ಈಗಿನ ಕಾಲಘಟ್ಟದಲ್ಲಿ ಸಮಾಜ ಸೇವೆ ಮಾಡುವದೆಂದರೆ ಅದರಿಂದಾಗಿ ಏನಾದರೂ ಲಾಭ ಸಿಗಬಹುದೆಂಬ ಉದ್ದೇಶ ಇದ್ದೇ ಇರುತ್ತದೆ. ಪ್ರಚಾರಕ್ಕಾಗಿಯೇ ಸೇವೆ ಎಂದುಕೊAಡು ಮಾಧ್ಯಮದೆದುರು ಫೋಸ್ ಕೊಡುವವರೂ ಇದ್ದಾರೆ. ಆಸ್ಪತ್ರೆಗೆ ಹೋಗಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಅಂತ ಒಂದು ಬಾಳೆ ಹಣ್ಣನ್ನು ನೀಡಿ ಪ್ರಚಾರ ಗಿಟ್ಟಿಸಿಕೊಂಡವರೂ ನಮ್ಮ ನಡುವೆ ಇದ್ದಾರೆ..!

ಅಂತಹವರುಗಳ ನಡುವೆ ಅಲ್ಲೋ ಇಲ್ಲೋ ಎಂಬAತೆ ಕೆಲವರು ಯಾವದೇ ಪ್ರಚಾರ ಬಯಸದೇ., ತಮ್ಮ ನಿಸ್ವಾರ್ಥ ಸೇವೆ ಮುಂದುವರೆಸಿಕೊAಡು ಹೋಗುತ್ತಿರುವವರೂ ಇದ್ದಾರೆ ಎಂದರೆ ಅದು ಹೆಮ್ಮೆಯ ವಿಷಯ., ಈ ಸಾಲಿನಲ್ಲಿ ಯಾರಿಗೂ ಹೇಳದೆ., ತಮ್ಮದೇ ವ್ಯವಸ್ಥೆಯಡಿ., ಯಾವದೇ ಪ್ರಚಾರ, ಫಲಾಪೇಕ್ಷೆ ಬಯಸದೇ ಸಾಗುತ್ತಿರುವವರು ಚೋಕಂಡ ಸಂಜು ಸುಬ್ಬಯ್ಯ.

ಉದ್ಯಮಿಯಾಗಿದ್ದುಕೊಂಡು ಒಂದಿಷ್ಟು ಸಂಪಾ ದನೆಯೊಂದಿಗೆ ಹಾಯಾಗಿ ಜೀವನ ಸಾಗಿಸಬಹುದಾದರೂ ತಮ್ಮ ಜೀವನದ ಒಂದಿಷ್ಟು ಅವಧಿಯನ್ನು ಪರರ ಸೇವೆಗಾಗಿ ಮುಡಿಪಾಗಿಟ್ಟಿದ್ದಾರೆ ಸಂಜು. ಅದರಲ್ಲೂ ಅತ್ಯಂತ ಅಮೂಲ್ಯವಾದ., ಒಂದು ಜೀವವನ್ನು ಉಳಿಸುವ., ಅನಾರೋಗ್ಯದಿಂದ ರಕ್ಷಣೆ ಮಾಡುವಂತಹ ವೈದ್ಯಕೀಯ ಕ್ಷೇತ್ರದಲ್ಲಿ ಸಂಜು ತಮ್ಮ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅದೂ ಕೂಡ ನಿಸ್ವಾರ್ಥತೆಯಿಂದ..

ಇವರು ವೈದ್ಯರಲ್ಲ..!

