ವೀರಾಜಪೇಟೆ, ಮಾ. ೧೬: ಕುಶಾಲನಗರ ತಾಲೂಕಿನ ಚೆಟ್ಟಳ್ಳಿಯ ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನದ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆಯಿತು.

ವಿವಿಧ ಜನಾಂಗಗಳ ನಡುವೆ ಸಾಮರಸ್ಯದ ಜೀವನ ನಡೆಸುತ್ತಿರುವ ಗೌಡ ಜನಾಂಗದ ಕನಸಿನ ನೂತನ ಗೌಡ ಸಮುದಾಯ ಭವನವನ್ನು ವಿಧಾನಸಭೆಯ ಮಾಜಿ ಅಧ್ಯಕ್ಷ ಕೊಂಬಾರನ ಜಿ.ಬೋಪಯ್ಯ ಅವರು ಲೋಕಾರ್ಪಣೆಗೊಳಿಸಿದರು.

೧೭ ವರುಷಗಳ ನಿರಂತರ ಶ್ರಮದ ಹಾಗೂ ದಾನಿಗಳ ನೆರವಿನ ಫಲವಾಗಿ ಇಂದು ಭವ್ಯವಾದ ಭವನ ನಿರ್ಮಾಣವಾಗಿದ್ದು ಚೇರಳ ಭಾಗದ ಗೌಡ ಸಮುದಾಯದ ಹೆಗ್ಗಳಿಕೆಗೆ ಸಾಕ್ಷಿಯಾಯಿತು. ಕೊಡಗಿನ ಗೌಡ ಸಂಪ್ರದಾಯದAತೆ ಭವನ ಉದ್ಘಾಟನಾ ಕಾರ್ಯಕ್ರಮ ನಡೆದು ಗೌಡ ಜನಾಂಗದವರು ತಮ್ಮ ಸಾಂಪ್ರಾದಾಯಿಕ ಉಡುಪಿನಲ್ಲಿ ಕಂಗೊಳಿಸಿದರು.

ತಮ್ಮ ಆಚಾರ ವಿಚಾರಗಳು ಮುಂದಿನ ಪೀಳಿಗೆಗೆ ತಿಳಿಯುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದಲ್ಲದೆ ತವರು ನೆಲದಲ್ಲಿ ಪ್ರತಿ ಹೆಣ್ಣುಮಕ್ಕಳಿಗೆ ಗೌರವ ದೊರಕಬೇಕು ಎನ್ನುವ ನಿಟ್ಟಿನಲ್ಲಿ ಚೇರಳ ಭಾಗಕ್ಕೆ ಸೇರಿದ ೨೨ ಗೌಡ ಕುಟುಂಬಗಳಿAದ ಮದುವೆಯಾಗಿ ತೆರಳಿದ ಮಹಿಳೆಯರನ್ನು ತವರೂರಿನಲ್ಲಿ ಆತ್ಮಿಯವಾಗಿ ಸನ್ಮಾನಿಸಿ, ಗೌರವ ಸೂಚಿಸಿ ಒಂದು ವಿನೂತನ ಕಾರ್ಯಕ್ರಮಕ್ಕೆ ಭಾಷ್ಯ ಬರೆದರು.

ಕಾರ್ಯಕ್ರಮವನ್ನು ಸಾಕ್ಷೀಕರಿಸಲು ಜಿಲ್ಲೆಯ ವಿವಿಧೆಡೆಗಳಿಂದ ಗೌಡ ಸಮುದಾಯಗಳ ವಿವಿಧ ಸಂಘಟನೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಚೇರಳ ಭಾಗದ ಸುತ್ತಮುತ್ತಲಿನ ಸಮುದಾಯ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮದ ಯಶಸ್ಸಿಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಸಮುದಾಯ ಭವನಕ್ಕೆ ಧನಸಹಾಯ ೪ಆರನೇ ಪುಟಕ್ಕೆ

ನೀಡಿದವರನ್ನು, ಕಟ್ಟಡ ನಿರ್ಮಾಣದ ಕನಸು ಹೊತ್ತು ಸದಾ ಕೈ ಜೋಡಿಸಿದ ಮಹನೀಯರನ್ನು, ಗೌಡ ಸಮಾಜದ ಸಭೆ ನಡೆಸಲು ಸ್ಥಳಾವಕಾಶ ಮಾಡಿದವರನ್ನು, ಕಟ್ಟಡ ನಿರ್ಮಿಸಿದ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು.

