ಗೋಣಿಕೊಪ್ಪಲು, ಮಾ. ೧೫: ಸದಾ ಕೆಲಸದ ಒತ್ತಡದ ನಡುವೆ ಕರ್ತವ್ಯ ನಿರ್ವಹಿಸುತ್ತಿರುವ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕ್ರಿಕೆಟ್ ಆಟವನ್ನು ಆಡಿ ಸಂಭ್ರಮಿಸಿದರು.

ಪೊನ್ನAಪೇಟೆ ತಾಲೂಕಿನ ಹಾತೂರಿನ ಶಾಲಾ ಮೈದಾನದಲ್ಲಿ ಕೊಡಗು ರೆವೆನ್ಯೂ ಪ್ರಿಮಿಯರ್ ಲೀಗ್ ಕ್ರಿಕೆಟ್‌ನ ೨ನೇ ಆವೃತ್ತಿಯು ಆರಂಭಗೊAಡಿತ್ತು. ಪೊನ್ನಂಪೇಟೆ ತಾಲೂಕು ಕಂದಾಯ ಇಲಾಖೆಯು ಈ ಬಾರಿಯ ಆತಿಥ್ಯವನ್ನು ವಹಿಸಿತ್ತು. ೨ ದಿನಗಳ ಕ್ರಿಕೆಟ್ ಪಂದ್ಯಾವಳಿಗೆ ಸಂಘದ ಜಿಲ್ಲಾ ಅಧ್ಯಕ್ಷರಾದ ಹೆಚ್.ಟಿ.ಅನೀಶ್, ಪೊನ್ನಂಪೇಟೆ ತಾಲೂಕು ಅಧ್ಯಕ್ಷರಾದ ಜಿ.ಕೆ..ನಿತನ್ ಬ್ಯಾಟ್ ಮಾಡುವ ಮೂಲಕ ಚಾಲನೆ ನೀಡಿದರು.

ಕೊಡಗು ಜಿಲ್ಲೆಯ ಪೊನ್ನಂಪೇಟೆ, ವೀರಾಜಪೇಟೆ, ಮಡಿಕೇರಿ, ಕುಶಾಲನಗರ ಹಾಗೂ ಸೋಮವಾರಪೇಟೆಯ ತಾಲೂಕು ತಂಡಗಳು ಸೇರಿದಂತೆ ಜಿಲ್ಲಾಧಿಕಾರಿಗಳ ಹಾಗೂ ಉಪವಿಭಾಗಾಧಿಕಾರಿಗಳ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿವೆ. ೨ ದಿನಗಳ ಕಾಲ ನಡೆಯುವ ಪಂದ್ಯಾವಳಿಯಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಪೊನ್ನಂಪೇಟೆ ತಂಡದ ನಾಯಕರಾಗಿ ಮೋಹನ್ ಕುಮಾರ್, ವೀರಾಜಪೇಟೆ ತಂಡದ ನಾಯಕರಾಗಿ ಎಂ.ಎಲ್.ಹರೀಶ್, ಮಡಿಕೇರಿ ತಂಡದ ನಾಯಕರಾಗಿ ಸಂತೋಷ್ ಪಾಟಿಲ್, ಸೋಮವಾರಪೇಟೆ ತಂಡದ ನಾಯಕರಾಗಿ ತಹಶೀಲ್ದಾರ್ ಕೃಷ್ಣಮೂರ್ತಿ.ಕುಶಾಲನಗರ ತಂಡದ ನಾಯಕರಾಗಿ ಸಿ.ಪಿ.ಚೇತನ್, ಡಿ.ಸಿ. ಕಚೇರಿಯ ತಂಡದ ನಾಯಕರಾಗಿ ಉಪ ವಿಭಾಗಾಧಿಕಾರಿ ನಿತೀನ್ ಚಕ್ಕಿ ಕಾರ್ಯನಿರ್ವಹಿಸಿದರು.