ಮಡಿಕೇರಿ, ಮಾ. ೧೩: ಜಿಲ್ಲೆಯಲ್ಲಿ ಸಂಭವಿಸುತ್ತಿರುವ ವನ್ಯಜೀವಿ-ಮಾನವ ಸಂಘರ್ಷ ತಡೆಗಟ್ಟುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ನಗರದ ಅರಣ್ಯ ಭವನಕ್ಕೆ ಮುತ್ತಿಗೆ ಹಾಕಿ, ರಾಷ್ಟಿçÃಯ ಹೆದ್ದಾರಿಯನ್ನು ತಡೆದು ಆಕ್ರೋಶ ವ್ಯಕ್ತಪಡಿಸಿತು.

ಅರಣ್ಯ ಭವನ ಎದುರಿನ ಮುಖ್ಯ ರಸ್ತೆಯಿಂದ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಕಚೇರಿ ತನಕ ಸಾಗಿ ಸರಕಾರ, ಸಚಿವರು, ಸ್ಥಳೀಯ ಜನಪ್ರತಿನಿಧಿಗಳು ಅರಣ್ಯ ಇಲಾಖೆ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.

ಭವನಕ್ಕೆ ಮುತ್ತಿಗೆ

ನಗರದ ಅರಣ್ಯ ಭವನದ ಎದುರು ಜಮಾಯಿಸಿದ ಪ್ರತಿಭಟನಾಕಾರರು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ ಆಗಮಿಸಿ ಮನವಿ ಸ್ವೀಕರಿಸುವಂತೆ ಪಟ್ಟುಹಿಡಿದರು. ಆರಂಭದಲ್ಲಿಯೇ ಭವನದ ಪ್ರವೇಶ ದ್ವಾರದಲ್ಲಿಯೇ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಕಾರ್ಯಕರ್ತರು ಒಳನುಗ್ಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ಪ್ರತಿಭಟನಾಕಾರರು ಆಗಮಿಸುತ್ತಿದಂತೆ ಅರಣ್ಯಾಧಿಕಾರಿಗಳ ಕಚೇರಿಗೆ ತೆರಳಲು ಅವಕಾಶ ನೀಡುವಂತೆ ಬ್ಯಾರಿಕೇಡ್ ತಳ್ಳಿ ಒಳನುಗ್ಗಲು ಪ್ರಯತ್ನ ನಡೆಸಿದರು. ಬ್ಯಾರಿಕೇಡ್‌ಗಳನ್ನು ಮೇಲೆತ್ತಿ ಒಳನುಗ್ಗುವ ಪ್ರಯತ್ನವನ್ನೂ ಪೊಲೀಸರು ತಡೆಯುವಲ್ಲಿ ಯಶಸ್ವಿಯಾದರು. ಈ ಸಂದರ್ಭ ಪೊಲೀಸರು ಹಾಗೂ ಪ್ರತಿಭಟನಾನಿರತರ ನಡುವೆ ತಳ್ಳಾಟ-ನೂಕಾಟದೊಂದಿಗೆ ಮಾತಿನ ಚಕಮಕಿಯೂ ನಡೆಯಿತು. ಈ ವೇಳೆ ಇನ್ನೂ ಕೆಲವೇ ಸಮಯದಲ್ಲಿ ಸಿಸಿಎಫ್ ಸ್ಥಳಕ್ಕೆ ಬರುತ್ತಾರೆ ಎಂದು ವನ್ಯಜೀವಿ ವಿಭಾಗದ ಡಿಎಫ್‌ಓ ನೆಹರು ಅವರು ಮಾಹಿತಿ ನೀಡಿದ ಮೇರೆಗೆ ಪ್ರಮುಖರು ಸಮಸ್ಯೆ ಕುರಿತು ಭಾಷಣ ಮಾಡಲಾರಂಭಿಸಿದರು. ನೀಡಿದ ಸಮಯ ಪೂರ್ಣಗೊಂಡು ಹೆಚ್ಚು ಸಮಯವಾದರೂ ಅಧಿಕಾರಿ ಮನವಿ ಆಲಿಸಲು ಬಂದಿಲ್ಲ ಎಂದು ಅಸಮಾಧಾನಿತರಾದ ಬಿಜೆಪಿ ಕಾರ್ಯಕರ್ತರು ಏಕಾಏಕಿ ಬ್ಯಾರಿಕೇಡ್‌ಗಳನ್ನು ತಳ್ಳಿ, ಪೊಲೀಸರಿಗೆ ಪ್ರತಿರೋಧ ಒಡ್ಡಿ ಭವನದ ಒಳಗೆ ಪ್ರವೇಶಿಸಿ ಕಚೇರಿಯೊಂದಕ್ಕೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾನಿರತರು ತಡೆದು ಮತ್ತೇ ಹೊರಕಳುಹಿಸಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು.