ಕಟ್ಟಡ ನಿರ್ಮಾಣ ಕತೃಗಳಾದ ಕೆಮ್ಮಾರನ ಸುರೇಶ್, ನೂಜಿಬೈಲು ಗಣಪತಿ, ಕೋಳಿಮಾಡು ಪಾಪು ಉತ್ತಪ್ಪ, ಸಮಾಜಕ್ಕೆ ಅತಿ ಹೆಚ್ಚಿನ ಧನಸಹಾಯ ನೀಡಿದ ಹೊಸಮನೆ ಪೂವಯ್ಯ ಅವರ ಪರವಾಗಿ ಮಗ ಜಿತೇಂದ್ರ, ಪೇರಿಯನ ಉದಯಕುಮಾರ್, ಗೌಡ ಸಮಾಜದ ಸಂಸ್ಥಾಪಕರಾದ ಮರದಾಳು ಉಲ್ಲಾಸ, ಮರದಾಳು ಗೋಪಾಲ, ಮರದಾಳು ಜನಾರ್ಧನ, ಪೇರಿಯನ ಪ್ರಕಾಶ್ ಸೇರಿದಂತೆ ಗಣ್ಯರುಗಳನ್ನು ಸನ್ಮಾನಿಸಲಾಯಿತು. ಇಡೀ ಕಾರ್ಯಕ್ರಮದ ತುಂಬೆಲ್ಲಾ ಸನ್ಮಾನ, ಗೌರವಾರ್ಪಣೆಯ ಮೂಲಕ ಸಮುದಾಯ ಭವನದ ನಿರ್ಮಾಣಕ್ಕೆ ಕಾರಣಕರ್ತರಾದವರಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಭವನ ಸ್ವಾಭಿಮಾನದ ಪ್ರತೀಕ

ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಗೌಡ ಸಮುದಾಯ ಎಲ್ಲಾ ಕ್ಷೇತ್ರಗಳಿಗೂ ತನ್ನದೇ ಆದ ಕೊಡುಗೆ ನೀಡಿದೆ. ಸಮುದಾಯ ಭವನ ನಿರ್ಮಾಣ ಮಾಡುವುದರ ಮೂಲಕ ಈ ಗ್ರಾಮದ ಗೌಡ ಜನಾಂಗ ಬಾಂಧವರ ಮೂಲ ಉದ್ದೇಶ ಈಡೇರಿದಂತಾಗಿದ್ದು ಗೌಡರ ಅಸ್ತಿತ್ವ ಕಾಣುವಂತಾಗಿದೆ. ಈ ನೂತನ ಸಮುದಾಯ ಭವನ ಇಲ್ಲಿನ ಎಲ್ಲ ಜನಾಂಗದವರಿಗೂ ಸದುಪಯೋಗ ಆಗುವಂತಾಗಲಿ ಎಂದು ಆಶಿಸಿದರು.

ಸ್ವಾಭಿಮಾನದ ಪ್ರತೀಕವಾಗಿ ಸ್ವಂತ ಕಟ್ಟಡವನ್ನು ಪ್ರಾರಂಭಿಸಿರುವುದು ಸಮುದಾಯಕ್ಕೆ ಹೆಮ್ಮೆಯ ಸಂಗತಿ. ಈ ಎಲ್ಲಾ ಕಾರ್ಯಗಳಿಗೆ ಸಮುದಾಯದ ಹಿರಿಯರ ಪ್ರೋತ್ಸಾಹ, ಸದಸ್ಯರೆಲ್ಲರ ಕಾರ್ಯ ಚಟುವಟಿಕೆ ಮುಖ್ಯ ಕಾರಣ. ಪ್ರತಿಯೊಬ್ಬ ನಾಗರಿಕನಿಗೆ ಆರ್ಥಿಕ ಚೈತನ್ಯ ನೀಡುವ ನಿಟ್ಟಿನಲ್ಲಿ ಸಮಾಜದ ಒಗ್ಗಟ್ಟು ಒಳಿತನ್ನು ಕೂಡ ಕಾಪಾಡುವ ಮತ್ತು ಸಾಂಪ್ರದಾಯಿಕ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಈ ಸಮುದಾಯ ಒಕ್ಕೂಟ ಸಹಕಾರವಾಗಲಿ ಎಂದು ಆಶಯ ವ್ಯಕ್ತಪಡಿಸಿದರು.

