ವೀರಾಜಪೇಟೆ, ಮಾ. ೧೦: ವ್ಯಾಪಾರ ವಹಿವಾಟು ಮುಗಿಸಿ ಮುಚ್ಚಲಾಗಿದ್ದ ಮದ್ಯದ ಅಂಗಡಿ ಕಳ್ಳತನಕ್ಕೆ ಯತ್ನಿಸಿದ ಘಟನೆ ವೀರಾಜಪೇಟೆ ಹೃದಯ ಭಾಗದಲ್ಲಿ ನಡೆದಿದೆ. ವೀರಾಜಪೇಟೆ ನಗರದ ಎಫ್.ಎಂ.ಸಿ. ರಸ್ತೆಯ ಕೊಡಗು ಜಿಲ್ಲಾ ಸಹಕಾರ ಮಾರಾಟ ಮಹಾ ಮಂಡಳ ನಿಯಮಿತ ಹೊಂದಿರುವ ಮದ್ಯದ ಅಂಗಡಿ ಮಳಿಗೆಗೆ ವ್ಯಕ್ತಿಯೋರ್ವ ಕಳ್ಳತನ ಮಾಡಲು ಯತ್ನಿಸಿ ವಿಫಲನಾಗಿದ್ದಾನೆ.
ತಾ. ೯ ರಂದು ಮಳಿಗೆಯಲ್ಲಿ ಜೀವನ್, ಚಿಟ್ಟಿಯಪ್ಪ, ನಾಚಪ್ಪ ಮತ್ತು ಅಭಿಷೇಕ್ ಸಿಬ್ಬಂದಿಗಳು ವ್ಯಾಪಾರ ವಹಿವಾಟು ಮುಗಿಸಿ ಮನೆಗೆ ಹಿಂದಿರುಗಿದ್ದಾರೆ. ಇಂದು ಬೆಳಿಗ್ಗೆ ೧೦ ರ ಸಮಯದಲ್ಲಿ ಅಂಗಡಿ ಸಿಬ್ಬಂದಿಗಳು ಮಳಿಗೆಗೆ ಬಂದು ನೋಡಿದಲ್ಲಿ ಮಳಿಗೆಯ ಎರಡು ಬೀಗಗಳು ಒಡೆದಿರುವುದು ಗೋಚರಿಸಿದೆ. ಸಂಶಯದಿAದ ಫೆಡರೇಶನ್ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಲಾಯಿತು. ನಂತರ ನಗರ ಠಾಣೆಗೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ವೀರಾಜಪೇಟೆ ನಗರ ಠಾಣೆಯ ಠಾಣಾಧಿಕಾರಿಗಳು ಪ್ರಮೋದ್ ಮತ್ತು ಎ.ಎಸ್.ಐ. ಕಾವೇರಪ್ಪ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದಿದ್ದಾರೆ. ಫೆಡರೇಶನ್ನ ಕಾರ್ಯದರ್ಶಿ ಚಂದ್ರಕಾAತ್ ನೀಡಿರುವ ದೂರಿನ ಮೇರೆಗೆ ವೀರಾಜಪೇಟೆ ನಗರ ಠಾಣೆಯಲ್ಲಿ ಕಳ್ಳತನಕ್ಕೆ ಯತ್ನ ಪ್ರಕರಣ ದಾಖಲಾಗಿದ್ದು ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.