ಹೆದ್ದಾರಿ ತಡೆ

ಸಿಸಿಎಫ್ ಸ್ಥಳಕ್ಕಾಗಮಿಸದೆ ಇರುವುದು ಆಕ್ರೋಶ ಮತ್ತಷ್ಟು ಹೆಚ್ಚಾಗಲು ಕಾರಣವಾಯಿತು. ಏಕಾಏಕಿ ಪ್ರತಿಭಟನಾನಿರತರು ಅರಣ್ಯ ಭವನದಿಂದ ರಸ್ತೆಗೆ ಬಂದು ರಾಷ್ಟಿçÃಯ ಹೆದ್ದಾರಿಯಲ್ಲಿ ಕುಳಿತು ಪ್ರತಿಭಟನೆ ನಡೆಸಲು ಮುಂದಾದರು. ಪೊಲೀಸರು ಮನವೊಲಿಸುವ ಪ್ರಯತ್ನ ನಡೆಸಿದರೂ ಒಲ್ಲದ ಪ್ರತಿಭಟನಾಕಾರರು ಸರಕಾರ, ಅರಣ್ಯ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿ ವಾಹನ ಸಂಚಾರವನ್ನು ತಡೆದರು.

ಬಳಿಕ ನಗರ ಠಾಣಾಧಿಕಾರಿ ಧ್ವನಿವರ್ಧಕ ಮೂಲಕ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದು ಕಾನೂನಿಗೆ ವಿರುದ್ಧ. ತೆರವು ಮಾಡದಿದ್ದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇದಕ್ಕೂ ಬಗ್ಗದ ಪ್ರತಿಭಟನಾನಿರತರು ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ಮುಂದುವರೆಸಿದರು. ವಾಹನ ಓಡಾಟಕ್ಕೆ ಅವಕಾಶ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮಾಡಿಕೊಡುವಂತೆ ಪೊಲೀಸರು ಕೇಳಿಕೊಂಡ ಮೇರೆಗೆ ರಸ್ತೆಯ ಒಂದು ಭಾಗದಲ್ಲಿ ನಿಂತು ಪ್ರತಿಭಟನೆ ನಡೆಸಿದರು.

ಸಿಸಿಎಫ್ ವಾಹನಕ್ಕೂ ತಡೆ

ಬೆಳಿಗ್ಗೆ ೧೧ ಗಂಟೆಯಿAದ ಆರಂಭವಾದ ಪ್ರತಿಭಟನೆ ಈ ಎಲ್ಲಾ ಬೆಳವಣಿಗೆಯಿಂದ ಮಧ್ಯಾಹ್ನ ೨ ಗಂಟೆಯ ತನಕ ಮುಂದುವರೆಯಿತು. ಪರಿಸ್ಥಿತಿ ವಿಕೋಪಕ್ಕೆ ತೆರಳುತ್ತಿದ್ದಂತೆ ಸಿದ್ದಾಪುರದಿಂದ ಮಧ್ಯಾಹ್ನ ೨ ಗಂಟೆ ವೇಳೆಗೆ ಸಿಸಿಎಫ್ ಸೋನಲ್ ವೃಷ್ಣಿ ಮನವಿ ಸ್ವೀಕರಿಸಲು ಅರಣ್ಯ ಭವನಕ್ಕೆ ಆಗಮಿಸುತ್ತಿದ್ದರು. ಈ ವೇಳೆ ಹೆದ್ದಾರಿ ಮಧ್ಯೆಯಿಂದ ಪ್ರತಿಭಟನಾನಿರತರು ಸಿಸಿಎಫ್ ಅವರ ವಾಹನ ತಡೆಯುವ ಪ್ರಯತ್ನ ನಡೆಸಿದರು. ಪೊಲೀಸರು ತಕ್ಷಣ ಅಧಿಕಾರಿಗೆ ಸೂಕ್ತ ಭದ್ರತೆ ನೀಡಿ ಸುರಕ್ಷಿತ ಸ್ಥಳಕ್ಕೆ ಕರೆತಂದರು.