ವೈದ್ಯಕೀಯ ಕೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ ಅಂದಾಕ್ಷಣ ಅವರೊಬ್ಬರು ಖ್ಯಾತ ವೈದ್ಯರು ಅಥವಾ ತಜ್ಞರೆಂಬ ಭಾವನೆ ಎಲ್ಲರಲ್ಲೂ ಮೂಡುವದು ಸಹಜ.., ಆದರೆ ಇವರು ವೈದ್ಯರಲ್ಲ., ವೈದ್ಯಕೀಯ ಕ್ಷೇತ್ರದ ಬಗ್ಗೆ ಗೊತ್ತಿಲ್ಲ., ಆದರೂ ಇವರಿಗೆ ರಾಜ್ಯದಾದ್ಯಂತ ವೈದ್ಯಕೀಯ ಕ್ಷೇತ್ರದಲ್ಲಿರುವವರ ನಿಕಟ ಸಂಪರ್ಕವಿದೆ. ಸರಕಾರದಿಂದ ದೊರಕುವ ಉಚಿತ ವೈದ್ಯಕೀಯ ಸೌಲಭ್ಯಗಳ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ಹಾಗಾಗಿ ಆ ಸೌಲಭ್ಯಗಳನ್ನು ಬಡಜನರು ಸೇರಿದಂತೆ ಅರ್ಹರಿಗೆ ಒದಗಿಸಿಕೊಡುವ ಕಾರ್ಯವನ್ನು ಸಂಜು ಮಾಡುತ್ತಾ ಬರುತ್ತಿದ್ದಾರೆ.

ಅನುಭವದ ಪಾಠದಿಂದ ಸೇವೆಗೆ

ಅಮ್ಮತ್ತಿಯಲ್ಲಿ ನೆಲೆಸಿರುವ ಚೋಕಂಡ ಬಬ್ಬು ದೇವಯ್ಯ ಹಾಗೂ ಶಾಂತಿ ದೇವಯ್ಯ ಅವರ ಪುತ್ರರಾಗಿರುವ ಸಂಜು ಸುಬ್ಬಯ್ಯ ಕಳೆದ ೧೨ ವರ್ಷಗಳಿಂದ ಈ ವೈದ್ಯಕೀಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ತಮ್ಮ ತಂದೆ ದೇವಯ್ಯ ಅವರಿಗೆ ಹೃದಯಾಘಾತವಾದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಅನುಭವಿಸಿದ ತೋದರೆ, ಎದುರಿಸಿದ ಆರ್ಥಿಕ ಸಮಸ್ಯೆ, ಇದರೊಂದಿಗೆ ಸಾರ್ವಜನಿಕರು ಅನುಭವಿಸಿದ ಸಮಸ್ಯೆಗಳನ್ನು ಕಣ್ಣಾರೆ ಕಂಡ ನಂತರ ಆರೋಗ್ಯ ವಿಚಾರಕ್ಕೆ ಸಂಬAಧಿಸಿದAತೆ ಏನಾದರೂ ನೆರವು ನೀಡಬೇಕೆಂದು ನಿರ್ಧರಿಸಿ ವೈದ್ಯಕೀಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಬದುಕಿನಲ್ಲಿ ಕಲಿತ ಒಂದು ಪಾಠ ಅವರನ್ನು ಸಾಮಾನ್ಯ ಮನುಷ್ಯನಿಂದ ಹೊರತಂದು ಅಸಾಮಾನ್ಯ ಸೇವಕನನ್ನಾಗಿ ಸಮಾಜ ಗುರುತಿಸುವಂತೆ ಮಾಡಿದೆ. ಆದರೆ ಸಂಜು ಎಲ್ಲಿಯೂ ಯಾವದೇ ಪ್ರಚಾರ, ಅಪೇಕ್ಷೆಯನ್ನಿಟ್ಟುಕೊಳ್ಳದೆ ತಮ್ಮಂತೆಯೇ ತಾವು ಸೇವಾಕಾಯ ಕದಲ್ಲಿ ತೊಡಗಿಸಿಕೊಂಡಿದ್ದಾರೆ.