ಇಲ್ಲಿ ಎಲ್ಲರೂ ಹೊಂದಾಣಿಕೆಯಿAದ ಬದುಕಬೇಕು. ವಿಶ್ವಾಸದಿಂದ ಕೆಲಸ ಮಾಡಿದ ಪರಿಣಾಮ ಇಲ್ಲಿ ಸಮುದಾಯ ಭವನ ಎದ್ದು ನಿಂತಿದೆ. ಇವರ ಪ್ರಯತ್ನವನ್ನು ಎಲ್ಲರೂ ಅಭಿನಂದಿಸಬೇಕಾಗಿದೆ. ಗೌಡ ಸಮುದಾಯ ಸಮಾಜದಲ್ಲಿರುವ ಇತರ ಸಮುದಾಯದೊಂದಿಗೆ ಸೌರ್ಹಾದತೆಯಿಂದ ಇದ್ದಾರೆ. ಇತರ ಸಮುದಾಯಗಳ ನಡುವೆ ಭಾವನಾತ್ಮಕ ಸಂಬAಧ ಅಗತ್ಯ. ಜನಾಂಗದ ಸಂಸ್ಕöÈತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ನಾವು ಮಾಡಬೇಕು ಎಂದು ಹೇಳಿದರು.

ರಾಜಕಾರಣಿಗಳು ರಾಜಕೀಯ ಮಾಡುತ್ತಾರೆ. ರಾಜಕೀಯ ಚುನಾವಣೆಗೆ ಸೀಮಿತವಾಗಬೇಕೆ ಹೊರತು ಜೀವನಕ್ಕಲ್ಲ. ನಿಜಜೀವನದಲ್ಲಿ ಜಾತಿ, ಮತ, ಧರ್ಮವೆನ್ನುವ ಭೇದ ಭಾವ ಮರೆತು ಸದಾ ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯಬೇಕು. ಈ ಸಮುದಾಯ ಭವನ ಎಲ್ಲಾ ಜನಾಂಗ ಬಾಂದವರಿಗೆ ದೊರಕುವಂತಾಗಿ ಚೇರಳ ಗ್ರಾಮ ವಿಶ್ವಮಾನವ ಸಂದೇಶ ಸಾರುವಂತಾಗಬೇಕು ಎಂದರಲ್ಲದೆ ಸಮುದಾಯ ಭವನ ನಿರ್ಮಾಣದ ಜವಬ್ದಾರಿ ಹೊತ್ತು ಹಗಲು, ರಾತ್ರಿ ಶ್ರಮಿಸಿದವರನ್ನು ಶ್ಲಾಘಿಸಿದರು.

ಸೌಹಾರ್ದತೆಗಾಗಿ ಸಂಘಟನೆಗಳು

ವಿಧಾನಸಭೆ ಮಾಜಿ ಸಭಾಪತಿ ಕೆ.ಜಿ. ಬೋಪಯ್ಯ ಮಾತನಾಡಿ, ಸುಮಾರು ೧೭ ವರ್ಷಗಳ ಸತತ ಪ್ರಯತ್ನದ ನಂತರ ನೂತನ ಭವ್ಯವಾದ ಸಮುದಾಯ ಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ. ಸಮಾಜ, ಸಂಘಟನೆಗಳು ಇತರ ಜಾತಿಗಳೊಂದಿಗೆ ಸಂಘರ್ಷಕ್ಕಾಗಿಯೋ, ಸವಾಲಿಗಾಗಿಯೋ ಅಲ್ಲ. ಬದಲು ತಮ್ಮ ಆಚಾರ ವಿಚಾರಗಳನ್ನು ಉಳಿಸುತ್ತಾ ಸಮಾಜದಲ್ಲಿ ಸೌಹಾರ್ದತೆಯಿಂದ ಕೂಡಿ ಬಾಳಿ ಬದುಕುವುದಕ್ಕಾಗಿ. ತಮ್ಮ ಆಚಾರ, ವಿಚಾರ ಪದ್ದತಿ ಪರಂಪರೆಯನ್ನು ಉಳಿಸಿ ಬೆಳೆಸುವುದಕ್ಕಾಗಿ. ಇಲ್ಲಿ ಸೇರಿರುವ ಪ್ರತಿಯೊಬ್ಬರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಭಾಗವಹಿಸಿ ಜನಾಂಗದ ಹಿರಿಮೆಯನ್ನು ಕಾಪಾಡಿದಂತಾಗಿದೆ. ಇದು ಎಲ್ಲ ಸಮಾಜದವರಿಗೂ ಮಾದರಿಯಾಗಿದೆ ಎಂದರಲ್ಲದೆ ನಮ್ಮ ಸಂಪ್ರದಾಯದ ಬೆಳವಣಿಗೆಗೆ ಪೂರಕವಾಗಿ ಸಮುದಾಯ ಭವನ ತಲೆಯೆತ್ತಿದೆ. ಇದು ಇಲ್ಲಿನ ಎಲ್ಲ ಸಮುದಾಯ ಬಾಂಧವರಿಗೂ ದೊರಕುವಂತಾಗಿ ಸಹಬಾಳ್ವೆಯಿಂದ ಜೀವನ ಸಾಗಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಬೇಧ - ಭಾವ ಇರಬಾರದು

