ಸೋಮವಾರಪೇಟೆ, ಮಾ. ೯: ಶಾಲಾ ಶಿಕ್ಷಣ ಇಲಾಖೆಯ ಲಿಪಿಕ ನೌಕರರು, ಡಿ. ಗ್ರೂಪ್ ನೌಕರರು ಹಾಗೂ ವಾಹನ ಚಾಲಕರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷರಾಗಿ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ವಿ.ಜಿ. ದಿನೇಶ್ ಆಯ್ಕೆಯಾಗಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ಎಸ್.ಆರ್. ನವೀನ್ ನೇಮಕಾತಿ ಆದೇಶದ ಪ್ರತಿ ನೀಡಿದರು. ಗೌರವಾಧ್ಯಕ್ಷರಾಗಿ ಸೋಮವಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಚಿದಾನಂದ ಅವರನ್ನು ನೇಮಿಸ ಲಾಯಿತು. ಪದಾಧಿಕಾರಿಗಳಾಗಿ ಜನಾರ್ಧನ್, ಪಿ.ಸಿ. ಪೂವಮ್ಮ, ಕೆ.ಪಿ. ನೀಲಮ್ಮ, ಕುಶಾಲಪ್ಪ, ಕಿರಣ್ ಹಾಗೂ ಶ್ರೀನಿವಾಸ್ ಆಯ್ಕೆಯಾದರು.