ಹೆದ್ದಾರಿ ಬದಿಯಲ್ಲಿಯೇ ಪ್ರತಿಭಟನಾಕಾರರು ತಮ್ಮ ಅಹವಾಲನ್ನು ಅಧಿಕಾರಿ ಎದುರು ತೆರೆದಿಟ್ಟರು. ಈ ಮೊದಲೇ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದರೂ ಮನವಿ ಸ್ವೀಕರಿಸಲು ತಡವಾಗಿ ಬಂದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ತರಾಟೆಗೆ ತೆಗೆದುಕೊಂಡರು. ಅರಣ್ಯ ಇಲಾಖೆ ವನ್ಯಜೀವಿ ಉಪಟಳ ತಡೆಗಟ್ಟುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.

ವನ್ಯಜೀವಿ ದಾಳಿಯಿಂದ ಮೃತಪಟ್ಟವರಿಗೆ ರೂ. ೧ ಕೋಟಿ ಪರಿಹಾರ, ವನ್ಯಜೀವಿ ಉಪಟಳ ತಡೆಗೆ ವೈಜ್ಞಾನಿಕ ಕ್ರಮ, ಮುಂದೆ ವನ್ಯಜೀವಿಯಿಂದ ಸಾವು ಸಂಭವಿಸಿದರೆ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ಮಾಡಬೇಕು ಸೇರಿದಂತೆ ಸಿ ಆ್ಯಂಡ್ ಡಿ ಲ್ಯಾಂಡ್ ಸ್ವಾಧೀನ ಕೈಬಿಡಬೇಕು, ಸಂಘ ಸಂಸ್ಥೆ, ವಿಪಕ್ಷ ಪ್ರಮುಖರೊಂದಿಗೆ ಅಧಿಕಾರಿಗಳು ಸಭೆ ನಡೆಸಿ ವಾಸ್ತವಾಂಶ ತಿಳಿದುಕೊಳ್ಳಬೇಕು ಹೀಗೆ ವಿವಿಧ ಬೇಡಿಕೆ ಮುಂದಿಟ್ಟರು.

ಜನವಿರೋಧಿ ನೀತಿ : ರಂಜನ್

ಜಿಲ್ಲೆಯ ಗಂಭೀರ ಸಮಸ್ಯೆಯಾಗಿರುವ ವನ್ಯಜೀವಿ-ಮಾನವ ಸಂಘರ್ಷವನ್ನು ಪರಿಹರಿಸಬೇಕಾದ ಸರಕಾರ ಜನವಿರೋಧಿ ಸುತ್ತೋಲೆಗಳನ್ನು ಹೊರಡಿಸುತ್ತ ಜನರ ಪ್ರಾಣಹಿಂಡುತ್ತಿದೆ ಎಂದು ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕಿಡಿಕಾರಿದರು.

