ಗೋಣಿಕೊಪ್ಪಲು, ಮಾ. ೧೬: ಕೊಡಗಿನ ಗಡಿ ಭಾಗ ಕುಟ್ಟ ಸುಂದರ ಪರಿಸರದ ನಡುವೆ ಅತಿ ಎತ್ತರದ ಗರುಡಗಿರಿಯಲ್ಲಿ ಶ್ರೀಕೃಷ್ಣನ ದೇವಾಲಯ ನಿರ್ಮಾಣವಾಗಿದ್ದು ಇದರ ೨ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮವು ಮಾ.೨೨ರಂದು ಮುಂಜಾನೆ ೬ ಗಂಟೆಯಿAದ ರಾತ್ರಿ ೭.೩೦ ಗಂಟೆವರೆಗೆ ನೆರವೇರಲಿದೆ.

ಕಳೆದ ೧ ವರ್ಷದ ಹಿಂದೆ ೩.೬೦ ಕೋಟಿ ವೆಚ್ಚದಲ್ಲಿ ದಾನಿಗಳ ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ೪೦ ವರ್ಷಕ್ಕೂ ಅಧಿಕ ಇತಿಹಾಸವಿರುವ ಶ್ರೀ ಕೃಷ್ಣನ ದೇವಾಲಯ ನಿರ್ಮಾಣಗೊಂಡಿತ್ತು. ಸುಮಾರು ೧ ಏಕರೆ ವಿಸ್ತೀರ್ಣದಲ್ಲಿ ದೇವಾಲಯವು ನೆಲೆ ನಿಂತಿದೆ. ದಾನಿಗಳ ಹಾಗೂ ಭಕ್ತರ ಸಹಾಯದಿಂದ ದೇವಾಲಯವು ಹಂತ ಹಂತವಾಗಿ ಅಭಿವೃದ್ದಿಯನ್ನು ಕಾಣುತ್ತಿದೆ.

೪೦ ವರ್ಷದ ಕನಸಾಗಿದ್ದ ಶ್ರೀ ಕೃಷ್ಣನ ದೇವಾಲಯವು ಕಳೆದ ೨ ವರ್ಷದ ಹಿಂದೆ ಸ್ಥಾಪನೆಗೊಂಡು ಶ್ರೀ ಕೃಷ್ಣ ದೇವಸ್ಥಾನ ಟ್ರಸ್ಟ್ನ ಆಡಳಿತ ಮಂಡಳಿಯ ಶ್ರಮದೊಂದಿಗೆ ಮುನ್ನಡೆಯುತ್ತಿದೆ. ಭಕ್ತರಿಗೆ ಶ್ರೀ ಕೃಷ್ಣನ ದರ್ಶನ ಮಾಡಲು ಪ್ರತಿನಿತ್ಯ ವಿಶೇಷ ಪೂಜೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಅತೀ ಎತ್ತರದ ಪ್ರದೇಶವಾದ ‘ಗರುಡಗಿರಿ’ ಶ್ರೀ ಕೃಷ್ಣನ ನೆಲೆಯಾಗಿದೆ. ಕುಟ್ಟ,ಬಾಡಗ,ತೈಲ, ಹಾಗೂ ಮಂಚಳ್ಳಿ ಗ್ರಾಮಕ್ಕೆ ಒಳಪಡುವ ಈ ದೇವಾಲಯಕ್ಕೆ ಸುತ್ತಮುತ್ತಲಿನ ಗ್ರಾಮಗಳು ಸೇರಿದಂತೆ ಹೊರ ಜಿಲ್ಲೆಯಿಂದಲೂ ಭಕ್ತರು ಶ್ರೀ ಕೃಷ್ಣನ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ. ಕರ್ನಾಟಕ ಕೇರಳ ಗಡಿ ಭಾಗವಾದ ಕುಟ್ಟ ಪಟ್ಟಣದ ಹೃದಯ ಭಾಗದಲ್ಲಿ ಶ್ರೀಕೃಷ್ಣನ ದೇವಾಲಯ ನಿರ್ಮಾಣವಾಗಿದ್ದು ಈ ದೇವಾಲಯವು ಧಾರ್ಮಿಕ ಕೇಂದ್ರವಾಗಿದೆ.

ಪ್ರಸ್ತುತ ದೇವಾಲಯ ಸಮಿತಿಯಲ್ಲಿ ಅಧ್ಯಕ್ಷರಾಗಿ ತೀತಿರ ನರೇನ್ ಬಾಲಕೃಷ್ಣ ಜವಾಬ್ದಾರಿ ನಿಭಾಯಿಸುತ್ತಿದ್ದು ಉಪಾಧ್ಯಕ್ಷರಾಗಿ ಮಚ್ಚಮಾಡ ಬಿ.ಸುಬ್ಬಯ್ಯ, ಕಾರ್ಯದರ್ಶಿಯಾಗಿ ಚೋಡುಮಾಡ ಶರೀನ್ ಸುಬ್ಬಯ್ಯ, ಖಜಾಂಚಿಯಾಗಿ ತೀತಿರ ಎ.ಕಾರ್ಯಪ್ಪ, ಕಾನೂನು ಸಲಹೆಗಾರರಾಗಿ ಗಿರೀಶ್ ಅಣ್ಣಯ್ಯ, ನಿರ್ದೇಶಕರುಗಳಾಗಿ ಅಜ್ಜಿಕುಟ್ಟಿರ ಎಸ್.ಬೋಪಣ್ಣ, ಮಚ್ಚಮಾಡ ಕಾಶಿ ಕಾರ್ಯಪ್ಪ, ತೀತಿರ ಕೆ.ಕುಶಾಲಪ್ಪ, ತೀತಿರ ತೀರ್ಥ ಮಂಜುನಾಥ್,ಮುಕ್ಕಾಟಿರ ಎಸ್.ಅಯ್ಯಪ್ಪ, ಕಟ್ಟೆರ ರಮೇಶ್ ದೇವಯ್ಯ, ಧ್ಯಾನ್ ದರ್ಶನ್, ಪ್ರಶಾಂತ್, ಚಂದ್ರ ಕುಟ್ಟನ್, ಜಾನ್ಸನ್, ಹಾಗೂ ಡಿ.ಟಿ.ರವಿ, ದೇವಾಲಯದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.

