ಮಡಿಕೇರಿ, ಮಾ. ೧೦: ಸೂಕ್ತ ವಿದ್ಯೆಯ ಜೊತೆಗೆ ಅಂಜಿಕೆಯಿಲ್ಲದೇ ಜೀವಿಸುವ ರೀತಿಯನ್ನು ಹೆಣ್ಣು ಮಕ್ಕಳಿಗೆ ಪೋಷಕರು ಕಲಿಸುವುದು ಇಂದಿನ ಸಮಾಜದಲ್ಲಿ ಅತ್ಯಗತ್ಯವಾಗಿದೆ ಎಂದು ಕೊಡಗು ಜಿಲ್ಲಾ ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಹೇಳಿದರು.

ನಗರದ ರೆಡ್‌ಬ್ರಿಕ್ಸ್ ಇನ್‌ನ ಸತ್ಕಾರ ಸಭಾಂಗಣದಲ್ಲಿ ಭಾರತೀಯ ರೆಡ್‌ಕ್ರಾಸ್ ಕೊಡಗು ಜಿಲ್ಲಾ ಘಟಕದಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರದೊಂದಿಗೆ ಮಹಿಳಾ ದಿನಾಚರಣೆ ಹಿನ್ನೆಲೆ ಆಯೋಜಿತ ಕ್ಯಾನ್ಸರ್ ತಪಾಸಣಾ ಶಿಬಿರ, ಕ್ಯಾನ್ಸರ್ ಮಾಹಿತಿ ಜಾಗೃತಿ ಶಿಬಿರದಲ್ಲಿ ‘ಅವಳ ಕನಸಿಗೊಂದು ರೆಕ್ಕೆ ಕೊಡಿ’ ವಿಚಾರವಾಗಿ ಅವರು ಮಾತನಾಡಿದರು.

ಸೀತೆ, ಸಾವಿತ್ರಿ, ಅಹಲ್ಯರ ಕಥೆ ಹೇಳುತ್ತಲೇ ನೀವು ಇದೇ ರೀತಿ ಜೀವಿಸಬೇಕು ಎಂಬ ಚೌಕಟ್ಟನ್ನು ಸಮಾಜದಲ್ಲಿ ಹಿರಿಯರು ಮಹಿಳೆಯರಿಗೆ ಹಾಕಿಕೊಟ್ಟಿದ್ದರು. ಆದರೆ ಬದಲಾದ ಸಮಾಜದಲ್ಲಿ ಪ್ರತೀ ಮಹಿಳೆಯೂ ಬದಲಾಗಬೇಕಾಗಿದೆ. ೪೦ ವರ್ಷ ಮೀರಿದವರು ತಮ್ಮ ಜೀವನದ ಕನಸುಗಳೆಲ್ಲಾ ಮುಕ್ತಾಯಗೊಂಡAತೆ ನೀರಸವಾಗಿರುತ್ತಾರೆ. ಇದರ ಬದಲಿಗೆ ಕನಸುಗಳ ರೆಕ್ಕೆ ಕಟ್ಟಿಕೊಂಡು ಹೊಸ ಚಿಂತನೆಯೊAದಿಗೆ ಸಂಭ್ರಮದಿAದ ಜೀವಿಸಲು ಮಹಿಳೆ ಮುಂದಾಗಬೇಕಾಗಿದೆ ಎಂದು ಮಿಲನಾ ಭರತ್ ಹೇಳಿದರು.

ಮಡಿಕೇರಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗದ ವೈದ್ಯಾಧಿಕಾರಿ ಡಾ. ಸುಮುಖ್ ಮಾತನಾಡಿ, ಮಹಿಳೆಯರು ಕೀಳರಿಮೆಯಿಂದ ಹೊರಬರುವುದು ಅತ್ಯಂತ ಅಗತ್ಯ. ತಮಗೆ ಮಾನಸಿಕ, ದೈಹಿಕ ಸಮಸ್ಯೆಗಳು ಕಾಡಿದಾಗ ಕೀಳರಿಮೆಯಿಂದ ಅನೇಕ ಮಹಿಳೆಯರು ಅದನ್ನು ಹೊರಗೆಡಹದೇ ಮುಚ್ಚಿಟ್ಟುಕೊಂಡು ತರುವಾಯ ಗಂಭೀರ ಆರೋಗ್ಯ ಸಮಸ್ಯೆ ಎದುರಿಸುತ್ತಾರೆ. ಇದರ ಬದಲಿಗೆ ಯಾವುದೇ ಸಮಸ್ಯೆ ಕಾಡಿದಾಗ ವೈದ್ಯರನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಸಿಕೊಂಡಾಗ ಕುಟುಂಬಕ್ಕೆ ಅದು ಒಳಿತುಂಟುಮಾಡುತ್ತದೆ ಎಂದರು. ೪೦ ವರ್ಷ ಮೇಲ್ಪಟ್ಟವರು ವರ್ಷಕ್ಕೊಮ್ಮೆ ಸಂಪೂರ್ಣ ರೀತಿಯಲ್ಲಿ ಆರೋಗ್ಯ ತಪಾಸಣೆ ಮಾಡಿಕೊಳ್ಳಲೇಬೇಕು ಎಂದು ಸಲಹೆ ನೀಡಿದ ಡಾ. ಸುಮುಖ್, ಮಹಿಳೆಯರೇ ಪ್ರತಿಯೊಂದು ಕುಟುಂಬದ ಆಧಾರ ಸ್ತಂಭ ಎನ್ನುತ್ತೇವೆ. ಇಂತಹ ಮಹಿಳೆಯರು ಆರೋಗ್ಯವಂತರಾಗಿರುವAತೆ ಗಮನಹರಿಸಿ ಕಾಳಜಿ ತೋರಬೇಕಾಗಿರುವುದು ಕೂಡ ಆಕೆಯ ಕುಟುಂಬ ಸದಸ್ಯರ ಕರ್ತವ್ಯ ಎಂದು ಕಿವಿಮಾತು ಹೇಳಿದರು.