ಮಾಜಿ ಸಚಿವ ಮಂಡೇಪAಡ ಪಿ. ಅಪ್ಪಚ್ಚುರಂಜನ್ ಮಾತನಾಡಿ ನಾವೆಲ್ಲರೂ ಅನ್ಯೋನ್ಯತೆಯಿಂದ ಬಾಳಬೇಕು. ಗೌಡ ಮತ್ತು ಕೊಡವ ಸಮುದಾಯದ ನಡುವೆ ಉತ್ತಮ ಬಾಂಧವ್ಯವಿದ್ದು ಮದುವೆಯಂತಹ ಸಂಬAಧಗಳಿವೆ. ಹಾಗಿರುವಾಗ ನಾವೆಲ್ಲರೂ ಒಗ್ಗಟ್ಟಾಗಿ ಬದುಕಬೇಕು. ಇಲ್ಲಿ ಬೇಧ ಭಾವ ಕಾಣಬಾರದು ನಾವೆಲ್ಲರೂ ಒಂದಾಗಿ ಬಾಳಬೇಕು. ಈ ಸಮಾಜ ಎಲ್ಲರಿಗೂ ದೊರಕುವಂತಾಗಬೇಕು. ಈ ಹಿಂದೆ ಇಲ್ಲಿನ ಅನೇಕ ಕುಟುಂಬಗಳಿಗೆ ತಾವು ವಾಸವಿರುವ ಸ್ಥಳಗಳಿಗೆ ಹಕ್ಕುಪತ್ರಗಳನ್ನು ನೀಡಲಾಗಿದೆ. ಆ ಸ್ಥಳವನ್ನು ಯಾರಿಗೂ ಮಾರಾಟ ಮಾಡದೆ ಉಳಿಸಿಕೊಂಡು ಹೋಗುವಂತಾಗಬೇಕು ಎಂದು ಕಿವಿಮಾತನ್ನು ಹೇಳಿದರು.

ದಾನ ಮಾಡಿದರೆ ಸಮಾಜ ಬೆಳೆಯಲು ಸಾಧ್ಯ

ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಮಾತನಾಡಿ ಗೌಡ ಸಮಾಜದ ನೂತನ ಕಟ್ಟಡ ಕಾಮಗಾರಿ ನಡೆದುಬಂದ ಹಾದಿ ಬಗ್ಗೆ ವಿವರಿಸಿದರಲ್ಲದೆ, ಪ್ರತಿಯೊಬ್ಬರೂ ತಮ್ಮಿಂದ ಆದಷ್ಟು ಅಳಿಲು ಸೇವೆಯನ್ನು ಸಮಾಜದ ಉಳಿವಿಗಾಗಿ ಮಾಡಬೇಕು. ದಾನ ಮಾಡಿದರೆ ಮಾತ್ರ ಸಮಾಜ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಇಂದಿನಿAದಲೇ ಎಲ್ಲರೂ ಒಂದಷ್ಟು ಹಣವನ್ನು ಸಮಾಜದ ಏಳಿಗೆಗೆ ಅಂತ ಮೀಸಲಿಡುವಂತೆ ಕರೆ ನೀಡಿದರು.

ಉಪಾಧ್ಯಕ್ಷ ಡಾ.ತೇನನ ರಾಜೇಶ್, ಮಾತನಾಡಿ ಕೆದಂಬಾಡಿ ರಾಮಯ್ಯ ಮತ್ತು ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ಅವರ ಫೋಟೊವನ್ನು ಸಮುದಾಯ ಭವನದಲ್ಲಿ ಅಳವಡಿಸುವಂತೆ ತಿಳಿಸಿದರಲ್ಲದೆ ಗೌಡ ಸಮುದಾಯದ ಪರಂಪರೆಯನ್ನು ಮುಂದುವರಿಸಿಕೊAಡು ಹೋಗುವುದರ ಜೊತೆಗೆ ನಮ್ಮಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಬೇಕು ಎಂದರು.ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷ ಪೇರಿಯನ ಜಯಾನಂದ ಅವರು ನೂತನ ಸಮುದಾಯದ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು.

