ಮಡಿಕೇರಿ, ಮಾ. ೧೩: ಕರಡಿ ಗೋಡುವಿನ ಕೃಷಿಕ ಕುಕ್ಕುನೂರು ಚಿದಾನಂದ ಅವರ ಕಾಫಿ ತೋಟಕ್ಕೆ ಒಂಟಿ ಸಲಗವೊಂದು ಲಗ್ಗೆ ಇಟ್ಟು ಕಾಫಿ, ಕರಿಮೆಣಸು ಗಿಡ ಮರ ಹಾಗೂ ತೋಟದಲ್ಲಿ ಹಾದು ಹೋದ ಸ್ಪಿçÃಂಕ್ಲರ್ ಅಲ್ಯೂಮಿನಿಯಂ ಪೈಪನ್ನು ತುಳಿದು ನಾಶಪಡಿಸಿದೆ.

ಇದೀಗ ಮಳೆ ಇಲ್ಲದ ಕಾರಣ ತೋಟದಲ್ಲಿ ಕಾಫಿ ಗಿಡಗಳಿಗೆ ನೀರಾವರಿ ವ್ಯವಸ್ಥೆ ಕೈಗೊಳ್ಳಲು ಕಷ್ಟಕರವಾಗುತ್ತಿದೆ ಎಂದು ಕೃಷಿಕ ಚಿದಾನಂದ ಬೇಸರ ವ್ಯಕ್ತಪಡಿಸಿದ್ದಾರೆ. ಸಂಬAಧ ಪಟ್ಟ ಅರಣ್ಯ ಇಲಾಖೆಯವರು ಆದಷ್ಟು ಬೇಗ ಒಂಟಿ ಸಲಗವನ್ನು ಸೆರೆ ಹಿಡಿದು ನಾಡಿನಿಂದ ಬೇರೆಡೆಗೆ ಸ್ಥಳಾಂತರಿಸಬೇಕೆAದು ಒತ್ತಾಯಿಸಿದ್ದಾರೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆ ದಾಳಿ ಮಿತಿಮೀರಿದ್ದು ಸಾವು-ನೋವು ಸಂಭವಿಸಿದೆ. ರೈತರಿಗೆ ತಮ್ಮ ತೋಟಗಳಿಗೆ ನೀರಾವರಿ ವ್ಯವಸ್ಥೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅರಣ್ಯ ಅಧಿಕಾರಿಗಳು ಇತ್ತ ಗಮನಹರಿಸಿ ಕಾಡಾನೆ ದಾಳಿಗೆ ಹಾಗೂ ಕೃಷಿ ಪಸಲು ನಾಶಕ್ಕೆ ಸೂಕ್ತ ಪರಿಹಾರ ಹಾಗೂ ಕಾಡಾನೆಯ ದಾಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.