ವೀರಾಜಪೇಟೆಯ ವಕೀಲೆ ಸಿಂಧೂರ ಎನ್. ಸ್ವಾಮಿ, ‘ಕಾನೂನು ನಿಮಗೂ ಗೊತ್ತಿರಲಿ’ ಎಂಬ ವಿಚಾರದ ಬಗ್ಗೆ ಮಾತನಾಡಿ, ಎಲ್ಲಿಂದಲೋ ಬಂದು ಭಾರತಕ್ಕೆ ಧಾಳಿಯಿಟ್ಟಿದ್ದ ಮೊಘಲರು ಸೇರಿದಂತೆ ವಲಸಿಗರು ಭಾರತದಲ್ಲಿ ಮಹಿಳೆಯರಿಗೆ ದೊರಕುತ್ತಿದ್ದ ಗೌರವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದರು. ಭಾರತೀಯ ಮಹಿಳೆಯರು ಶಾಂತಿಯAತೆ ಕ್ರಾಂತಿಗೂ ಸೈ ಎಂಬುದನ್ನು ಯಾರೂ ಮರೆಯುವಂತಿಲ್ಲ ಎಂದರು.

ವಿದೇಶದಲ್ಲಿ ಮಹಿಳೆಯರಿಗೆ ಗೌರವ ಕಡಿಮೆಯಿದ್ದ ಸಂದರ್ಭ ಮಹಿಳೆಯರಿಗಾಗಿ ಪ್ರತ್ಯೇಕ ಕಾನೂನಿನ ಅಗತ್ಯ ಕಂಡುಬAದಿತ್ತು. ವಿದೇಶಿಯರನ್ನೇ ಅನುಕರಿಸಿದ ಭಾರತದಲ್ಲಿಯೂ ಮಹಿಳೆಯರಿಗೆ ಕಾನೂನು ಜಾರಿಗೊಂಡಿತ್ತು. ಇಂತಹ ಕಾನೂನು ಕೆಲವೊಮ್ಮೆ ಮಹಿಳೆಯರಿಂದಲೇ ದುರುಪಯೋಗವಾಗುತ್ತಿರುವ ಪ್ರಕರಣಗಳೂ ಹೆಚ್ಚುತ್ತಿವೆ. ಇದು ಆಗಬಾರದು ಎಂದು ಸಿಂಧೂರ ಸ್ವಾಮಿ ಸಲಹೆ ಮಾಡಿದರು.

‘ಯೋಗ, ಧ್ಯಾನ ಮತ್ತು ಶಾಂತತೆ’ ವಿಚಾರದ ಬಗ್ಗೆ ಉಪನ್ಯಾಸ ನೀಡಿದ ಯೋಗ ಗುರು ಶಿಲ್ಪಾ ರೈ, ಶಾಂತತೆಗೆ ಮತ್ತೊಂದು ಹೆಸರಾಗಿರುವ ಮಹಿಳೆಯ ಶಾಂತಚಿತ್ತತೆಯನ್ನು ಕದಡುವ ಕೆಲಸ ಮನೆ ಮತ್ತು ಮನೆಯ ಹೊರಗಡೆಯೂ ಆಗಿಂದಾಗ್ಗೆ ಸಂಭವಿಸುತ್ತದೆ. ಇಂತಹ ಸಂದರ್ಭ ಧ್ಯಾನ ಮತ್ತು ಯೋಗ ಕಲಿತ ಮಹಿಳೆಯರು ಮಾನಸಿಕವಾಗಿ ಶಾಂತರಾಗಿರಲು ಸಾಧ್ಯವಿದೆ ಎಂದರು. ಆಲಸ್ಯ, ಖಿನ್ನತೆಯನ್ನು ಹೋಗಲಾಡಿಸಲು ಯೋಗ ಸಹಕಾರಿಯಾಗಿದ್ದು, ಮನಸ್ಸಿನ ಸಂತೋಷಕ್ಕೂ ಯೋಗ ಕಾರಣವಾಗುತ್ತದೆ ಎಂದು ಅವರು ನುಡಿದರು.

