ಸಿದ್ದಾಪುರ, ಮಾ. ೧೨: ಮಾಲ್ದಾರೆಯ ಶ್ರೀ ಐಶ್ವರ್ಯ ಗಣಪತಿ ಮತ್ತು ಶ್ರೀ ಮುತ್ತಪ್ಪ ದೇವಾಲಯದ ವಾರ್ಷಿಕೋತ್ಸವ ಮತ್ತು ತೆರೆ ಮಹೋತ್ಸವ ವಿವಿಧ ಪೂಜಾ ಕಾರ್ಯಕ್ರಮಗಳೊಂದಿಗೆ ತಾ.೧೪ ಮತ್ತು ೧೫ ರಂದು ನಡೆಯಲಿದೆ ಎಂದು ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
ತಾ.೧೪ ರಂದು ಬೆಳಿಗ್ಗೆ ೮ ಗಂಟೆಗೆ ಗಣಪತಿ ಹೋಮ, ಅಪರಾಹ್ನ ೩ ಗಂಟೆಗೆ ಧ್ವಜಾರೋಹಣ, ೩:೧೫ಕ್ಕೆ ಮುತ್ತಪ್ಪನ ಮಲೆ ಇಳಿಸುವುದು, ಸಂಜೆ ೫ ಗಂಟೆಗೆ ಮುತ್ತಪ್ಪನ ವೆಳ್ಳಾಟಂ, ೬ ಗಂಟೆಗೆ ಗುಳಿಗನ ವೆಳ್ಳಾಟಂ, ರಾತ್ರಿ ೭ ಗಂಟೆಗೆ ಕುಟ್ಟಿಚಾತನ್ ವೆಳ್ಳಾಟಂ, ರಾತ್ರಿ ೮ಕ್ಕೆ ಕಂಡ ಕರ್ಣನ್ ವೆಳ್ಳಾಟ್ಟಂ, ರಾತ್ರಿ ೯ಕ್ಕೆ ವಸೂರಿಮಲೆ ಸ್ನಾನಕ್ಕೆ ತೆರಳುವುದು, ೯:೩೦ಕ್ಕೆ ವಿಷ್ಣುಮೂರ್ತಿ ವೆಳ್ಳಾಟಂ, ರಾತ್ರಿ ೧೧ಕ್ಕೆ ವಸೂರಿಮಾಲ ವೆಳ್ಳಾಟಂ ನಡೆಯಲಿದೆ.
ತಾ.೧೪ರ ಮಧ್ಯರಾತ್ರಿ ೧೨ ಗಂಟೆಗೆ ಕಳಿಗೆ ಪಾಟ್ ಹಾಗೂ ಪೋದಿ ಭಗವತಿ ವೆಳ್ಳಾಟಂ, ತಾ.೧೫ರ ಮುಂಜಾನೆ ೨ ಗಂಟೆಗೆ ಗುಳಿಗನ ತೆರೆ, ಮುಂಜಾನೆ ನಾಲ್ಕು ಗಂಟೆಗೆ ಕಂಡ ಕರ್ಣನ ತೆರೆ, ೫ಕ್ಕೆ ಮುತ್ತಪ್ಪನ-ತಿರುವಪ್ಪನ ತೆರೆ, ಬೆಳಿಗ್ಗೆ ೭ಕ್ಕೆ ಕುಟ್ಟಿಚಾತನ ತೆರೆ, ೯ಕ್ಕೆ ವಸೂರಿ ಮಾಲೆ ತೆರೆ, ೧೦ಕ್ಕೆ ವಿಷ್ಣುಮೂರ್ತಿ ತೆರೆ, ೧೧ ಗಂಟೆಗೆ ಭಗವತಿ ಪೋದಿ ತೆರೆ ನಡೆಯಲಿದೆ. ತೆರೆ ಮಹೋತ್ಸವ ಅಂಗವಾಗಿ ಎರಡು ದಿನಗಳ ಕಾಲ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.