ನಾಪೋಕ್ಲು, ಮಾ. ೧೫: ಪತ್ನಿ ಹಾಗೂ ಮಗು ಕಾಣೆಯಾಗಿದ್ದು ಪತ್ತೆ ಮಾಡಿಕೊಡುವಂತೆ ಇಲ್ಲಿನ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.

ಕೊಳಕೇರಿ ಗ್ರಾಮದ ಕನ್ನಂಬಿರ ಮನು ಬಿದ್ದಪ್ಪ ಎಂಬವರ ಲೈನ್ ಮನೆಯಲ್ಲಿ ವಾಸವಾಗಿರುವ ಕೂಲಿ ಕಾರ್ಮಿಕ ಧನು ಎಂಬುವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಮೂರುವರೆ ವರ್ಷದ ಹಿಂದೆ ಜಯಶ್ರೀ (ದಿವ್ಯ) ಎಂಬಾಕೆಯನ್ನು ತಾನು ವಿವಾಹವಾಗಿದ್ದು ವಿಕ್ರಂ ಎಂಬ ಎರಡುವರೆ ವರ್ಷದ ಗಂಡು ಮಗುವಿನ ಜೊತೆಯಲ್ಲಿ ವಾಸವಾಗಿದ್ದು ಮಾರ್ಚ್ ೧೨ರಂದು ಖಾಸಗಿ ಬಸ್ ಹತ್ತಿ ನಾಪೋಕ್ಲುಗೆ ತೆರಳಿದವರು ಮನೆಗೆ ಹಿಂತಿರುಗಿರುವುದಿಲ್ಲ. ಇವರು ಸುತ್ತಮುತ್ತ , ಸ್ನೇಹಿತರ ನೆಂಟರ ಮನೆಯಲ್ಲಿ ಪತ್ತೆ ಆಗಿರುವುದಿಲ್ಲ. ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಪತ್ನಿ ಮತ್ತು ಮಗನನ್ನು ಪತ್ತೆ ಹಚ್ಚಿ ಕೊಡುವಂತೆ ಅವರು ದೂರು ಸಲ್ಲಿಸಿದ್ದಾರೆ.