ಮಡಿಕೇರಿ, ಮಾ ೯ : ಗೋಣಿಕೊಪ್ಪಲು ಸಮೀಪದ ಅರುವತ್ತೊಕ್ಲುವಿನ ಸರ್ವದೈವತಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟಿçÃಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ವಸ್ತು ಪ್ರದರ್ಶನವು ಅಟಲ್ ಟಿಂಕರಿAಗ್ ಲ್ಯಾಬ್‌ನ ಸಹಾಯದೊಂದಿಗೆ ನಡೆಸಲಾಯಿತು.

ಸರ್ವದೈವತಾ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಕಾಡ್ಯಮಾಡ ಪ್ರಕಾಶ್ ಮೊಣ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕುತೂಹಲ, ಸೃಜನಶೀಲತೆ ಹಾಗೂ ಸಮಸ್ಯೆ ಪರಿಹಾರ ಕೌಶಲ್ಯವನ್ನು ಬೆಳೆಸುವುದು ಬಹಳ ಮುಖ್ಯವಾದುದ್ದಾಗಿದೆ. ಭವಿಷ್ಯದ ಭವ್ಯ ಭಾರತದ ನಿರ್ಮಾಣದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪಾತ್ರ ಬಹಳ ಪ್ರಮುಖವಾದದ್ದು ಎಂದು ಹೇಳಿದರು. ವಿದ್ಯಾರ್ಥಿಗಳು ನಿರಂತರ ಕೌಶಲ್ಯ ಆಧಾರಿತ ಆವಿಷ್ಕಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು.

ಮುಖ್ಯ ಶಿಕ್ಷಕಿ ಮನೆಯಪಂಡ ಶೀಲಾ ಬೋಪಣ್ಣ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ ಹಾಗೂ ನವೀನ ಚಿಂತನೆಗಳನ್ನು ಬೆಳೆಸುವಲ್ಲಿ ಈ ರೀತಿಯ ವಸ್ತು ಪ್ರದರ್ಶನಗಳು ಸಹಕಾರಿ. ಅನುಭವಾತ್ಮಕ ಕಲಿಕೆ, ಜ್ಞಾನ ಹಂಚಿಕೆಗಾಗಿ ಈ ರೀತಿಯ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿ, ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸುವ ವೇದಿಕೆಯನ್ನು ಸೃಷ್ಟಿಸುವಂತೆ ಸಲಹೆ ನೀಡಿದರು. ಶಾಲೆಯ ಎ.ಟಿ.ಎಲ್.ನ ಸಂಯೋಜಕರಾದ ಅಭಿಲಾಶ್ ತಂಗಪ್ಪನ್ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಆರ್ಡಿನೋ ಆಧಾರಿತ ಸಹಾಯಕ ಸಾಧನೆಗಳು, ಸ್ಮಾರ್ಟ್ ಭದ್ರತಾ ವ್ಯವಸ್ಥೆಗಳು, ಐ.ಓ.ಟಿ ಆಧಾರಿತ ವ್ಯವಸ್ಥೆಗಳು, ರೋಬೋಟಿಕ್ಸ್ ಮಾದರಿಗಳು ಮತ್ತು ಸ್ವಯಂ ಚಾಲಿತ ತಂತ್ರಜ್ಞಾನಗಳು ಸೇರಿದಂತೆ ಅನೇಕ ನವೀನ ಯೋಜನೆಗಳ ಆವಿಷ್ಕಾರಗಳನ್ನು ಪ್ರದರ್ಶಿಸಿದರು.