ಮಡಿಕೇರಿ, ಮಾ. ೧೩: ಕೊಡಗು ಅಖಿಲ ಅಮ್ಮಕೊಡವ ಸಮಾಜದ ಅಭಿವೃದ್ದಿಗೆ ಸರ್ಕಾರದಿಂದ ಬಿಡುಗಡೆಯಾದ ೨೦ ಲಕ್ಷ ರೂ.ಗಳ ಚೆಕ್ ಅನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಅವರಿಗೆ ವಿಧಾನಸೌಧದಲ್ಲಿ ಹಸ್ತಾಂತರ ಮಾಡಿದರು.
ಈ ಸಂಧರ್ಭದಲ್ಲಿ ಅಮ್ಮ ಕೊಡವ ಸಮಾಜದ ಪ್ರಮುಖರಾದ ಪುತ್ತಾಮನೆ ಅನಿಲ್ ಪ್ರಸಾದ್, ನೇರಿಯಂಡಮ್ಮನ ಸುಬ್ರಮಣಿ, ಜನಾರ್ದನ, ಬಾನಂಡ ಸುನೀತ್, ಸೂದನ್, ಹೆಮ್ಮಚ್ಚಿಮನೆ ಎನ್ ಹರೀಶ್, ಹೆಚ್.ಎಂ.ಹರೀಶ್, ಮನ್ನಕಮನೆ ಎ ಬಾಲಕೃಷ್ಣ, ಎಂ.ಎA. ಬಾಲಕೃಷ್ಣ, ಹೆಚ್.ಆರ್. ಮದನ್, ಪುತ್ತಾಮನೆ ಪರ್ವತ್, ಯತೀಶ್, ಹೆಚ್.ಎಂ. ಪ್ರಶಾಂತ್, ಕೊಂಡಿAಜಮ್ಮನ ಬಾಲಕೃಷ್ಣ, ಶರಣು, ವಿಜು ಸೇರಿದಂತೆ ಇತರರು ಇದ್ದರು.