ಕಾಡಾನೆ ದಾಳಿಯಿಂದ ಸರಣಿ ಸಾವುಗಳು ಸಂಭವಿಸುತ್ತಿವೆ. ಕೃಷಿ ಫಸಲು ನಾಶವಾಗುತ್ತಿದೆ. ಜನರು ನೆಮ್ಮದಿಯ ಬದುಕು ನಡೆಸುವುದೇ ದುಸ್ತರ ಎಂಬAತಾಗಿದೆ. ಇದನ್ನು ಸರಿಮಾಡಬೇಕಾದ ಸರಕಾರ ಗಾಯದ ಮೇಲೆ ಬರೆ ಎಂಬAತೆ ಅವೈಜ್ಞಾನಿಕ ಸುತ್ತೋಲೆಗಳ ಮೂಲಕ ಜನರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಿ ಮತ್ತು ಡಿ ಲ್ಯಾಂಡ್ ಜಾಗ ಅರಣ್ಯೀಕರಣ ಆಗಬಾರದೆಂದು ಆದೇಶವಿದ್ದರೂ ಅವೈಜ್ಞಾನಿಕ ಆದೇಶ ಹೊರಡಿಸಿ ಸುಮಾರು ೧೫ ಸಾವಿರ ಕುಟುಂಬಗಳನ್ನು ಬೀದಿಪಾಲು ಮಾಡುವ ಪ್ರಯತ್ನ ನಡೆದಿತ್ತು. ನಾಮಕಾವಸ್ಥೆಗೆ ಅಧ್ಯಯನ ಸಮಿತಿ ರಚಿಸಲಾಗಿದೆ. ಆದರೆ, ಈ ಆದೇಶವನ್ನು ಹಿಂಪಡೆಯಬೇಕು. ಖಾಸಗಿ ಜಮೀನಿನಲ್ಲಿರುವ ಮರಗಳ ಗಣತಿಗೂ ಮುಂದಾಗಿರುವುದು ಆಕ್ಷೇಪಾರ್ಹ. ೧೯೮೩ರ ನಂತರ ಮಂಜೂರಾತಿಯಾದ ಜಾಗದ ಪಟ್ಟಿ ನೀಡುವಂತೆ ಸೂಚಿಸಿ ಇದೀಗ ಸರಕಾರ ಆದೇಶಿಸಿದೆ. ಇದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದರು.

ರೈತರ ಜಾಗದಲ್ಲಿರುವ ಮರಗಳನ್ನು ಕಡಿಯಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ೧೦೦ ಸಿಎಫ್.ಟಿ. ಮರವನ್ನು ಆರ್‌ಎಫ್‌ಓ ಹಂತದಲ್ಲಿ ಅನುಮತಿ ಪಡೆದು ಕಡಿಯಲು ಅವಕಾಶವಿತ್ತು. ಕೆಲವೊಂದು ಮರಗಳಿಗೆ ಅನುಮತಿ ಬೇಡವಿದ್ದರೂ ದಾಖಲೆ ಸಲ್ಲಿಸಬೇಕೆಂದು ಮಡಿಕೇರಿ ಡಿಎಫ್‌ಓ ಆದೇಶಿಸುತ್ತಿದ್ದಾರೆ ಇದು ಸರಿಯಲ್ಲ. ಅರಣ್ಯ ಕಳ್ಳತನ ಅಧಿಕಾರಿಗಳಿಂದಲೇ ಆಗುತ್ತಿದೆ. ಬೇಡವಾದ ಮರ ತೆರವು ಮಾಡಿ ವನ್ಯಜೀವಿಗಳಿಗೆ ಬೇಕಾದ ಮರ ಅರಣ್ಯದಲ್ಲಿ ನೆಡಬೇಕು. ಅಧಿಕಾರಿಗಳಿಗೆ ಕೊಡಗಿನವರ ಕಷ್ಟ ತಿಳಿದಿಲ್ಲ ಎಂದು ಕಿಡಿಕಾರಿದರು.

ಸರಕಾರದ ಬೊಗಳೆ : ಕೆಜಿಬಿ ಟೀಕೆ

ವನ್ಯಜೀವಿ-ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ವೈಜ್ಞಾನಿಕ ಕ್ರಮಗಳನ್ನು ಅರಣ್ಯ ಇಲಾಖೆ ಮಾಡುತ್ತಿಲ್ಲ. ಸರಕಾರವೂ ಬೊಗಳೆ ಬಿಡುತ್ತಿದೆ ಹೊರತು ಪರಿಣಾಮಕಾರಿ ಕೆಲಸಗಳನ್ನೂ ಮಾಡಿಲ್ಲ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಟೀಕಿಸಿದರು.

