ, ಆಟ್ - ಪಾಟ್ - ಕೊಟ್ಟ್ನೊಂದಿಗೆ ಕೊಡಗಿನ ವಿಶೇಷ (!) ದೊಂದಿಗೆ ಯಲಹಂತ ಹೊಸಳ್ಳಿಯಲ್ಲಿ ಹೊಸತೊಂದು ವಾತಾವರಣ ನಿರ್ಮಾಣ ಗೊಂಡಿತ್ತು.

ಮುದ ನೀಡಿದ ವಾಲಗ ಸ್ಪರ್ಧೆ

ಕ್ರೀಡಾ ಸ್ಪರ್ಧೆಗಳ ನಡುವೆ ಪ್ರಥಮ ಬಾರಿಗೆ ನಡೆದ ವಾಲಗ ಸ್ಪರ್ಧೆಯಲ್ಲಿ ಕೊಂಬ್‌ಕೊಟ್ಟ್ ಸಹಿತವಾದ ಕೊಡವ ವಾಲಗ ಕಲೆಯ ೧೩ ಬಗೆಯ ಸ್ಪರ್ಧೆ ಆಕರ್ಷಕವಾಗಿತ್ತು. ಇಲ್ಲಿ ಕೇವಲ ಮೋರಿ, ಕೊಂಬು, ದೋಳು ಇಂತಹ ಪರಿಕರಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಈ ಕಾರ್ಯಕ್ರಮದ ಸಂದರ್ಭ ಮಾತನಾಡಿದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಅವರು ವಾಲಗ ಎಂಬದು ಕೊಡವ ಸಂಸ್ಕೃತಿಯ ಅವಿಭಾಜ್ಯ ಅಂಗ. ಹುಟ್ಟಿನಿಂದ ಸಾವಿನ ತನಕ ವಾಲಗದ ಬಳಕೆಯಿದೆ. ಈ ವಾದ್ಯ ಮಾಡುವ ಜನಾಂಗದವರೂ ನಮ್ಮೊಂದಿಗೆ ಸದಾ ಇರುವವರಾಗಿದ್ದು, ಜನಾಂಗದೊAದಿಗೆ ಬೆರೆತಿ ದ್ದಾರೆ. ಇವರಿಗೆ ಅಗತ್ಯ ಪ್ರೋತ್ಸಾಹ, ಉತ್ತೇಜನ ನೀಡಲು ಈ ಸ್ಪರ್ಧೆಯ ಚಿಂತನೆ ಮಾಡಲಾಗಿದ್ದು, ಸಮಾಜದ ಎಲ್ಲರೂ ಸಹಕರಿಸಿದ್ದಾರೆ. ಪ್ರಾಯೋಜ ಕತ್ವವನ್ನೂ ನೀಡಿದ್ದಾರೆ.

ಈ ಬಾರಿ ವಿಜೇತರಿಗೆ ೩೦ ಸಾವಿರ ಹಾಗೂ ಟ್ರೋಫಿ ನೀಡಲಾಗಿದ್ದು, ಮುಂದಿನ ವರ್ಷ ರೂ. ೧ ಲಕ್ಷ ಬಹುಮಾನ ನೀಡಲಾಗುವುದು ಎಂದರು. ವಾಲಗ ಸ್ಪರ್ಧೆಯ ತೀರ್ಪುಗಾರರಾಗಿ ಮಡಿಕೇರಿಯ ಮುದ್ದಂಡ ರಾಯ್ ತಮ್ಮಯ್ಯ ಹಾಗೂ ಉಡುವೆರ ಪವನ್‌ಕಾರ್ಯ ನಿರ್ವಹಿಸಿದರು.

ಕ್ರೀಡಾ ಸ್ಪರ್ಧೆ ವಿಜೇತರು

ಪುರುಷರ ಹಾಕಿ ಸ್ಪಧೆ ಪ್ರಥಮ : ಇಗ್ಗುತಪ್ಪ ಕೊಡವ ಸಂಘ, ಹನುಮಂತನಗರ. ದ್ವಿತೀಯ : ಜಯ ನಗರ ಕೊಡವ ಸಂಘ. ತೃತೀಯ : ಬಾಣಸವಾಡಿ ಕೊಡವ ಸಂಘ, ನಾಲ್ಕನೇ ಸ್ಥಾನ : ಸ್ನೇಹ ಕೂಟು ಕೊಡವ ಸಂಘ ತಿಪ್ಪೆಸಂದ್ರ

ಮಹಿಳಾ ಹಾಕಿ

ಪ್ರಥಮ : ಆರ್. ಆರ್. ನಗರ ಕೊಡವ ಸಂಘ, ದ್ವಿತೀಯ : ವಿದ್ಯಾರಣ್ಯಪುರಂ ಸಂಘ, ತೃತೀಯ : ತಿಪ್ಪಸಂದ್ರ ಸ್ನೇಹಕೂಟ, ನಾಲ್ಕನೆ ಸ್ಥಾನ : ಜಯನಗರ ಸಂಘ.

ಥ್ರೋಬಾಲ್

ಪ್ರಥಮ : ವಿದ್ಯಾರಣ್ಯಪುರ, ದ್ವಿತೀಯ : ಜಯನಗರ, ಸೆಮಿಫೈನಲಿಸ್ಟ್ : ಜಕ್ಕಸಂದ್ರ - ವಿವೇಕ್‌ನಗರ

ವಾಲಗ ಸ್ಪರ್ಧೆ

ಪ್ರಥಮ : ಚೆನ್ನಯ್ಯನಕೋಟೆ, ದ್ವಿತೀಯ : ಬಲಂಬೇರಿ, ತೃತೀಯ : ಚೆನ್ನಂಗಿ. - ಶಶಿ