೮೦೦ಕ್ಕೂ ಅಧಿಕ ಮಂದಿಗೆ ನೆರವು

ವೈದ್ಯಕೀಯ ಅಂದಾಕ್ಷಣ ಎಲ್ಲರ ಮನದಲ್ಲಿ ಮೂಡುವದು ಹಣಕಾಸಿನ ವಿಚಾರ. ಖಾಸಗಿ ಆಗಿರಲಿ ಸರಕಾರಿ ಆಸ್ಪತ್ರೆಯೇ ಆಗಿರಲಿ ಅಲ್ಲಿ ಕಾಣಬರುವದು ಹಣದ ಅವಶ್ಯಕತೆ. ಬಹುತೇಕ ಸರಕಾರಿ ಹಾಗೂ ನಿಗದಿಪಡಿಸಿದ ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರದ ಯಶಸ್ವಿನಿ, ಆಯುಷ್ಮಾನ್ ಮುಂತಾದ ಯೋಜನೆಗಳಡಿ ಉಚಿತ ಹಾಗೂ ರಿಯಾಯಿತಿ ದರದಲ್ಲಿ ಚಿಕಿತ್ಸೆಯ ವ್ಯವಸ್ಥೆಗಳಿವೆ. ಆದರೆ ಹಣದ ಆಸೆಯಿಂದ ಬಹುತೇಕ ಆಸ್ಪತ್ರೆಗಳಲ್ಲಿ ಇಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ಕೂಡ ನೀಡುವದಿಲ್ಲ. ಬಹುತೇಕ ಮಂದಿಗೆ ಸೌಲಭ್ಯಗಳ ಬಗ್ಗೆ ಅರಿವು ಕೂಡ ಇರುವದಿಲ್ಲ. ಇಂತಹ ಸಂದರ್ಭಗಳಲ್ಲಿ ಸಂಜು ಅವರ ಗಮನಕ್ಕೆ ಬಂದ ಕೂಡಲೇ ಸಂಬAಧಿಸಿದ ಆಸ್ಪತ್ರೆಯ ಪ್ರಮುಖರನ್ನು ಸಂಪರ್ಕಿಸಿ ರೋಗಿಗಳಿಗೆ ಸರಕಾರದ ಸೌಲಭ್ಯದಡಿ ಉಚಿತ ಚಿಕಿತ್ಸೆ, ರಿಯಾಯಿತಿಯಲ್ಲಿ ಚಿಕಿತ್ಸೆ ಕೊಡಿಸಿದ್ದಲ್ಲದೆ ಖಾಸಗಿ ಆಸ್ಪತ್ರೆಯವರು ಬಡವರಿಂದ ಕಟ್ಟಿಸಿಕೊಂಡಿದ್ದ ಲಕ್ಷಾಂತರ ಮೌಲ್ಯದ ಬಿಲ್ ಹಣವನ್ನು ಮರು ಪಾವತಿ ಮಾಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ. ಈ ವರೆಗೆ ಕೊಡಗು ಜಿಲ್ಲೆ ಸೇರಿದಂತೆ ಸರಿ ಸುಮಾರು ೮೦೦ಕ್ಕೂ ಅಧಿಕ ಮಂದಿಗೆ ವೈದ್ಯಕೀಯ ನೆರವು ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ರಾಜ್ಯಾದ್ಯಂತ ಸಂಪರ್ಕ

