ವೀರಾಜಪೇಟೆ, ಮಾ. ೧೫: ಪೂರ್ವಜರು ಪ್ರಕೃತಿಯೊಂದಿಗೆ ಒಡನಾಟದೊಂದಿಗೆ ಬಾಳಿ ಬದುಕು ಕಂಡಿದ್ದರು. ಸುಖಿ ಜೀವನ ನಡೆಸುತ್ತಿದ್ದರು. ಇದೀಗ ಆಧುನಿಕತೆ ಎಲ್ಲಡೆ ಪಸರಿಸಿ ಪೂರ್ವಜರು ನಡೆಸಿಕೊಂಡು ಬಂದ ಜೀವನ ಪದ್ದತಿಯು ಕಣ್ಮರೆಯಾಗುತ್ತಿರುವುದನ್ನು ನಾವು ಕಾಣುತಿದ್ದೇವೆ ಎಂದು ಮಡಿಕೇರಿ ಆಕಾಶವಾಣಿ ಉದ್ಘೋಷಕ ವಿನೋದ್ದ ಮೂಡಗದ್ದೆ ವಿಷಾದ ವ್ಯಕ್ತಪಡಿಸಿದರು.

ಕೊಡಗು ವಿಶ್ವವಿದ್ಯಾನಿಲಯ, ರಾಷ್ಟಿçÃಯ ಸೇವಾ ಯೋಜನೆ ಘಟಕ, ಸಂತ ಅನ್ನಮ್ಮ ಪದವಿ ಕಾಲೇಜು ವೀರಾಜಪೇಟೆ, ಆಶ್ರಯದಲ್ಲಿ ಕೊಲ್ತೋಡು ನಾಂಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ೬ ದಿನಗಳ ಕಾಲ ವಾರ್ಷಿಕ ವಿಶೇಷ ಶಿಬಿರ ಆಯೋಜನೆಗೊಂಡಿತ್ತು. ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಮಾರಂಭ ಉದ್ದೇಶಿಸಿ ಮಾತನಾಡಿದ ವಿನೋದ್ ಅವರು. ಸೇವೆ ಎಂಬುದು ಜೀವನದ ಅವಿಭಾಜ್ಯ ಅಂಗ ಎಂದು ಪರಿಗಣಿಸುವಂತಾಗಬೇಕು. ಸೇವಾ ಮನೋಭಾವ ಮತ್ತು ಪರಿಸರ ಜಾಗೃತಿ ವಿದ್ಯಾರ್ಥಿಗಳ ಜೀವನದಲ್ಲಿ ಜಾಗೃತವಾಗಬೇಕು ಪರಿಸರವನ್ನು ಉಳಿಸಿಕೊಂಡು ವಿಜ್ಞಾನವನ್ನು ಬೆಳೆÀಸುವುದು ಸೂಕ್ತ. ಗ್ರಾಮೀಣ ಭಾಗದಲ್ಲಿ ಕೂಡು ಕುಟುಂಬದಿAದ ಕೃಷಿ ಪದ್ಧತಿಗಳು ಜೀವಂತವಾಗಿರಿಸಿತ್ತು. ಅದರೇ ಪ್ರಸ್ತುತ ಕುಟುಂಬಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿ ಕೃಷಿಯತ್ತ ಮುಖ ಮಾಡುವವರ ಸಂಖ್ಯೆ ವಿರಳವಾಗಿದೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸ್ಥಳ ದಾನಿ,ಕೃಷಿಕರಾದ ಕುಪ್ಪಂಡ ಗೋಪಾಲ್ ಸುಬ್ಬಯ್ಯ ಮಾತನಾಡಿ, ಆಧುನಿಕತೆ ಮತ್ತು ಹಣ ಮಾಡುವ ಚಿಂತನೆಯಿAದಾಗಿ ಮಕ್ಕಳು ತಮ್ಮ ಪೋಷಕರನ್ನು ಮರೆಯುವ ಹಂತಕ್ಕೆ ತಲುಪಿದ್ದಾರೆ ಜೀವನದಲ್ಲಿ ಎಲ್ಲದನ್ನು ಪಡೆಯಲು ಅವಕಾಶವಿದೆ ಅದರೇ ತಂದೆ ತಾಯಿಯನ್ನು ಪಡೆಯಲು ಅಸಾಧ್ಯ. ಜೀವನ ನಡೆಸಲು ಮಾತ್ರ ಶಿಕ್ಷಣ ಸಿಮೀತವಾಗಬೇಕು. ವಿನ: ವಿನಾಶಕ್ಕೆ ಉಪಯೋಗವಾಗಬಾರದು. ಗ್ರಾಮ ಭಾಗದಲ್ಲಿ ಶಿಬಿರವನ್ನು ಆಯೋಜನೆ ಮಾಡಿರುವುದನ್ನು ಶ್ಲಾಘಿಸಿದರು.

ಎನ್.ಎಸ್.ಎಸ್. ಘಟಕದ ಶಿಬಿರಾಧಿಕಾರಿಗಳಾದ ಬಿ.ಎಸ್. ಶಾಂತಿಭೂಷಣ್ ಅವರು ಶಿಬಿರದ ವರದಿ ವಾಚಿಸಿದರು. ಕಾರ್ಯಕ್ರಮ ಉದ್ದೇಶಿಸಿ ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲರಾದ ತೃಪ್ತಿ ಬೋಪಣ್ಣ ಮತ್ತು ಸ.ಹಿ.ಪ್ರಾ. ಶಾಲೆಯ ಮುಖ್ಯೋಪಾಧ್ಯಾಯರಾದ ಫ್ಯಾನ್ಸಿ ಲೋಬೋ ಅವರು ಮಾತನಾಡಿದರು. ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಆಶಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕುಪ್ಪಂಡ ಗೋಪಾಲ್ ಸುಬ್ಬಯ್ಯ, ಆಶಾ, ವಿನೋದ್ ಮೂಡಗದ್ದೆ ಹಾಗೂ ಬಿ.ಎಸ್. ಶಾಂತಿ ಭೂಷಣ್ ಅವರುಗಳನ್ನು ಸನ್ಮಾನಿಸಲಾಯಿತು. ಬಳಿಕ ಶಿಬಿರಾರ್ಥಿಗಳು ಶೀಭಿರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.ಸಂತ ಅನ್ನಮ್ಮ ಪದವಿ ಕಾಲೇಜಿನ ಕನ್ನಡ ಉಪನ್ಯಾಸಕರಾದ ಪ್ರತಿಮಾ ರೈ ಸ್ವಾಗತಿಸಿ, ಶಿಬಿರಾರ್ಥಿ ಮುತ್ತಪ್ಪ ವಂದಿಸಿದರು.

ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಘಟಕದ ಶಿಬಿರಾರ್ಥಿಗಳು, ಸಂತ ಅನ್ನಮ್ಮ ಪದವಿ ಕಾಲೇಜಿನ ಉಪನ್ಯಾಸಕರು, ಸ.ಹಿ.ಪ್ರಾ ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು.