ಕೋವರ್‌ಕೊಲ್ಲಿ ಇಂದ್ರೇಶ್

ಮುಂಬೈ, ಮಾ. ೧೩: ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನಿನ ಸಹವರ್ತಿ ಅಬ್ಬಾಸ್ ಅರಗ್ಚಿ ನಡುವಿನ ರಾಜತಾಂತ್ರಿಕ ಮಾತುಕತೆಗಳ ನಂತರ, ಇರಾನ್ ಭಾರತದ ತೈಲ ಟ್ಯಾಂಕರ್‌ಗಳು ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗಲು ಅವಕಾಶ ನೀಡಿದೆ. ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪ್ರಕ್ಷುಬ್ದ ಪರಿಸ್ಥಿತಿಯ ನಡುವೆ ಭಾರತದ ಇಂಧನ ಆಮದುಗಳನ್ನು ರಕ್ಷಿಸುವ ಗುರಿಯನ್ನು ಈ ಕ್ರಮ ಹೊಂದಿದೆ.

ಇದು ಭಾರತದ ರಾಜತಾಂತ್ರಿಕತೆಯ ಚಾಣಾಕ್ಷತನ ಎಂದೇ ಹೇಳಲಾಗುತ್ತಿದೆ. ಎರಡೂ ದೇಶಗಳ ವಿದೇಶಾಂಗ ಸಚಿವರು ೧೧ ನೇ ತಾರೀಕಿನಂದು ದೂರವಾಣಿ ಮಾತುಕತೆ ನಡೆಸಿದ ನಂತರ ವಿದೇಶಾಂಗ ಇಲಾಖೆಯಿಂದ ಈ ಪ್ರಕಟಣೆ ನೀಡಿದೆ. ಫೆಬ್ರವರಿ ೨೮ ರಂದು ಅಮೆರಿಕ ಮತ್ತು ಇಸ್ರೇಲ್ ಇಸ್ಲಾಮಿಕ್ ಗಣರಾಜ್ಯದ ಮೇಲೆ ಪೂರ್ವಭಾವಿ ದಾಳಿಯನ್ನು ಪ್ರಾರಂಭಿಸಿದ ನಂತರ, ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ಈ ಮಾರ್ಗದ ಮೂಲಕ ಹಾದುಹೋಗುವ ಯಾವುದೇ ಹಡಗಿಗೆ ಇರಾನ್‌ನ ಪೂರ್ವಾನುಮತಿ ಅಗತ್ಯವಿದೆ ಎಂದು ಅದು ಘೋಷಿಸಿದೆ, ಇರಾನ್ ಸರ್ಕಾರದ ಅಧೀನದ ಸೇನಾ ವಿಭಾಗ ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ ಕಾರ್ಪ್ಸ್ (Isಟಚಿmiಛಿ ಡಿevoಟuಣioಟಿಚಿಡಿಥಿ ಉuಚಿಡಿಜs ಛಿoಡಿಠಿs (Iಖಉಅ ) ಹೊರ್ಮುಜ್ ಜಲಸಂಧಿಯಲ್ಲಿ ಕಾವಲು ಇದ್ದು ಈ ಜಲಸಂಧಿಯ ಮೂಲಕ ಅಮೆರಿಕಕ್ಕೆ ಒಂದು ಹನಿ ತೈಲವನ್ನು ಕೊಡಲು ಬಿಡುವುದಿಲ್ಲ” ಎಂದು ಹೇಳಿದೆ. ಮಾರ್ಚ್ ೧೨ ರಂದು ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತೀ ಬ್ಯಾರೆಲ್‌ಗೆ ಸುಮಾರು $೧೦೦.೨೫ ರಷ್ಟು ಏರಿಕೆ ದಾಖಲಿಸಿದೆ. ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯು ಇಂಧನ ಮತ್ತು ತೈಲ ಅಗತ್ಯಗಳಿಗಾಗಿ ಜಾಗತಿಕ ಭಯವನ್ನು ಹೆಚ್ಚಿಸಿದೆ ಏಕೆಂದರೆ ಇದು ವಿಶ್ವದ ಪ್ರಮುಖ ಕಡಲ ಚಾಕ್‌ಪಾಯಿಂಟ್‌ಗಳಲ್ಲಿ ಒಂದಾಗಿದೆ,

ಈ ಹೊರ್ಮುಜ್ ಜಲಸಂಧಿಯಿAದ ನಿತ್ಯ ನೂರಕ್ಕೂ ಹೆಚ್ಚು ಹಡಗುಗಳು ಚಲಿಸುತ್ತಿದ್ದು ಈ ತಿಂಗಳ ಮೊದಲ ದಿನದಿಂದ ಕೇವಲ ೨೦ ಹಡಗುಗಳಷ್ಟೇ ಸರಕು ಸಾಗಾಟ ನಡೆಸಿವೆ. ಈ ನಡುವೆ ಯುದ್ದದ ಭೀತಿಯಿಂದ ಅಲ್ಲಿ ಲಂಗರು ಹಾಕಿದ್ದ ಭಾರತೀಯ ಹಡಗು ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿದ್ದ ಕಚ್ಚಾ ತೈಲವನ್ನು ಹೊತ್ತ ಲೈಬೀರಿಯನ್ ಧ್ವಜದ ಟ್ಯಾಂಕರ್ ಮುಂಬೈ ಬಂದರಿಗೆ ಬುಧವಾರ ಸಂಜೆ ಆಗಮಿಸಿದೆ.