ಸAಜು ಅವರಿಗೆ ರಾಜ್ಯಾದ್ಯಂತ ಸರಕಾರಿ ಆಸ್ಪತ್ರೆ ಹಾಗೂ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳ ಪ್ರಮುಖರೊಂದಿಗೆ ನಿಕಟ ಸಂಪರ್ಕವಿದೆ. ಚಿಕಿತ್ಸೆ ನೀಡಲು ಸಾಧ್ಯವಿಲ್ಲ, ಆಸ್ಪತ್ರೆಗಳಲ್ಲಿ ಹಾಸಿಗೆಯಿಲ್ಲ, ದುಬಾರಿ ವೆಚ್ಚವಾಗುತ್ತದೆ ಎಂಬAತಹ ಸಂದರ್ಭಗಳಲ್ಲಿ ಸಂಜು ಅವರ ಗಮನಕ್ಕೆ ಬಂದ ಕೂಡಲೇ ಸಂಬAಧಿಸಿದ ಆಸ್ಪತ್ರೆಯ ಪ್ರಮುಖರನ್ನು ಸಂಪರ್ಕಿಸಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಸಿಕೊಡುತ್ತಾರೆ. ತಡರಾತ್ರಿಯಾದರೂ ಎಷ್ಟೇ ಸಮಯವಾದರೂ ನಿಕಟ ಸಂಪರ್ಕವಿರಿಸಿಕೊAಡು ಚಿಕಿತ್ಸೆ ಯಶಸ್ವಿಯಾಗುವವರೆಗೂ ತಮ್ಮ ಪ್ರಯತ್ನ ಮುಂದುವರೆಸುವದು ಸಂಜು ಸುಬ್ಬಯ್ಯ ಅವರ ದೊಡ್ಡ ಗುಣವೆಂದೇ ಹೇಳಬಹುದು. ಅಪರೂಪದ ಖಾಯಿಲೆಯಾಗಿರುವ, ಲಕ್ಷಾಂತರ ವೆಚ್ಚ ತಗಲುವ ನರಗಳಿಗೆ ಸಂಬAಧಿಸಿದ ಜಿಬಿ ಸಿಂಡ್ರೋA ಅಂತಹ ಖಾಯಿಲೆಗಳಿಗೂ ಸರಕಾರದ ಸೌಲಭ್ಯದಡಿ ಚಿಕಿತ್ಸೆ ಒದಗಿಸಿದ್ದಾರೆ. ಇಂತಹ ಸುಮಾರು ೮ ಮಂದಿಗೆ ಚಿಕಿತ್ಸೆ ದೊರಕುವಂತೆ ಮಾಡಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ವಿಕ್ಟೋರಿಯಾದಂತಹ ಆಸ್ಪತ್ರೆಗಳಲ್ಲಿ ಹಾಸಿಗೆಗಾಗಿ ರೋಗಿಗಳು ಸಾಲುಗಟ್ಟಿ ಕಾಯುತ್ತಿದ್ದ ಸಂದರ್ಭದಲ್ಲಿಯೂ ಸಂಜು ಅವರು ಹಾಸಿಗೆಯೊಂದಿಗೆ ವೆಂಟಿಲೇಶನ್ ವ್ಯವಸ್ಥೆ ಮಾಡಿಕೊಟ್ಟ ನಿದರ್ಶನಗಳಿವೆ.

ಗಮನಕ್ಕೆ ಬಂದರೆ ಸಾಕು

ಸಂಜು ಅವರ ಸೇವೆ ಬಹುತೇಕ ಯಾರಿಗೂ ಅರಿವಿಲ್ಲ. ಹಾಗಾಗಿ ಅವರನ್ನು ಸಂಪರ್ಕ ಮಾಡುವವರು ವಿರಳ. ಆದರೆ ಯಾರಿಗಾದರೂ ವೈದ್ಯಕೀಯ ಸೇವೆಯ ಅಗತ್ಯವಿದೆ ಎಂದು ಸಾಮಾಜಿಕ ಜಾಲತಾಣ, ಅಥವಾ ಮಾಧ್ಯಮಗಳಲ್ಲಿ, ತಮ್ಮ ಸ್ನೇಹಿತರಿಂದ ಗಮನಕ್ಕೆ ಬಂದರೆ ಸಾಕು ಯಾವದೇ ಜಾತಿ, ಮತ, ಧರ್ಮ ಬೇಧವಿಲ್ಲದೆ ಸಂಜು ಸುಬ್ಬಯ್ಯ ನೆರವಿಗೆ ನಿಲ್ಲುತ್ತಾರೆ. ಸಂಬAಧಿಸಿದ ರೋಗಿಗಳ ಕುಟುಂಬಕ್ಕೆ ಅರಿವಿಲ್ಲದಂತೆ ಸೇವಾ ಸೌಲಭ್ಯ ಒದಗಿಸಿದ್ದೂ ಇದೆ. ಆದರೆ ಸೇವೆ ಪಡೆದುಕೊಂಡವರು ನಂತರದಲ್ಲಿ ಕನಿಷ್ಟ ಕೃತಜ್ಞತೆ ಕೂಡ ತೋರದಿರುವ ಬಗ್ಗೆ ಸಂಜು ಅವರಲ್ಲಿ ವಿಷಾದವಿದೆ. ಆದರೂ ನಗುನಗುತ್ತಲೇ ತಮ್ಮ ಸೇವೆ ಮುಂದುವರೆಸಿಕೊAಡು ಹೋಗುತ್ತಿದ್ದಾರೆ.

