ಕೂಡಿಗೆ, ಮಾ. ೮: ತಾಲೂಕು ಪಂಚಾಯಿತಿ ಕುಶಾಲನಗರ, ಕೂಡಿಗೆ ಗ್ರಾಮ ಪಂಚಾಯಿತಿ, ಕೂಡಿಗೆ ಸಂಜೀವಿನಿ ಒಕ್ಕೂಟ ವತಿಯಿಂದ ಕೂಡಿಗೆ ಗಣಪತಿ ಪೆಂಡಾಲ್ ಸಭಾಂಗಣದಲ್ಲಿ ಸಂಜೀವಿನಿ ಸಂತೆ ಮೇಳ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ನೆರವೇರಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಸಂತೆ ಮೇಳಗಳು ನಡೆಯುವ ಮೂಲಕ ಮಹಿಳೆಯರು ಆರ್ಥಿಕ ವ್ಯವಹಾರ ಜ್ಞಾನದ ಜೊತೆಯಲ್ಲಿ ಆರ್ಥಿಕವಾಗಿ ಮುಂದುವರೆಯಲು ಸಹಕಾರ, ಜೊತೆಗೆ ಆರ್ಥಿಕ ಸಬಲೀಕರಣ ಮತ್ತು ಸ್ವ-ಉದ್ಯೋಗವನ್ನು ಆರಂಭಿಸಿ ಸಾಲ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುವುದು. ಸಂಜೀವಿನಿ ಯೋಜನೆಯಡಿಯಲ್ಲಿ ತಮ್ಮ ಮನೆಗಳಲ್ಲಿ ಗೃಹೋಪಯೋಗಿ ವಸ್ತುಗಳು, ಕರಕುಶಲ ವಸ್ತುಗಳ ತಯಾರಿಕೆ ಯೋಜನೆಯ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಕೂಡಿಗೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಕಲ್ಪನಾ, ಬಸವೇಶ್ವರ ದಂಡಿನಮ್ಮ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎಸ್. ಚಂದ್ರಶೇಖರ್, ಉಪಾಧ್ಯಕ್ಷ ಪ್ರಕಾಶ್, ಸಂಜೀವಿನಿ ಯೋಜನೆಯ ತಾಲೂಕು ಮಟ್ಟದ ಸಿಬ್ಬಂದಿಗಳಾದ ಜಯಚಂದ್ರನ್, ಪದ್ಮಶ್ರೀ, ಮಮತಾ, ಒಕ್ಕೂಟದ ಸದಸ್ಯರಾದ ರತ್ನಮ್ಮ, ಸೌಮ್ಯ, ಮಾನಸ ಸೇರಿದಂತೆ ಗ್ರಾಮದ ಪ್ರಮುಖರಾದ ಗೋವಿಂದರಾಜ್, ಅನಿಲ್, ಲೋಕೇಶ್ ಸೇರಿದಂತೆ ಹಲವು ಮಂದಿ ಇದ್ದರು.