*ಗೋಣಿಕೊಪ್ಪ, ಮಾ. ೮: ಸುಸ್ಥಿರ ಹಿಂದೂ ಸಮಾಜದ ನಿರ್ಮಾಣಕ್ಕೆ ಹಿಂದೂಗಳು ಜಾಗೃತಗೊಳ್ಳಬೇಕೆಂದುಹಿAದೂಪರ ಮುಖಂಡ ಟಿ.ಸಿ. ಚಂದ್ರನ್ ಕರೆ ನೀಡಿದರು.
ತಿತಿಮತಿ ಮಂಡಲ ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ ರಾಮ ಮಂದಿರ ಮುಂಭಾಗ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದರು. ಜಾಗತಿಕ ಮಟ್ಟದಲ್ಲಿ ಮಾರ್ಗದರ್ಶನ ಮಾಡುವಂತಹ ಪ್ರಾಮುಖ್ಯತೆಯನ್ನು ಹಿಂದೂ ಧರ್ಮ ಹೊಂದಿದೆ. ಶಾಂತಿಯಿAದ ಕೂಡಿರುವ ಆನಂದ ಮಯವಾದ ಮತ್ತು ಆರೋಗ್ಯ ಪೂರ್ಣವಾದ ಮತ್ತು ಭಕ್ತಿಯಿಂದ ಜೊತೆಗೆ ಸೌಹಾರ್ದತೆಯ ನೆಲೆಯಲ್ಲಿ ಹಿಂದೂ ರಾಷ್ಟçವನ್ನು ಕಟ್ಟಿ ಬೆಳೆಸಬೇಕಾಗಿದೆ ಎಂದರು. ಈ ದೇಶ ಪರಿವರ್ತನೆಗೊಳ್ಳಬೇಕಾದರೆ ಮನೆ ಮತ್ತು ಮನದಲ್ಲಿ ಹಿಂದುತ್ವದ ಪ್ರತಿಪಾದನೆಯಾಗಬೇಕು. ಹಿಂದೂ ಧರ್ಮವೂ ಕೂಡ ಬೆಳೆದು ನಿಲ್ಲಬೇಕು ಈ ನಿಟ್ಟಿನಲ್ಲಿ ಹಿಂದುಗಳಾದ ನಾವು ಜಾಗೃತಿ ಮತ್ತು ಎಚ್ಚರಿಕೆಯಿಂದ ಜೀವನ ನಡೆಸಬೇಕು ಎಂದು ಹೇಳಿದರು. ಸಭೆಯಲ್ಲಿ ಹಿಂದೂ ಸಂಗಮ ಸಮಿತಿ ಕಾರ್ಯಕ್ರಮದ ಅಧ್ಯಕ್ಷ ಚೆಪುö್ಪಡಿರ ರಾಮಕೃಷ್ಣ ಹಾಗೂ ನಿವೃತ್ತ ಶಿಕ್ಷಕಿ ಪೋರಂಗಡ ರಾಣಿ ಇದ್ದರು. ಸಭೆಯ ನಂತರ ಸ್ಥಳಿಯ ಮಕ್ಕಳ ಸಾಂಸ್ಕöÈತಿಕ ಕಾರ್ಯಕ್ರಮಗಳು ನಡೆದವು.