ನಾಪೋಕ್ಲು, ಮಾ. ೧೩: ಕೊಡವ ಕೂಟಾಳಿಯಡ ಕೂಟದ ವತಿಯಿಂದ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಕೊಡವ ಜನಾಂಗದ ಸಾಧಕ ಮಹಿಳೆಯರಿಗೆ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಮನೆ ಮನೆಗೆ ತೆರಳಿ ಸನ್ಮಾನಿಸಿ, ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ ಕ್ರೀಡಾ ಕ್ಷೇತ್ರದ ಸಾಧಕಿ ಮಾರಮಾಡ ಮಾಚಮ್ಮ, ಸಾಹಿತ್ಯ ಸೇವೆಯಲ್ಲಿ ಕಾಡ್ಯಮಾಡ ರೀಟಾ ಬೋಪಯ್ಯ, ಜ್ಯೋತಿಷ್ಯ ಮತ್ತು ಸಾಹಿತ್ಯ ಸೇವೆಯಲ್ಲಿ ಕರೋಟಿರ ಶಶಿ ಸುಬ್ರಮಣಿ ಮತ್ತು ಸಾಹಿತ್ಯ ಸೇವೆಯಲ್ಲಿ ಮಾಳೇಟಿರ ಸೀತಮ್ಮ ವಿವೇಕ್ ಇವರುಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸನ್ಮಾನ ಕಾರ್ಯಕ್ರಮದಲ್ಲಿ ಸಂಘಟನೆಯ ಅಧ್ಯಕ್ಷರಾದ ಚೊಟ್ಟಂಡ ಪ್ರಭು ಸೋಮಯ್ಯ, ಕಾರ್ಯದರ್ಶಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ, ಉಪಾಧ್ಯಕ್ಷರಾದ ಚಕ್ಕೆರ ರಾಜೇಶ್, ಗೌರವಾಧ್ಯಕ್ಷ ಚಂಗುಲAಡ ಸೂರಜ್, ಸ್ಥಾಪಕ ಅಧ್ಯಕ್ಷೆ ಚಿಮ್ಮಚ್ಚಿರ ಪವಿತಾ ರಜನ್, ಆಡಳಿತ ಪದಾಧಿಕಾರಿಗಳಾದ ಚೇಂದಿರ ಪ್ರೀಯಾ ಲೋಹಿತ್, ನೂರೆರ ಸರಿತಾ ಉತ್ತಯ್ಯ, ಪಾಂಡಿರ ದಿವ್ಯಾ ಉತ್ತಪ್ಪ, ಅಜ್ಜಮಾಡ ಸಾವಿತ್ರಿ, ದೇಯಂಡ ಕುಸುಮಾ ಅಶೋಕ್, ಕಳ್ಳೇಂಗಡ ಶೋಭಾ ಕಿರಣ್'ರವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಅಜ್ಜಮಾಡ ಸಾವಿತ್ರಿ, ಕೊಕ್ಕಂಡ ಸರಿತಾ, ಮುದ್ದಿಯಡ ಮಂಜು ಅವರು ವಹಿಸಿದ್ದರು.