ಶಾಸಕರ ಸಹಕಾರ

ಸಂಜು ಸುಬ್ಬಯ್ಯ ಈ ಸೇವಾ ಕಾರ್ಯದಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಪೊನ್ನಣ್ಣ ಅವರ ಸಹಕಾರವೂ ಸಾಕಷ್ಟಿದೆ. ಕೆಲವೊಂದು ಸಂದರ್ಭದಲ್ಲಿ ಶಾಸಕರ ಗಮನಕ್ಕೆ ಬಂದAತಹ ಪ್ರಕರಣಗಳನ್ನು ಸಂಜು ಅವರ ಗಮನಕ್ಕೆ ತಂದು ಬಗೆಹರಿಸಲಾಗಿದೆ. ಇದರೊಂದಿಗೆ ಕೆಲವೊಂದು ಸಂದರ್ಭದಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಅಗತ್ಯವಿದ್ದ ಸಂದರ್ಭದಲ್ಲಿ ಸಂಜು ಅವರೂ ಕೂಡ ಶಾಸಕರನ್ನು ಸಂಪರ್ಕಿಸಿ ಅವರ ಸಹಕಾರದೊಂದಿಗೂ ಪರಿಹಾರ ಕಲ್ಪಿಸಿರುವದೂ ಇದೆ.

ಸೇವೆಗೆ ಸಂದ ಗೌರವ

ಸಂಜು ಅವರ ನಿಸ್ವಾರ್ಥ ಹಾಗೂ ನಿರಂತರ ಸೇವೆಯನ್ನು ಗಮನಿಸಿ ಅವರಿಗೆ ವಿವಿಧೆಡೆ ಗೌರವ, ಸನ್ಮಾನಗಳು ದೊರೆತಿವೆ. ವೀರಾಜಪೇಟೆ ತಾಲೂಕು ಆಡಳಿತದಿಂದ ರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನಿಸಲಾಗಿದೆ. ವೀರಾಜಪೇಟೆಯಲ್ಲಿ ನಡೆದ ಕ್ರಿಡಾಕೂಟದಲ್ಲಿ ಸನ್ಮಾನಿಸಲಾಗಿದೆ. ತಮ್ಮ ಊರಾದ ಅಮ್ಮತ್ತಿಯ ಕೊಡವ ಸಮಾಜದ ವತಿಯಿಂದ ಗೌರವಿಸಲಾಗಿದೆ. ಮಾಧ್ಯಮ ಸ್ಪಂದನ ತಂಡದಿAದಲೂ ಸನ್ಮಾನಕ್ಕೆ ಭಾಜನರಾಗಿದ್ದಾರೆ. ಇದರೊಂದಿಗೆ ಇತ್ತೀಚೆಗೆ ಕುಟ್ಟ ಕೊಡವ ಸಮಾಜದಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಸಮಾಜ ಸೇವೆಗಾಗಿ ಪ್ರಶಸ್ತಿಯನ್ನು ಕೂಡ ಸಂಜು ಪಡೆದುಕೊಂಡಿದ್ದಾರೆ. ಪತ್ನಿ ತನುಜ ಶರಿ ಹಾಗೂ ಪುತ್ರ ಸಮರ್ಥ್ ಸೋಮಣ್ಣ ಅವರೊಂದಿಗೆ ಸುಖ ಸಂಸಾರ ನಡೆಸುತ್ತಿರುವ, ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿರುವ ಸಂಜು ಅವರ ಭವಿಷ್ಯ ಉತ್ತಮವಾಗಿರಲಿ., ಅವರಿಂದ ಇನ್ನಷ್ಟು ಮಂದಿಗೆ ನೆರವು, ಸೇವೆ ದೊರಕುವಂತಾಗಲಿ ಎಂದು ಹಾರೈಸೋಣ.