ಕೊಡಗು ವೈದ್ಯಕೀಯ ಸಂಸ್ಥೆಯ ಸ್ತಿçÃರೋಗ ಮತ್ತು ಪ್ರಸೂತಿ ವಿಭಾಗದ ವೈದ್ಯಾಧಿಕಾರಿ ಡಾ. ಬಿ.ಕೆ. ರಾಜೇಶ್ವರಿ ಮಾತನಾಡಿ, ಗರ್ಭ ಕಂಠದ ಕ್ಯಾನ್ಸರ್ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ೧೪ ವರ್ಷದ ಬಾಲಕಿಯರಿಗೆ ಲಸಿಕೆಯನ್ನು ಕಡ್ಡಾಯವಾಗಿ ನೀಡಬೇಕಾಗಿದೆ. ಯಾವುದೇ ವದಂತಿ, ಊಹಾಪೋಹಗಳನ್ನು ನಂಬದೇ ಲಸಿಕೆ ನೀಡುವಲ್ಲಿ ಪೋಷಕರು ಮುಂದಾಗಬೇಕು ಎಂದು ಕರೆ ನೀಡಿದರು. ಕೇಂದ್ರ ಸರ್ಕಾರ ಕೂಡ ಗರ್ಭ ಕಂಠದ ಕ್ಯಾನ್ಸರ್ ನಿವಾರಣೆಗೆ ಸಮಾರೋಪಾದಿಯಲ್ಲಿ ಮುಂದಾಗಿದ್ದು ಸದ್ಯದಲ್ಲಿಯೇ ಉಚಿತವಾಗಿ ಲಸಿಕೆ ನೀಡುವ ಅಭಿಯಾನ ಕೂಡ ಜಾರಿಯಾಗಲಿದೆ ಎಂದು ಹೇಳಿದ ಡಾ. ರಾಜೇಶ್ವರಿ, ಸ್ತನ ಕ್ಯಾನ್ಸರ್ ಕೂಡ ಪಿಡುಗಾಗಿ ಪರಿಣಮಿಸಿದ್ದು ಯಾವುದೇ ಲಕ್ಷಣ ಕಂಡುಬAದಾಗ ಹಿಂಜರಿಕೆ ತೋರದೆ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕೆಂದು ಸೂಚಿಸಿದರು.

ಕಾರ್ಯಕ್ರಮದಲ್ಲಿ ಕಂದೀಲು ಚಿತ್ರಕ್ಕಾಗಿ ೭೧ನೇ ರಾಷ್ಟಿçÃಯ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ ಕೊಟ್ಟುಕೊತ್ತಿರ ಯಶೋಧ ಪ್ರಕಾಶ್ ಅವರನ್ನು ಗಣ್ಯರು ಸನ್ಮಾನಿಸಿದರು. ರೆಡ್‌ಕ್ರಾಸ್ ಉಪಾಧ್ಯಕ್ಷ ಅನಿಲ್ ಎಚ್.ಟಿ. ಸಂಚಾಲಕತ್ವದಲ್ಲಿ ಮೂಡಿಬಂದ ಕಾರ್ಯಕ್ರಮದಲ್ಲಿ ರೆಡ್‌ಕ್ರಾಸ್ ಜಿಲ್ಲಾ ಸಭಾಪತಿ ಬಿ.ಕೆ. ರವೀಂದ್ರ ರೈ, ಪ್ರಧಾನ ಕಾರ್ಯದರ್ಶಿ ಎಂ. ಧನಂಜಯ್, ಖಜಾಂಚಿ ಪ್ರಸಾದ್ ಗೌಡ, ನಿರ್ದೇಶಕರಾದ ಕೆ.ಟಿ. ಉತ್ತಯ್ಯ, ವಿಕ್ರಂ ಶೆಟ್ಟಿ, ಕೆ.ಸಿ. ವಸಂತ್, ಲೋಕೇಶ್ ಡಿ.ವಿ., ಕೆ.ಎಂ.ವೆAಕಟೇಶ್, ಮಧುಕರ್ ಶೇಟ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಸವಿತಾ, ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೀಲಾ ಅಶೋಕ್ ಹಾಜರಿದ್ದರು.