ಸೋಮವಾರಪೇಟೆ: ತಾಲೂಕಿನ ಯಡವನಾಡು ಸಮುದಾಯ ಭವನದಲ್ಲಿ ಸೋಮವಾಪೇಟೆ ವಲಯ ವ್ಯಾಪ್ತಿಯ ಹುದುಗೂರು ಶಾಖೆಯ ಸಜ್ಜಳ್ಳಿ ಹಾಡಿ, ಗಂಧದ ಹಾಡಿ, ಸೂಳೆಬಾವಿ ಹಾಡಿ, ಕೂಪ್ ಹಾಡಿ, ಮತ್ತು ಹೆಬ್ಬಾಲೆ ಶಾಖೆಯ ಹುಣಸೆಪಾರೆ ಹಾಡಿಗಳಲ್ಲಿ ವಾಸಿಸುತ್ತಿರುವ ಕಾಡಂಚಿನ ಬುಡಕಟ್ಟು ಕುಟುಂಬಗಳ ಸದಸ್ಯರು ಹಾಗೂ ಆಶ್ರಮ ಶಾಲೆ ವಿದ್ಯಾಥಿಗಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.

ಈ ಸಂದರ್ಭ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ ಮಾತನಾಡಿ, ಸ್ಥಳಿಯ ಜನರಿಗೆ ಆರೋU್ಯÀ ಮತ್ತು ಪೌಷ್ಟಿಕಾಂಶದ ಆಹಾರದ ಮಹತ್ವ, ನೀರಿನ ಶುಚಿತ್ವ ಸೇರಿದಂತೆ ಇನ್ನಿತರ ಮಾಹಿತಿಯನ್ನು ಹಾಡಿ ಜನರಿಗೆ ಮನವರಿಕೆ ಮಾಡುವ ಸಲುವಾಗಿ ಅರಣ್ಯ ಇಲಾಖಾ ವತಿಯಿಂದ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ತಜ್ಞ ವೈದ್ಯರಾದ ಸುರೇಶ್ ಕನಕನವರ್, ಸ್ತಿçÃರೋಗ ತಜ್ಞ ಧನಂಜಯ, ಮಕ್ಕಳ ತಜ್ಞ ಮೈಸೂರಿನ ಸರ್ಕಾರಿ ಆಸ್ಪತ್ರೆಯ ಸೋಮಶೇಖರ್, ಅರವಳಿಕೆ ತಜ್ಞ ದೇವಿ ಆನಂದ್ ಸೇರಿದಂತೆ ಸಿಬ್ಬಂದಿಗಳು ಶಿಬಿರದಲ್ಲಿ ಭಾಗವಹಿಸಿ, ಹಾಡಿವಾಸಿಗಳ ಆರೋಗ್ಯ ತಪಾಸಣೆ ನಡೆಸಿದರು. ಶಿಬಿರದಲ್ಲಿ ೧೪೦ ಮಕ್ಕಳು, ೭೦ ಮಂದಿ ಹಾಡಿವಾಡಿಗಳು, ೨೦ ಅರಣ್ಯ ಇಲಾಖಾ ಸಿಬ್ಬಂದಿಗಳು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಈ ಸಂದರ್ಭ ಸೋಮವಾರಪೇಟೆ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್, ಬುಡಕಟ್ಟು ಜನಾಂಗದ ಅದ್ಯsಕ್ಷ ರವಿ ಹಾಗೂ ವಿವಿಧ ಇಲಾಖಾಧಿಕಾರಿಗಳು ಇದ್ದರು.