ಸೋಮವಾರಪೇಟೆ: ಇಲ್ಲಿನ ಡಾಲ್ಫೀನ್ಸ್ ಸ್ಪೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ದಿ.ರಂಗಸ್ವಾಮಿ ಚೂರಿಗಿಡ್ನ ಸ್ಮಾರಕ ಹಾಕಿ ಪಂದ್ಯಾವಳಿಯಲ್ಲಿ ಕ್ರೀಡೆ ಹಾಗೂ ಸಾಮಾಜಿಕ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು.

ಹಾಕಿ ತರಬೇತುದಾರರಾದ ಜನಾರ್ಧನ್, ದೇವದಾಸ್, ವೆಂಕಟೇಶ್, ಹಾಕಿ ಆಟಗಾರ ಬಿ.ಎಂ. ಲಿಖಿತ್, ಸೂರ್ಯ, ದೃತಿ ವರ್ಣೇಕರ್, ಎಚ್.ಎ. ವಚನ್, ಬಿ.ಆರ್. ಬಿಪಿನ್, ಕೆಎಸ್‌ಆರ್‌ಟಿಸಿ ನಿರ್ವಾಹಕಿ ಮಾಯಾ ಗಿರೀಶ್, ಪೌರಕಾರ್ಮಿಕರಾದ ಕಾಳಮ್ಮ, ಸೇವೆಯ ಲ್ಲಿದ್ದಾಗಲೇ ಮರಣವನ್ನಪ್ಪಿದ ಯೋಧ ದಿವಿನ್ ತಾಯಿ ಜಲಜಾಕ್ಷಿ, ಸರ್ಕಾರಿ ಆಸ್ಪತ್ರೆ ಡಿ. ಗ್ರೂಪ್ ಸಿಬ್ಬಂದಿ ಮಂಜುನಾಥ್ ಅವರುಗಳನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ದಾನಿಗಳಾದ ಬಿ.ಆರ್. ವೇಣು, ವಿಜಯ್, ಲಲಿತಾ ರಂಗಸ್ವಾಮಿ, ಕ್ಲಬ್ ಅಧ್ಯಕ್ಷ ಮಹೇಶ್, ಗೌರವಾಧ್ಯಕ್ಷ ಹೆಚ್.ಎನ್. ಅಶೋಕ್, ಹಾಕಿ ಕರ್ನಾಟಕ ಕಾರ್ಯದರ್ಶಿ ಎ.ಬಿ.ಸುಬ್ಬಯ್ಯ, ಅಂತರ‍್ರಾಷ್ಟಿçÃಯ ಹಾಕಿ ಆಟಗಾರರಾದ ಅರ್ಜುನ್ ಹಾಲಪ್ಪ, ಎಸ್.ವಿ.ಸುನಿಲ್, ವಿಕ್ರಂ ಕಾಂತ್, ಉದ್ಯಮಿ ಕೆ.ಟಿ. ಸತೀಶ್ ಸೇರಿದಂತೆ ಇತರರು ಇದ್ದರು.