ದೇವಾಲಯದ ಮೇಲ್ಭಾಗದಿಂದ ಇಡಿ ಕುಟ್ಟ ಪಟ್ಟಣವನ್ನು ವೀಕ್ಷಿಸಬಹುದಾಗಿದೆ. ಗಿರಿಕಂದರಗಳು ನೋಡುಗರನ್ನು ಗಮನ ಸೆಳೆಯುತ್ತಿದೆ. ಶ್ರೀಕೃಷ್ಣನ ದೇವಾಲಯಕ್ಕೆ ಮೆಟ್ಟಿಲು ಹಾಗೂ ವಾಹನದ ಮೂಲಕ ಪ್ರವೇಶ ಮಾಡಬಹುದಾಗಿದೆ.

ಗಡಿ ಭಾಗವಾದ ಕುಟ್ಟ ಪಟ್ಟಣದ ಸುತ್ತಮುತ್ತಲಿನಲ್ಲಿ ಕಾಫಿ ಬೆಳೆಗಾರರು,ರೈತರು ಸೇರಿದಂತೆ ಕಾರ್ಮಿಕರು ಹೆಚ್ಚಾಗಿ ವಾಸಿಸುತ್ತಿದ್ದಾರೆ. ಶ್ರೀಕೃಷ್ಣ ದೇವಾಲಯವು ಕುಟ್ಟ ಪಟ್ಟಣದ ಹೃದಯ ಭಾಗದಲ್ಲೇ ಇರುವುದು ಮತ್ತೊಂದು ವಿಶೇಷವಾಗಿದೆ.

ಕಳೆದೆರಡು ವರ್ಷಗಳಿಂದ ದೇವಾಲಯದ ಅರ್ಚಕರಾಗಿ ಕೆ.ಆರ್.ಮೋಹನ್ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇವಾಲಯದ ಆವರಣದಲ್ಲಿ ನೂತನ ಸಭಾಂಗಣ ನಿರ್ಮಾಣವಾಗಿದೆ. ಇದರಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿದೆ. ದೇವಾಲಯದ ಮುಖ್ಯ ದ್ವಾರದಲ್ಲಿ ನೂತನವಾದ ಹೆಬ್ಬಾಗಿಲನ್ನು ನಿರ್ಮಾಣ ಮಾಡಲಾಗುತ್ತಿದ್ದು ಈ ಮಾರ್ಗದಿಂದ ದೇವಾಲಯಕ್ಕೆ ವಾಹನದ ಮೂಲಕ ಪ್ರವೇಶ ಪಡೆಯಬಹುದಾಗಿದೆ.

ಪೂಜಾ ಕಾರ್ಯಗಳು

೨ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ತಾ. ೨೨ ರ ಬೆಳಿಗ್ಗೆ ೬.೩೦ಕ್ಕೆ ದೇವತಾ ಪ್ರಾರ್ಥನೆ, ೭.೧೫ಕ್ಕೆ ದೇವರಿಗೆ ಬೆಳಗಿನ ಉಷಾ ಪೂಜೆ, ಅಭಿಷೇಕ,೧೦ ಗಂಟೆಗೆ ವಿಷ್ಣು ಸಹಸ್ರನಾಮ ಹೋಮ, ೧೨.೩೦ಕ್ಕೆ ಶ್ರೀ ಗೋಪಾಲಕೃಷ್ಣ ದೇವರಿಗೆ ಸರ್ವಾಲಂಕಾರ ಮಹಾಪೂಜೆ ಹಾಗೂ ಗಣಪತಿ ಸಾನಿಧ್ಯದಲ್ಲಿ ದ್ವಾದಶ ನಾರಿಕೇಳ ಗಣಯಾಗ, ನಾಗದೇವರ ಸಾನಿಧ್ಯದಲ್ಲಿ ಪಂಚಾಮೃತ ಅಭಿಷೇಕ, ಕಳಶಾಭಿಷೇಕ, ಮಹಾಪೂಜೆ, ಕರಂಗಾಳಿ ನಡೆಯಲ್ಲಿ ಅಲಂಕಾರ ಪೂಜೆ, ಮಧ್ಯಾಹ್ನ ೧ ಗಂಟೆಗೆ ಅನ್ನ ಸಂತರ್ಪಣೆ, ಸಂಜೆ ೫.೩೦ರಿಂದ ರಂಗಪೂಜೆ, ರಾತ್ರಿ ೭.೩೦ರಿಂದ ಆರ್ಟ್ ಆಫ್ ಲೀವಿಂಗ್‌ರವರಿAದ ಸತ್ಸಂಗ ಕಾರ್ಯಕ್ರಮ ನಡೆಯಲಿದೆ.

- ಹೆಚ್.ಕೆ.ಜಗದೀಶ್