ಸ್ಥಳೀಯರು, ಜಿ.ಪಂ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ ಶ್ರಮಜೀವಿಗಳಾದ ಗೌಡ ಜನಾಂಗ ಬಾಂಧವರು ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ. ತಮ್ಮಲ್ಲಿರುವ ತುಂಡುಭೂಮಿಯನ್ನು ಇತರರಿಗೆ ಮಾರಿ ಬೆಂಗಳೂರಿಗೆ ಹತ್ತುವವರ ಮಧ್ಯೆ ತಮಗೆ ಇರುವ ಭೂಮಿಯನ್ನು ರಕ್ಷಣೆ ಮಾಡಿಕೊಂಡು ತಮ್ಮ ಆಚಾರ ವಿಚಾರವನ್ನು ಪಾಲಿಸಿಕೊಂಡು ಸಂಸ್ಕೃತಿ ನಾಶವಾಗದ ಹಾಗೆ ನೋಡಿಕೊಂಡು ಬಾಳುತ್ತಿರುವ ಗೌಡ ಜನಾಂಗದವರ ಶ್ರಮ ನಿಜಕ್ಕೂ ಅಭಿನಂದನಾರ್ಹ. ಇಲ್ಲಿ ಜಾತಿ ಬೇಧಗಳಿಗೆ ಅವಕಾಶವಿಲ್ಲ. ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬAತೆ ಬಾಳಬೇಕು ಎಂದರು.

ಚೇರಳ ಗೌಡ ಸಮಾಜದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದಾನಿಗಳು, ಸಮಾಜದ ಬಾಂಧವರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ನೂತನ ಸಮುದಾಯ ಭವನವನ್ನು ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ. ೧.೭೫ ಕೋಟಿ ರೂ. ವೆಚ್ಚದ ಕಟ್ಟಡ ಇದಾಗಿದ್ದು, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೫ ಗ್ರಾಮಗಳ ಪೈಕಿ ಚೇರಳ ಗ್ರಾಮದ ಆಗ್ನೇಯ ಭಾಗದಲ್ಲಿ ನೆಲೆಸಿರುವ ೨೨ ಕುಟುಂಬದ ಗೌಡ ಸಮುದಾಯದ ಸಮಾನ ಮನಸ್ಕ ಬಂಧುಗಳು ೨೦೦೮ರಲ್ಲಿ ಮರದಾಳು ದೊಡ್ಡ ಮನೆಯಲ್ಲಿ ಸಭೆ ಸೇರಿ ಒಂದು ಸಂಘವನ್ನು ರಚಿಸಲಾಯಿತು. ಇದಕ್ಕೆ ಚೇರಳ ಗೌಡ ಸಂಘ ಎಂದು ಹೆಸರಿಡಲಾಯಿತು ಎಂದರು.

ಮೂರು ವರ್ಷಗಳ ಸತತ ಪ್ರಯತ್ನದ ನಂತರ ಚೇರಳ ಗೌಡ ಸಂಘಕ್ಕಾಗಿ ೨೦೧೧ರಲ್ಲಿ ಸೂಕ್ತ ನಿವೇಶನವನ್ನು ಖರೀದಿ ಮಾಡಲಾಯಿತು. ಸರಕಾರದ ಮಟ್ಟದಲ್ಲಿ ಚೇರಳ ಗೌಡ ಸಮಾಜ ಸಮುದಾಯ ಭವನ ಎಂದು ನೋಂದಣಿ ಮಾಡಲಾಯಿತು. ನಿವೇಶನಕ್ಕೆ ಬೇಕಾದ ಹಣವನ್ನು ಸಮಾಜದ ಪ್ರತಿಯೊಂದು ಕುಟುಂಬದಿAದ ದಾನದ ರೂಪದಲ್ಲಿ ಸಂಗ್ರಹಿಸಲಾಯಿತು.