ಕೊಡಗು ಹಾಗೂ ಮಲೆನಾಡು ಭಾಗದಲ್ಲಿ ವನ್ಯಜೀವಿ ಉಪಟಳದಿಂದ ಪರಿಸ್ಥಿತಿ ಕೈ ಮೀರಿದೆ. ಕಾಡಾನೆ ಹಾವಳಿ ಇಂದು ನಿನ್ನೆಯದಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಇದು ಅಧಿಕವಾಗುತ್ತಿದೆ. ೬ ತಿಂಗಳಿನಲ್ಲಿ ಸಂಘರ್ಷ ಪರಿಹರಿಸುವ ಭರವಸೆಯನ್ನು ೨೦೨೩ರ ಚುನಾವಣೆ ಪ್ರಣಾಳಿಕೆಯಲ್ಲಿ ಹಾಲಿ ಶಾಸಕರು ನೀಡಿದ್ದರು. ಆದರೆ, ಇಂದಿಗೂ ಪರಿಹಾರ ಕಂಡಿಲ್ಲ. ೨೦೨೩-೨೪ರ ಬಜೆಟ್‌ನಲ್ಲಿ ವನ್ಯಜೀವಿ ಹಾವಳಿ ನಿಯಂತ್ರಣಕ್ಕೆ ರೂ. ೧೨೦ ಕೋಟಿ ಘೋಷಣೆಯಾಗಿತ್ತು. ಇದರಲ್ಲಿ ಒಂದು ರೂಪಾಯಿ ಖರ್ಚಾಗಿಲ್ಲ. ಜಿಲ್ಲೆಯಲ್ಲಿ ಒಂದಿAಚು ಹೊಸ ಕಂದಕ, ರೈಲ್ವೆ ಬ್ಯಾರಿಕೇಡ್ ನಿರ್ಮಾಣವಾಗಿಲ್ಲ. ಸೋಲಾರ್ ಬೇಲಿ ಅಳವಡಿಸಿಲ್ಲ. ಬಿಜೆಪಿ ಅವಧಿಯಲ್ಲಿ ನಿರ್ಮಾಣವಾದ ಕಂದಕ, ರೈಲ್ವೆ ಬ್ಯಾರಿಕೇಡ್ ಸಮರ್ಪಕವಾಗಿ ನಿರ್ವಹಣೆಯಾಗುತ್ತಿಲ್ಲ ಎಂದ ಅವರು, ವನ್ಯಜೀವಿ ತಡೆಗಾಗಿ ಖರ್ಚು ಮಾಡಿದ ಹಣದ ಬಗ್ಗೆ ಸರಕಾರ ಲೆಕ್ಕಾಚಾರ ನೀಡಬೇಕು. ಕಾಡಾನೆ ದಾಳಿಯಿಂದ ಮೃತಪಟ್ಟವರಿಗೂ ಸಮರ್ಪಕವಾಗಿ ಪರಿಹಾರ ಕೈ ಸೇರುತ್ತಿಲ್ಲ. ಜನವಿರೋಧಿ ನೀತಿಯನ್ನು ಸರಕಾರ ಅನುಸರಿಸುತ್ತಿದೆ. ಸಹಿ ಹಾಕದ ಪರಿಹಾರ ಚೆಕ್ ಮೃತರ ಕುಟುಂಬಕ್ಕೆ ನೀಡಲಾಗಿದೆ ಎಂದು ದೂರಿದರು.