ಲೈಬೀರಿಯಾ ಧ್ವಜದ ಶೆನ್ ಲಾಗ್ ಸೂಯೆಜ್‌ಮ್ಯಾಕ್ಸ್ ಹಡಗು ಮಾರ್ಚ್ ೧ ರಂದು ಸೌದಿ ಬಂದರಾದ ರಾಸ್ ತನುರಾದಿಂದ ಕಚ್ಚಾ ತೈಲವನ್ನು ಹೊತ್ತುಕೊಂಡು ಭಾರತದತ್ತ ಹೊರಟಿತ್ತು. ಈ ಸಂದರ್ಭದಲ್ಲಿ ತನ್ನ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪ್ರಬಲ ದಾಳಿ ನಡೆಸಿದ್ದಕ್ಕೆ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿತ್ತು. ಹೀಗಾಗಿ ಹಡಗು ಸಮುದ್ರದಲ್ಲೇ ನಿಂತಿತ್ತು. ಮಾ.೮ ರಂದು ಜಲಸಂಧಿಯೊಳಗೆ ಹಡಗಿನ ಕೊನೆಯ ಸಿಗ್ನಲ್ ಸ್ಥಳವನ್ನು ತೋರಿಸಿತ್ತು. ಮಾ.೯ ರಂದು ಟ್ರ‍್ಯಾಕಿಂಗ್ ಡೇಟಾಬೇಸ್‌ಗಳಲ್ಲಿ ಮತ್ತೆ ಹಡಗು ಕಾಣಿಸಿಕೊಂಡಿತು. ೧,೩೫,೩೩೫ ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಬಂದ ಶೆನ್‌ಲಾಂಗ್ ಹಡಗಿನಿಂದ ತೈಲ ಅನ್ ಲೋಡ್ ಮಾಡಲಾಗುತ್ತಿದ್ದು ಪೂರ್ವ ಮುಂಬೈನ ಮಹುಲ್ ಸಂಸ್ಕರಣಾಗಾರಗಳಿಗೆ ತಲುಪಲು ೩೬ ಗಂಟೆಗಳು ಬೇಕಾಗುತ್ತದೆ ಎಂದು ಮುಂಬೈ ಬಂದರು ಪ್ರಾಧಿಕಾರ ತಿಳಿಸಿದೆ. ‘ಶೆನ್ಲಾಂಗ್ ಶಿಪ್ಪಿಂಗ್ ಲಿಮಿಟೆಡ್’ ಒಡೆತನದ ಈ ಹಡಗಿನಲ್ಲಿ ಭಾರತ, ಪಾಕಿಸ್ತಾನ ಹಾಗೂ ಫಿಲಿಪ್ಪೀನ್ಸ್ಗೆ ಸೇರಿದ ೨೯ ಸಿಬ್ಬಂದಿಗಳಿದ್ದಾರೆ.

ಭಾರತ ಮೂಲದ ೨೮ ಹಡಗುಗಳು ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿವೆ. ಹೊರ್ಮುಜ್ ಜಲಸಂಧಿಯ ಪಶ್ಚಿಮದಲ್ಲಿ ೨೪ ಹಡಗು ಹಾಗು ಪೂರ್ವದಲ್ಲಿ ೪ ಹಡಗುಗಳಿವೆ. ಅದರಲ್ಲಿರುವ ಭಾರತೀಯರ ರಕ್ಷಣೆಯು ನಮ್ಮ ಹೊಣೆಯಾಗಿದೆ ಎಂದು ಭಾರತ ಸರ್ಕಾರದ ಬಂದರುಗಳು, ಹಡಗು ಮತ್ತು ಜಲಮಾರ್ಗಗಳ ಸಚಿವಾಲಯವು ತಿಳಿಸಿದೆ.ಮಾರ್ಚ್ ೧೧ರಂದು ಭಾರತಕ್ಕೆ ಸರಕು ಹೊತ್ತು ತರುತ್ತಿದ್ದ ‘ಮಯೂರಿ ನಾರಿ’ ಹೆಸರಿನ ಹಡಗು ಹೊರ್ಮುಜ್ ಜಲಸಂಧಿ ಬಳಿ ಇರಾನ್‌ನ ಕ್ಷಿಪಣಿ ದಾಳಿಗೆ ತುತ್ತಾಗಿತ್ತು. ಘಟನೆಯಲ್ಲಿ ಇಬ್ಬರು ಭಾರತೀಯರು ಮೃತಪಟ್ಟಿದ್ದರು.