ಶ್ರೀಮಂಗಲ, ಮಾ. ೧೩: ಪೊನ್ನಂಪೇಟೆ ಅಡುಗೆ ಅನಿಲ ವಿತರಣಾ ಕೇಂದ್ರದ ಎದುರು ಗ್ರಾಹಕರು ಪರದಾಡಿದರು. ಪೊನ್ನಂಪೇಟೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಂಸ್ಥೆಯ ವಿತರಣಾ ಏಜನ್ಸಿ ಕೇಂದ್ರದ ಎದುರು ಗ್ರಾಹಕರು ಅನಿಲ ಬುಕ್ಕಿಂಗ್ ನಂಬರ್ ವಾರದಿಂದ ಎಲ್ಲವೂ ಸ್ಥಗಿತಗೊಳಿಸಿದ ಬಗ್ಗೆ ಐಒಸಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಹಕರ ಸಂಪರ್ಕಕ್ಕೆ ದೊರೆಯದ ಬುಕ್ಕಿಂಗ್ ನಂಬರ್, ಬುಕ್ಕಿಂಗ್ ನಂಬರಿಗೆ ಕರೆ ಮಾಡಿದರೆ ಮತ್ತು ಎಸ್ಎಂಎಸ್ ಮೂಲಕ ಸಂದೇಶ ಕಳುಹಿಸಿದರೂ ಅಲ್ಲಿಂದ ಓಟಿಪಿ ಬರುತ್ತಿಲ್ಲ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದರು. ಓಟಿಪಿ ಇಲ್ಲದೆ ಸಿಲಿಂಡರ್ ನೀಡಲು ಸರಕಾರದ ಆದೇಶದಂತೆ ಸಾಧ್ಯವಿಲ್ಲವೆಂದು ಸಿಲಿಂಡರ್ ವಿತರಕ ಏಜೆನ್ಸಿಯವರು ನಿರಾಕರಿಸಿದರು.
ತುಂಬಿದ ಅನಿಲ ಸಿಲಿಂಡರ್ ಪಡೆಯಲು ೨೫ ದಿನ ಇದ್ದ ಅವಧಿಯನ್ನು ೩೦ ದಿನಕ್ಕೆ ವಿಸ್ತರಿಸಲಾಗಿದೆ. ಇದೀಗ ಈ ಅವಧಿಯನ್ನು ೪೫ ದಿನಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಏಜೆನ್ಸಿ ಅವರು ತಿಳಿಸಿದರು. ಇದರಿಂದ ಕಂಗಾಲಾದ ಗ್ರಾಹಕರು, ವಾರದಿಂದ ಬುಕ್ಕಿಂಗ್ಗೆ ಪ್ರಯತ್ನಿಸಿದರೂ ಕರೆ ಕನೆಕ್ಟ್ ಆಗುತ್ತಿಲ್ಲ, ಈ ನಂಬರ್ ಅಸ್ತಿತ್ವದಲ್ಲಿ ಇಲ್ಲ ಎಂದು ಬರುತ್ತಿದೆ. ಇಲ್ಲಿ ಬಂದರೇ ಬುಕ್ಕಿಂಗ್ ಮತ್ತು ಓಟಿಪಿ ಇಲ್ಲದೆ ಸಿಲಿಂಡರ್ ಕೊಡುತ್ತಿಲ್ಲ ಎಂದು ಏಜನ್ಸಿಯವರೊಂದಿಗೆ ಅಸಮಾಧಾನ ವ್ಯಕ್ತಪಡಿಸಿ ಖಾಲಿ ಸಿಲಿಂಡರ್ನೊAದಿಗೆ ಹಿಂತಿರುಗುತ್ತಿದ್ದುದು ಕಂಡುಬAದಿತು.