ವೀರಾಜಪೇಟೆ, ಮಾ. ೧೬: ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವೀರಾಜಪೇಟೆ ಘಟಕದ ವತಿಯಿಂದ ನಡೆಸಲಾಗುವ ೧೫ನೇ ವರ್ಷದ ಕ್ರಿಕೆಟ್ ಪಂದ್ಯಾಟದ ಲೋಗೋವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಅವರು ಶಾಸಕರ ಗೃಹ ಕಚೇರಿಯಲ್ಲಿ ಬಿಡುಗಡೆಗೊಳಿಸಿದರು.
ಇದೇ ಸಂದರ್ಭ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಸದಸ್ಯರುಗಳು, ಕೊಡಗಿನ ಕ್ರೆöÊಸ್ತ ದೇವಾಲಯಗಳಿಗೆ ಅಲ್ಪಸಂಖ್ಯಾತ ಘಟಕದಿಂದ ಅನುದಾನವನ್ನು ನೀಡಿದಂತಹ ಮುಖ್ಯಮಂತ್ರಿಗಳಿಗೂ, ಹಾಗೂ ಶಾಸಕರಿಗೂ ಕ್ರೆöÊಸ್ತ ಧರ್ಮದವರ ಪರವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಉಪಾಧ್ಯಕ್ಷ ಜೋಕಿಮ್ ರೋಡ್ರಿಗಸ್, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮರ್ವಿನ್ ಲೋಬೋ, ಜೂಡಿವಾಸ್ ಸೇರಿದಂತೆ ಪದಾಧಿಕಾರಿಗಳು ಇದ್ದರು.