ಶ್ರೀಮಂಗಲ, ಮಾ. ೯: ಮಹಿಳೆಯರು ಸಮಾಜದ ಮುನ್ನೆಲೆಗೆ ಬಂದರೆ ಸಮಾಜದ ಏಳಿಗೆ ಸಾಧ್ಯ ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ ಹೇಳಿದರು.
ಶ್ರೀಮಂಗಲ ಕೊಡವ ಸಮಾಜದಲ್ಲಿ ಪೊಮ್ಮಕ್ಕಡ ಕೂಟ ಆಯೋಜಿಸಿದ್ದ ಅಂತರರಾಷ್ಟಿçÃಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಮಾಜದಲ್ಲಿ ಮಹಿಳೆಯರಿಗೆ ಅತ್ಯಂತ ಪ್ರಮುಖವಾದ ಸ್ಥಾನವಿದೆ. ಮಹಿಳೆಯರು ಸಮಾಜದ ಮುನ್ನೆಲೆಗೆ ಬಂದಲ್ಲಿ ಆ ಸಮಾಜದ ಏಳಿಗೆ ಶತಸಿದ್ಧ. ಮಹಿಳೆಯರ ಸಬಲೀಕರಣ ಸರಕಾರದ ಪ್ರಮುಖ ಆಶಯವಾಗಿದ್ದು, ಮಹಿಳೆಯರ ದಿನಾಚರಣೆ ಕೇವಲ ಒಂದು ಕಾರ್ಯಕ್ರಮವಾಗಿರದೇ, ಮಹಿಳೆಯರ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗಿ ಪ್ರತಿನಿತ್ಯ ಆಚರಣೆಯಾಗಬೇಕೆಂದು ಹೇಳಿದರು.
ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅಜ್ಜಿಕುಟ್ಟಿರ ಕಾಂಚನ್ ಪೊನ್ನಣ್ಣ, ಆಧುನಿಕ ಜಗತ್ತಿ ನಲ್ಲಿ ಪುರುಷರಿಗೆ ಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆ ಯರು ಹೆಸರು ಮಾಡು ತ್ತಿದ್ದಾರೆ. ಸೇನೆಯಲ್ಲಿ ಕ್ರೀಡೆಯಲ್ಲಿ ಸಾರ್ವಜನಿಕ ಬದುಕಿನಲ್ಲಿ ಹಾಗೂ ಸಮಾಜದ ಎಲ್ಲಾ ರೀತಿಯ ಚಟುವಟಿಕೆಗಳಲ್ಲೂ ಮಹಿಳೆಯರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿರುವುದು ಮಹಿಳಾ ಸಬಲೀಕರಣಕ್ಕೆ ಸಾಕ್ಷಿಯಾಗಿದೆ. ಇದೇ ರೀತಿ ಮಹಿಳೆಯರು, ಸಮಾಜದ ಒಳಿತಿಗಾಗಿ ಸಂಘಟಿತರಾಗಬೇಕೆAದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀಮಂಗಲ ಕೊಡವ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಪೆಮ್ಮಂಡ ಸಬಿತಾ ಕುಶಾಲಪ್ಪ, ಉಪಾಧ್ಯಕ್ಷೆ ಕಾಳಿಮಾಡ ಸೀಮಾ ಪ್ರಶಾಂತ್, ಕಾರ್ಯದರ್ಶಿ ಚೆಟ್ಟಂಡ ಲತಾ ಚರ್ಮಣ, ಖಜಾಂಚಿ ಮಚ್ಚಮಾಡ ಶ್ವೇತಾ ಉದಯ ಸೇರಿದಂತೆ ಪದಾಧಿಕಾರಿಗಳಾದ ಚೋನಿರ ಪವಿ ರತ್ತು, ಕೋಟ್ರಮಾಡ ಶೈಮಾ ರೋಷನ್, ಶೀತಲ್ ಮಾದಪ್ಪ, ಶೃತಿ ನಿತಿನ್, ಚೇಂದAಡ ತಾನ್ಸಿ ಚೇತನ್, ಅಪ್ಪಚ್ಚಂಗಡ ಮೋಟಯ್ಯ, ಪೆಮ್ಮಂಡ ರಾಜ, ಕಾಳಿಮಾಡ ಪ್ರಶಾಂತ್, ಪೊಯೇಲೆಂಗಡ ಪಲ್ವಿನ್, ಚೊಟ್ಟೆಯಾಂಡಮಾಡ ವಿಶು, ಮಾದೀರ ಸುಧಿ, ಆಲೆಮಾಡ ಸೋಮಣ್ಣ ಹಾಜರಿದ್ದರು.