ಮಡಿಕೇರಿ, ಮಾ. ೧೬: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಪ್ರಾದೇಶಿಕ ಕೇಂದ್ರ ಮಡಿಕೇರಿಯಲ್ಲಿ ೨೦೨೫-೨೬ನೇ ಸಾಲಿನ ಜನವರಿ ಆವೃತ್ತಿಯ ವಿವಿಧ ಕೋರ್ಸ್ ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾನಿಲಯವು ೨೦೨೫-೨೬ನೇ ಜನವರಿ ಆವೃತ್ತಿಯ ಯು.ಜಿ ಮತ್ತು ಪಿ.ಜಿ ಕೋರ್ಸ್ಗಳ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾನಿಲಯವು ರಾಜ್ಯದಲ್ಲಿ ಮುಕ್ತ ಶಿಕ್ಷಣ ನೀಡುವ ಏಕೈಕ ವಿಶ್ವ ವಿದ್ಯಾನಿಲಯವಾಗಿದೆ.

ಯುಜಿಸಿ ನಿಯಮಗಳ ಪ್ರಕಾರ ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು ಏಕ ಕಾಲದಲ್ಲಿ ಓದಲು ಅವಕಾಶವಿದ್ದು, ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬಹುದಾಗಿದೆ, ಯುಜಿಸಿ ಮಾನ್ಯತೆ ಹೊಂದಿದ ಶೈಕ್ಷಣಿಕ ಕಾರ್ಯಕ್ರಮಗಳ ೨೦೨೫-೨೬ರ ಜನವರಿ ಆವೃತ್ತಿಗೆ ನೇರ ಪ್ರವೇಶಾತಿಯನ್ನು ಒಳಗೊಂಡAತೆ ಪ್ರಥಮ ವರ್ಷದ ಒಡಿಎಲ್ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸ್ನಾತಕ ಶಿಕ್ಷಣ ಕಾರ್ಯಕ್ರಮಗಳ ಅಡಿಯಲ್ಲಿ ಬರುವ ಬಿ.ಎ, ಬಿಕಾಂ, ಬಿ.ಲಿಬ್.ಐಎಸ್ಸಿ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್‌ಸಿ, ಬಿಎಸ್‌ಡಬ್ಲ್ಯು ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳಾದ ಎಂ.ಎ, ಎಂ.ಎ(ಪತ್ರಿಕೋದ್ಯಮ) ಎಂಕಾA, ಎಂಬಿಎ, ಎಂಎಸ್ಸಿ, ಎಂಸಿಎ, ಎಂಎಸ್‌ಡಬ್ಲ್ಯು, ಎಂ.ಲಿಬ್‌ಐ.ಎಸ್‌ಸಿ ಮತ್ತು ಪಿಜಿ ಡಿಪ್ಲೋಮಾ ಪ್ರೋಗ್ರಾಮ್ಸ್ ಸರ್ಟಿಫಿಕೇಟ್ ಪ್ರೋಗ್ರಾಮ್ಸ್ ೨೦೨೫-೨೬ ರ ಶೈಕ್ಷಣಿಕ ಸಾಲಿನ ಜನವರಿ ಆವೃತ್ತಿಯಿಂದ ಹೊಸದಾಗಿ ಪ್ರಾರಂಭಿಸಿರುವ ಜ್ಯೋತಿರ್‌ವಿಜ್ಞಾನ ಮತ್ತು ಲಿಂಗ್ವಿಸ್ಟಿಕ್ಸ್ ಕೋರ್ಸ್ಗಳಿಗೆ ಪ್ರವೇಶಾತಿ ಪ್ರಾರಂಭವಾಗಿದೆ, ಪ್ರವೇಶಾತಿಯು ದಿನಾಂಕ:೩೧.೦೩.೨೦೨೬ ಅಂತಿಮ ದಿನವಾಗಿದೆ. ಪ್ರವೇಶಾತಿಗೆ ಎಸ್.ಎಸ್.ಲ್.ಸಿ ಅಂಕಪಟ್ಟಿ ಪ್ರತಿ. ಪಿ.ಯು.ಸಿ ಅಥವಾ ತತ್ಸಮಾನ ಅಂಕಪಟ್ಟಿ ಪ್ರತಿ. ಪದವಿ ಅಂಕಪಟ್ಟಿ ಪ್ರತಿ, (ಎಲ್ಲಾ ವರ್ಷಗಳ ಅಥವಾ ಎಲ್ಲಾ ಸೆಮಿಸ್ಟರ್‌ಗಳು). ಆಧಾರ್ ಕಾರ್ಡ್ ಜೆರಾಕ್ಸ್. ಬ್ಯಾಂಕ್ ಖಾತೆ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಖಾತೆ ಹೋಲ್ಡರ್ ಹೆಸರು, ಬ್ಯಾಂಕ್‌ನ ಹೆಸರು, ಐಎಫ್‌ಎಸ್‌ಸಿ ಕೋಡ್. ನಾಲ್ಕು ಫೋಟೋಗಳು. ದೂರವಾಣಿ ಸಂಖ್ಯೆ, ವಿದ್ಯಾರ್ಥಿ ಇ-ಮೇಲ್ ಐಡಿ, ಬಿಪಿಎಲ್ ಕಾರ್ಡ್ (ಮಹಿಳೆಯರಿಗೆ ಮಾತ್ರ), ಎಟಿಎಂ ಕಾರ್ಡ್/ ಫೋನ್ ಪೇ / ಗೂಗಲ್ ಪೇ / ನೆಟ್ ಬ್ಯಾಂಕಿAಗ್ - ಶುಲ್ಕ ಪಾವತಿಗಾಗಿ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ ಪ್ರಾದೇಶಿಕ ನಿರ್ದೇಶಕರು ೯೯೦೧೪೨೩೨೭೩, ೯೪೮೩೫೭೦೯೦೦, ೮೨೯೬೨೧೫೭೧೪, ೯೮೪೪೩೯೫೯೮೬, ಮಡಿಕೇರಿ ಜೂನಿಯರ್ ಕಾಲೇಜು ಆವರಣದ ಭವನದಲ್ಲಿರುವ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ.