ಮಡಿಕೇರಿ, ಮಾ. ೯: ಕೇಂದ್ರ ಸರ್ಕಾರದ ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯ, ಮೈ ಭಾರತ್ ಕೊಡಗು ಹಾಗೂ ದಕ್ಷಿಣ ಕನ್ನಡ ಮತ್ತು ರಾಷ್ಟಿçÃಯ ವಿಪತ್ತು ಪ್ರತಿಕ್ರಿಯಾ ಪಡೆ ವತಿಯಿಂದ ಕೊಡಗು ಜಿಲ್ಲಾ ಯುವ ಒಕ್ಕೂಟದ ಆಶ್ರಯದಲ್ಲಿ ಮಂಗಳೂರಿನಲ್ಲಿ ಯುವ ಆಪತ್ ಮಿತ್ರ ಯೋಜನೆಯಡಿಯಲ್ಲಿ ತರಬೇತಿ ನಡೆಯಿತು.

ಮಂಗಳೂರಿನ ಪಿಲಿಕುಲದಲ್ಲಿ ೧೮ ರಿಂದ ೪೦ ವರ್ಷ ವಯೋಮಿತಿಯವರಿಗೆ ಏರ್ಪಡಿಸಲಾಗಿದ್ದ ೭ ದಿನಗಳ ಕಾಲ ನಡೆದ ತರಬೇತಿ ಶಿಬಿರದಲ್ಲಿ ಕೊಡಗಿನ ೪೦ಕ್ಕೂ ಅಧಿಕ ಯುವ ಜನರು ಭಾಗವಹಿಸಿ ತರಬೇತಿ ಪಡೆದುಕೊಂಡರು.