ಜನರು ಕಾನೂನನ್ನು ಕೈಗೆ ತೆಗೆದುಕೊಳ್ಳುವ ಮೊದಲು ಅರಣ್ಯ ಇಲಾಖೆಯ ನಿರಂಕುಶ ದರ್ಬಾರ್ ನಿಲ್ಲಬೇಕು. ಇಲ್ಲದಿದಲ್ಲಿ ಪೂರ್ವಜರು ಮಾಡುತ್ತಿದ್ದ ನರಿಮಂಗಲ (ಹುಲಿಮದುವೆ) ಆಚರಣೆ ಮತ್ತೇ ನಡೆಯಬಹುದು ಎಂದರು.

ಕೊಡಗು ಬಂದ್ : ರವಿ ಕಾಳಪ್ಪ ಎಚ್ಚರಿಕೆ

ವನ್ಯಜೀವಿ ಹಾವಳಿ ಪರಿಹರಿಸದಿದ್ದಲ್ಲಿ ಕೊಡಗು ಬಂದ್ ಅಥವಾ ಗಡಿ ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಸಿಎಂ, ಅರಣ್ಯ ಸಚಿವರು, ಶಾಸಕರು ಇಲ್ಲಿನ ಸಂಘ-ಸAಸ್ಥೆ, ವಿಪಕ್ಷಗಳೊಂದಿಗೆ ಸಭೆ ನಡೆಸಿ ಶಾಶ್ವತ ಪರಿಹಾರದ ಬಗ್ಗೆ ಚರ್ಚೆ ನಡೆಸಬೇಕು. ಬಿಟ್ಟಿ ಅಶ್ವಾಸನೆ ನೀಡುವುದು ಬಿಟ್ಟು ಶಾಶ್ವತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.