೨೦೧೧ರಲ್ಲಿ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಯಿತು. ಸದಸ್ಯರು ನೀಡಿದ ದಾನದ ಹಣದಿಂದ ಕಟ್ಟಡ ನಿರ್ಮಾಣ ಪ್ರಾರಂಭವಾಯಿತು. ಸರಕಾರದ ಹಿಂದುಳಿದ ವರ್ಗಗಳ ಇಲಾಖೆಯಿಂದ, ಜಿಲ್ಲೆಯ ಹಾಗೂ ಇತರ ಜಿಲ್ಲೆಗಳಲ್ಲಿ ನೆಲೆಸಿರುವ ಗೌಡ ಸಮುದಾಯದ ಮಂದಿಯಿAದ, ಗೌಡ ಸಮಾಜಗಳ ಒಕ್ಕೂಟದಿಂದ ಹಾಗೂ ಮನೆಮನೆಗೆ ತೆರಳಿ ಹÀಣ ಸಂಗ್ರಹಿಸಿ ನಿರ್ಮಿಸಲಾಗಿದೆ ಎಂದು ವಿವರಿಸಿದರಲ್ಲದೆ ಸಹಕಾರ ನೀಡಿದ ಮಹನೀಯರುಗಳನ್ನು ಸ್ಮರಿಸಿದರು. ವೇದಿಕೆಯಲ್ಲಿ ಕೊಂಬಾರನ ಕುಂತಿ ಬೋಪಯ್ಯ, ಕಾಫಿ ಬೆಳೆಗಾರ ಮರದಾಳು ಬಸಪ್ಪ ಉಪಾಧ್ಯಕ್ಷ ಹೊಸಮನೆ ಪೂವಯ್ಯ ಉಪಸ್ಥಿತರಿದ್ದರು

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ವಿಶೇಷ ಸಲಹೆಗಾರರಾದ ಮೇಚನ ವಾಸು, ಖಜಾಂಚಿ ಮುಕ್ಕಾಟಿರ ಪಳಂಗಪ್ಪ, ಉಪ ಕಾರ್ಯದರ್ಶಿಗಳಾದ ಮರದಾಳು ಜನರ್ಧಾನ, ನೂಜಿಬೈಲು ನಾಣಯ್ಯ, ಸಂಘಟನಾ ಕಾರ್ಯದರ್ಶಿ ಪೇರಿಯನ ಪೂಣಚ್ಚ, ಉಪ ಖಜಾಂಚಿ ಪೇರಿಯನ ಉದಯಕುಮಾರ್, ನಿರ್ದೆಶಕರುಗಳಾದ ಮರದಾಳು ಗೋಪಾಲ, ಸಿದ್ದಿಕಲ್ಲು ದಿನೇಶ್ ಕುಮಾರ್, ನೂಜಿಬೈಲು ಕೆಂಚಪ್ಪ, ಮರದಾಳು ಉಲ್ಲಾಸ, ಕೊಂಬನ ಶೇಖರ, ಕಲ್ಪಡ ಶೋಭ, ಅಮ್ಮವನ ಲೀಲಾವತಿ, ಗುಡ್ಡಂಡ್ರ ಬಿದ್ದಪ್ಪ, ಕಡ್ಯದ ಉದಯಕುಮಾರ್, ಕೊಳಂಬೆ ಆನಂದ, ನೂಜಿಬೈಲು ಅರುಣಾಕ್ಷಿ, ಕೊಳಂಬೆ ಸುಬ್ರಮಣಿ, ಮರದಾಳು ಚೇತನ್, ಬಾಡನ ಪೊನ್ನಪ್ಪ, ಮರದಾಳು ತೇಜಸ್, ನೂಜಿಬೈಲು ಜಗತ್, ಮರದಾಳು ಭವನ್, ಪದೋಳಿ ರಮ್ಯ ಸೇರಿದಂತೆ ಅಂಬೆಕಲ್ ನವೀನ್, ಗೌಡ ಸಮಾಜ ಯುವ ವೇದಿಕೆ ಮಹಿಳಾ ಒಕ್ಕೂಟ, ಗೌಡ ಒಕ್ಕೂಟ, ಗ್ರಾಮಸ್ಥರು ಸೇರಿದಂತೆ ಇನ್ನಿತರರು ಹಾಜರಿದ್ದರು. ಮುಕ್ಕಾಟಿರ ಲಿಖಿತ, ನೂಜಿಬೈಲು ತುಳಸಿಮಣಿ, ನೂಜಿಬೈಲು ರಿತೀಶ್ ನಿರೂಪಿಸಿ, ಖಜಾಂಚಿ ಪೇರಿಯನ ಉದಯ ಹಾಗೂ ಕಾರ್ಯದರ್ಶಿ ಆಜೀರ ಧನಂಜಯ ಕಾರ್ಯಕ್ರಮ ನಿರ್ವಹಿಸಿದರು.