ಮಡಿಕೇರಿ, ಮಾ. ೧೪: ಗೋಣಿಕೊಪ್ಪದ ಕಾವೇರಿ ಹಿಲ್ಸ್ ಬಡಾವಣೆಯ ನಿವಾಸಿ ಮಾಜಿ ಸೈನಿಕ ಪಿ.ಎಂ. ಇಬ್ರಾಹಿಂ ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೇವರಪುರದ ಶಿಕ್ಷಕಿ ಕೆ.ಇ. ಸಫೂರ ಅವರ ಪುತ್ರ ಪಿ.ಇ. ಮನ್ಸೂರ್ ಅವರು ಇಸ್ರೋದ ಸ್ಪೇಸ್ ಅಪ್ಲಿಕೇಶನ್ ಸೆಂಟರ್ (Sಂಅ) ಅಹಮದಾಬಾದ್‌ಗೆ ಪ್ರಾಜೆಕ್ಟ್ ಅಸೋಸಿಯೇಟ್ ಆಗಿ ಆಯ್ಕೆಯಾಗಿದ್ದಾರೆ. ಇವರು ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ವರೆಗೆ ಲಯನ್ಸ್ ಶಿಕ್ಷಣ ಸಂಸ್ಥೆ ಗೋಣಿಕೊಪ್ಪದಲ್ಲಿ ಓದಿದ್ದು, ನಂತರ ಅಳ್ವಾಸ್ ಇಂಜಿನಿಯರಿAಗ್ ಕಾಲೇಜು ಮೂಡಬಿದ್ರೆಯಲ್ಲಿ ಕೃಷಿ ಇಂಜಿನಿಯರಿAಗ್ ಪದವಿ ಪಡೆದಿದ್ದಾರೆ.