ಮಡಿಕೇರಿ, ಮಾ. ೯: ನಗರದ ಹೊಸಬಡಾವಣೆಯಲ್ಲಿರುವ ಯುರೋಕಿಡ್ಸ್ ಮಡಿಕೇರಿ ಪಬ್ಲಿಕ್ ಶಾಲೆಯಲ್ಲಿ 'ಟ್ಯಾಲೆಂಟ್ ಡಿಸ್ಪೆ÷್ಲÃ ಮತ್ತು ಗ್ರಾಜುಯೇಷನ್ ಡೇ' ಜರುಗಿತು.
ದೀಪವನ್ನು ಹಿಡಿದು ಯು.ಕೆ.ಜಿ ಮಕ್ಕಳು ತಮ್ಮ ಗ್ರಾಜುಯೇಷನ್ ಡೇಯನ್ನು ಸಂಭ್ರಮಿಸಿದರು. ಒಳ್ಳೆಯ ಪ್ರಜೆಯಾಗಿ ಸಮಾಜಕ್ಕೆ ಮಾದರಿ ವ್ಯಕ್ತಿಯಾಗುವೆನೆಂಬ ಪ್ರತಿಜ್ಞೆಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಯಿತು.
ಸಮಾರಂಭದ ಮುಖ್ಯ ಅತಿಥಿ ನಗರಸಭಾ ಸದಸ್ಯೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ವಿದ್ಯಾರ್ಥಿಗಳಿಗೆ ಭವಿಷ್ಯದ ಬಗ್ಗೆ ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಳ್ಳಬೇಕೆಂದು ಹಿತವಚನ ನುಡಿದರು. ಅಧ್ಯಕ್ಷೀಯ ಭಾಷಣದಲ್ಲಿ ಸಂಸ್ಥೆಯ ಅಧ್ಯಕ್ಷ ಕೆ.ಎಂ. ನಾಣಯ್ಯ, ಮಕ್ಕಳನ್ನು ಮೊಬೈಲ್ ಮಾಯಾಜಾಲದಿಂದ ದೂರವಿಡಬೇಕೆಂಬ ಬಗ್ಗೆ ಪೋಷಕರಿಗೆ ಸಲಹೆ ನೀಡಿದರು. ಶಾಲೆಯ ಪ್ರಾಂಶುಪಾಲೆ ರಶ್ಮಿದೀಪ ಎನ್.ಟಿ. ಪ್ರತಿಕ್ಷಣಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಿದರು. ವಿದ್ಯಾರ್ಥಿಗಳಿಂದ ‘ಸಿದ್ಧಾರ್ಥನಿಂದ ಬುದ್ಧನೆಡೆಗೆ' ಎಂಬ ಕಿರುನಾಟಕವನ್ನು ಪ್ರದರ್ಶಿತವಾಯಿತು. ‘ಆಸೆಯೇ ದು:ಖಕ್ಕೆ ಮೂಲ' ಎಂಬ ಗೌತಮಬುದ್ಧನ ತತ್ವವನ್ನು ಮನಮುಟ್ಟುವಂತೆ ವಿದ್ಯಾರ್ಥಿಗಳು ಅಭಿನಯಿಸಿದರು. ಅಶ್ಲೀಲತೆಯ ಸೋಂಕಿಲ್ಲದ, ಭಾವಾಭಿನಯದ ಕನ್ನಡ ನುಡಿಯನ್ನು ಹಾಡಿ ಹೋಗಳುವ, ರೆಟ್ರೋಶೈಲಿಯ ಸೇರಿದಂತೆ ಹಲವಾರು ವೈವಿಧ್ಯಮಯ ಸದಭಿರುಚಿಯ ಕಾರ್ಯಕ್ರಮಗಳು ಮೂಡಿಬಂದವು. ಕಾರ್ಯಕ್ರಮದಲ್ಲಿ ಶಾಲೆಯ ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಪಾಲ್ಗೊಂಡಿದ್ದರು.
ರ್ಯಾಲಿಯಲ್ಲಿ ಸಹೋದರರ ಸಾಧನೆ
ಮಡಿಕೇರಿ, ಮಾ.೯: ಸದರ್ನ್ ಆಫ್ ರೋಡ್ ವತಿಯಿಂದ ಮಂಗಳೂರಿನ ಉಪ್ಪಿನಂಗಡಿಯಲ್ಲಿ ನಡೆದ ಆಫ್ ರೋಡ್ ಚಾಲೆಂಜರ್ಸ್ ರ್ಯಾಲಿಯಲ್ಲಿ ಜಿಲ್ಲೆಯ ಸಹೋದರರು ಸಾಧನೆ ಮಾಡಿದ್ದಾರೆ.
ಮಡಿಕೇರಿಯ ಉದ್ಯಮಿ ರವಿ ಅವರ ಪುತ್ರರಾದ ಜತೀನ್ ಕರ್ಕೆರ ಹಾಗೂ ಹಾರ್ದಿಕ್ ಕರ್ಕೆರ ರ್ಯಾಲಿಯಲ್ಲಿ ಸ್ಟಾಕ್ ಜಿಪ್ಸಿ ಪೆಟ್ರೋಲ್ ಕ್ಲಾಸ್ ವಿಭಾಗದಲ್ಲಿ ರನ್ನರ್ ಅಪ್ ಸ್ಥಾನ ಪಡೆದುಕೊಂಡಿದ್ದಾರೆ. ರಾಜ್ಯದ ವಿವಿಧೆಡೆಗಳಿಂದ ರ್ಯಾಲಿಪಟುಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.