ಮಡಿಕೇರಿ, ಮಾ. ೧೫: ಚಿತ್ರದುರ್ಗದ ಆರ್. ರವಿ ಬಿದರಿ ಎಂಬವರಿಗೆ ೨೫ ಲಕ್ಷ ರೂಪಾಯಿಗೆ ಚೆಕ್ ನೀಡಿ ಅಮಾನ್ಯವಾದ ಪ್ರಕರಣಕ್ಕೆ ಸಂಬAಧಿಸಿದAತೆ ಮಡಿಕೇರಿಯ ಎಂ.ಎA. ಪೂವಣ್ಣ ಎಂಬಾತನ ವಿರುದ್ಧ ಚಿತ್ರದುರ್ಗದ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಮತ್ತು ಜೆಎಂಎಫ್‌ಸಿ ರಶ್ಮಿ ಎಸ್. ಮರಡಿ ತೀರ್ಪು ನೀಡಿ, ಸೆ. ೨೫೫ (೨) ರ ಅಡಿಯಲ್ಲಿ ಅಧಿಕಾರ ಚಲಾಯಿಸಿ ಸೆಕ್ಷನ್ ೧೩೮ರ ಅಡಿ ಅಪರಾಧಕ್ಕಾಗಿ ಶಿಕ್ಷೆ ವಿಧಿಸಿದ್ದಾರೆ.

ರೂ. ೨೫,೦೫,೦೦೦ ದಂಡ ವಿಧಿಸಲಾಗಿದೆ. ದಂಡ ತೆರಲು ವಿಫಲರಾದರೆ ಆರು ತಿಂಗಳ ಸರಳ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ರೂ. ೨೫ ಲಕ್ಷವನ್ನು ದೂರುದಾರ ರವಿ ಬಿದರಿ ಅವರಿಗೆ ಮತ್ತು ರೂ. ೫ ಸಾವಿರವನ್ನು ರಾಜ್ಯ ಸರಕಾರಕ್ಕೆ ದಂಡದ ರೂಪದಲ್ಲಿ ನೀಡುವಂತೆ ತೀರ್ಪು ನೀಡಲಾಗಿದೆ. ಪಿರ್ಯಾದಿ ಪರ ವಕೀಲ ಎಸ್. ವಿದ್ಯಾಧರ ವಾದ ಮಂಡಿಸಿದರು.