ಅರಣ್ಯ ಇಲಾಖೆ ದಬ್ಬಾಳಿಕೆಯಿಂದ ಕೊಡಗು ಜಿಲ್ಲೆಯ ಪರಿಸ್ಥಿತಿ ಹದಗೆಟ್ಟಿದೆ. ಸ್ವಯಂ ಪ್ರೇರಿತವಾಗಿ ಅರಣ್ಯ ರಕ್ಷಿಸಿದ ಪರಿಣಾಮ ಸಮಸ್ಯೆಗೆ ಸಿಲುಕಿದ್ದೇವೆ ಎಂಬ ಮನಸ್ಥಿತಿ ಮೂಡಿದೆ. ದೇವರಕಾಡು, ಖಾಸಗಿ ತೋಟದಲ್ಲಿ ಗಿಡ ನೆಟ್ಟು ಪೋಷಣೆ ಮಾಡುತ್ತ ಕೊಡಗಿನ ಜನರು ಬಂದಿದ್ದಾರೆ. ಆದರೆ, ಇದೀಗ ಜನರಿಗಿಂತ ಕಾಡುಪ್ರಾಣಿಗಳೇ ಹೆಚ್ಚಿವೆ. ಅರಣ್ಯಾಧಿಕಾರಿಗಳಿಗೆ ಈ ಬಗ್ಗೆ ಕಿಂಚಿತ್ತೂ ನೋವಿಲ್ಲ. ಬೆಳೆಗಳು ನಾಶವಾಗುತ್ತಿದೆ. ಪ್ರಾಣ ಹಾನಿ ಸಂಭವಿಸುತ್ತಿದೆ. ಆನೆ ಬಹುತೇಕ ಕಡೆಗಳಲ್ಲಿದೆ. ಕೃಷಿಕರು, ಕಾರ್ಮಿಕ ವರ್ಗದವರು ತೋಟಕ್ಕೆ ತೆರಳಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಅರಣ್ಯ ಇಲಾಖೆ ಯಾವ ಗೋಜಿಗೆ ಹೋಗದ ನಿಷ್ಪçಯೋಜಕ ಸ್ಥಿತಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರಾಣಕ್ಕೆ ಬೆಲೆ ಕಟ್ಟಲಾಗುವುದಿಲ್ಲ. ಕೇವಲ ಹಣದ ಪರಿಹಾರವಲ್ಲ. ಕೊಡಗಿಗೆ ವಿಶೇಷ ಕಾನೂನು ಜಾರಿ ಮಾಡಬೇಕು. ಉಪಟಳ ನೀಡುತ್ತಿರುವ ಆನೆಗಳನ್ನು ತಕ್ಷಣ ಸೆರೆಹಿಡಿಯಬೇಕು. ಖಾಸಗಿ ಜಮೀನಿಗೆ ಬರದಂತೆ ಕ್ರಮಕೈಗೊಳ್ಳಬೇಕು. ಕಾಡಾನೆ ದಾಳಿ ನಡೆದ್ದಲ್ಲಿ ಅರಣ್ಯ ಇಲಾಖೆ ಹೊಣೆ ಹೊರಬೇಕು. ಅರಣ್ಯಾಧಿಕಾರಿಗಳ ವಿರುದ್ಧ ಎಫ್‌ಐಆರ್ ಆಗಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಮಾತನಾಡಿ, ಜನರ ಕಷ್ಟಕ್ಕೆ ಅಧಿಕಾರಿಗಳು ಸ್ಪಂದಿಸಬೇಕು. ಕಾಡಾನೆ ದಾಳಿಯಿಂದ ಮೃತಪಟ್ಟ ಯುವತಿ ಕುಟುಂಬಕ್ಕೆ ಸಹಿ ಹಾಕದ ಚೆಕ್ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ರಾಜ್ಯ ಕೃಷಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ. ಬಿ.ಸಿ. ನವೀನ್ ಕುಮಾರ್ ಮಾತನಾಡಿ, ವನ್ಯಜೀವಿ ದಾಳಿಯಿಂದ ನೂರಾರು ಜನ ಸಾವನ್ನಪ್ಪಿದ್ದಾರೆ. ಆದರೆ, ವೈಜ್ಞಾನಿಕ ಸಮೀಕ್ಷೆ ಇದುವರೆಗೂ ಮಾಡಿಲ್ಲ. ಸಾಮಾನ್ಯ ಜ್ಞಾನ ಇಲ್ಲದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ನೆಲ್ಲೀರ ಚಲನ್, ಮಹೇಶ್ ಜೈನಿ, ಲೋಕೇಶ್, ಉಪಾಧ್ಯಕ್ಷರುಗಳಾದ ಕುಂಞAಡ ಅರುಣ್ ಭೀಮಯ್ಯ, ಗುಮ್ಮಟಿರ ಕಿಲನ್ ಗಣಪತಿ, ಜಿಲ್ಲಾ ವಕ್ತಾರ ತಳೂರು ಕಿಶೋರ್ ಕುಮಾರ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ಮಾಪಂಗಡ ಯಮುನಾ ಚಂಗಪ್ಪ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷರುಗಳಾದ ಬಿ.ಬಿ. ಭಾರತೀಶ್, ಪಳೆಯಂಡ ರಾಬಿನ್ ದೇವಯ್ಯ, ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಮಡಿಕೇರಿ ಗ್ರಾಮಾಂತರ ಮಂಡಲ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಕೆ. ಜಗದೀಶ್, ಪ್ರಮುಖರಾದ ಶಾಂತೆಯAಡ ರವಿ ಕುಶಾಲಪ್ಪ, ಕಾಂಗೀರ ಸತೀಶ್, ಕಾಂತಿ ಸತೀಶ್, ಅರುಣ್ ಶೆಟ್ಟಿ ಸೇರಿದಂತೆ ಇನ್ನಿತರರು ಹಾಜರಿದ್ದರು.

ಡಿವೈಎಸ್‌ಪಿ ಸೂರಜ್, ಮಹೇಶ್ ಕುಮಾರ್, ಸಿಪಿಐಗಳಾದ ಪಿ.ಕೆ. ರಾಜು, ಅನೂಪ್ ಮಾದಪ್ಪ ಅವರ ನೇತೃತ್ವದಲ್ಲಿ ಪೊಲೀಸ್ ಬಿಗಿಭದ್ರತೆಯನ್ನು ಕೈಗೊಳ್ಳಲಾಗಿತ್ತು.