ಕುಶಾಲನಗರ, ಮಾ. ೭: ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡ ೧೮೦ ವರ್ಷಗಳ ಕೊಡಗು ಮೈಸೂರು ಜಿಲ್ಲೆಗಳನ್ನು ಬೆಸೆಯುವ ಪುರಾತನ ಸೇತುವೆ ‘ಪ್ರೆಷರ್ಪೇಟ್ ಬ್ರಿಜ್’ಗೆ ಇದೀಗ ಕಾಯಕಲ್ಪ ಕಲ್ಪಿಸುವ ಯೋಜನೆಯೊಂದು ರೂಪುಗೊಳ್ಳುತ್ತಿದೆ.
ವಿಶಿಷ್ಟ ತಾಂತ್ರಿಕತೆಯ ಸಂಕೇತವಾಗಿರುವ ಈ ಸೇತುವೆಯಲ್ಲಿ ಸ್ವಾತಂತ್ರ‍್ಯ ಪೂರ್ವದಲ್ಲಿ ಮಹಾತ್ಮ ಗಾಂಧೀಜಿ ಅವರು ಕೊಡಗು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭ ನಡೆದಾಡಿರುವ ಈ ಅಪರೂಪ ವಿನ್ಯಾಸದ ಸೇತುವೆಯನ್ನು ಪುರಸಭೆ ನೇತೃತ್ವದಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸಾರ್ವಜನಿಕರ ವಿಹಾರ ಕೇಂದ್ರವಾಗಿ ಪರಿವರ್ತಿಸಲು ಇದೀಗ ಸರಕಾರದಿಂದ ಅನುಮತಿ ದೊರೆತಿದೆ. ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿರುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಈ ಹಳೆಯ ಸೇತುವೆಗೆ ಎರಡು ಕಡೆ ಕಬ್ಬಿಣದ ಮೆಶ್ ಅಳವಡಿಸಿ ಸುಣ್ಣ ಬಣ್ಣ ಬಳಿದು ನವೀಕರಣ ಮಾಡಲು ಕುಶಾಲನಗರ ಪುರಸಭಾ ಮುಖ್ಯಾಧಿಕಾರಿ ಟಿ.ಜೆ. ಗಿರೀಶ್ ಅವರು ರಾಷ್ಟಿçÃಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಅನುಮತಿ ಕೋರಿ ಪತ್ರ ಬರೆದ ಮೇರೆಗೆ ಇದೀಗ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡಿರುವ ಸೇತುವೆಯ ಪುನಶ್ಚೇತನ ಕಾಮಗಾರಿ ನಡೆಯಲಿದೆ.
ಪ್ರಸಕ್ತ ಸೇತುವೆಯ ಎರಡು ಭಾಗಗಳಲ್ಲಿ ಕಾಡು ಜಾತಿಯ ಗಿಡಗಂಟಿಗಳು ಬೆಳೆದು ಸೇತುವೆ ದುಸ್ಥಿತಿಯಲ್ಲಿದ್ದು ಸೇತುವೆ ಮೇಲಿಂದ ಸಾರ್ವಜನಿಕರು ಅನುಪಯುಕ್ತ ಕಸ ಕಡ್ಡಿಗಳನ್ನು ನದಿಗೆ ಎಸೆಯುತ್ತಿರುವುದು ಮತ್ತು ಇತ್ತೀಚಿನ ದಿನಗಳಲ್ಲಿ ಹಲವಾರು ಜನರು ಸೇತುವೆಯಿಂದ ಆತ್ಮಹತ್ಯೆಗೆ ಪ್ರಯತ್ನಿಸಿ ಮೃತಪಟ್ಟಿರುವುದು ಕೂಡ ಗಮನಿಸಬಹುದು.
ಕುಶಾಲನಗರ ವಕೀಲರ ಸಂಘದ ಅಧ್ಯಕ್ಷÀ ನಾಗೇಂದ್ರ ಬಾಬು ಹಾಗೂ ಹೈಕೋರ್ಟ್ ಹಿರಿಯ ನ್ಯಾಯವಾದಿಗಳಾದ ಅಮೃತೇಶ್ ಅವರುಗಳು ಈ ಐತಿಹಾಸಿಕ ಸೇತುವೆಯನ್ನು ಅಭಿವೃದ್ಧಿಗೊಳಿಸುವಂತೆ ಸರಕಾರ ಮತ್ತು ರಾಷ್ಟ್ರಪತಿಗಳಿಗೆ ಪತ್ರ ಬರೆದು ಮನವಿ ಸಲ್ಲಿಸಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಈ ಹಿನ್ನೆಲೆಯಲ್ಲಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸೇತುವೆಯ ಇಕ್ಕಲೆಗಳಲ್ಲಿ ಬೆಳೆದಿರುವ ಗಿಡ ಗಂಟೆಗಳನ್ನು ತೆರವುಗೊಳಿಸಿ, ಎರಡು ಬದಿಯಲ್ಲಿ ಕಬ್ಬಿಣದ ಗ್ರಿಲ್ ಅಳವಡಿಸಿ ಸುಣ್ಣ ಬಣ್ಣ ಬಳಿದು ವಿದ್ಯುತ್ ದೀಪ ಅಳವಡಿಸುವುದರೊಂದಿಗೆ ಸೇತುವೆಯನ್ನು ಉದ್ಯಾನವನದ ರೀತಿಯಲ್ಲಿ ರೂಪಗೊಳಿಸಿ ಸ್ಮಾರಕವನ್ನಾಗಿ ಉಳಿಸಿಕೊಳ್ಳಲು ಉದ್ದೇಶ ಹೊಂದಲಾಗಿದೆ.
ನಾಗರಿಕರು ನದಿಗೆ ಸೇತುವೆ ಮೇಲಿನಿಂದ ತ್ಯಾಜ್ಯಗಳನ್ನು ಎಸೆದು ನದಿಯ ನೀರಿನ ಪವಿತ್ರತೆಯನ್ನು ಹಾನಿಗೊಳಿಸುವುದರಿಂದ ನದಿ ಸ್ವಚ್ಛತೆ ಮತ್ತು ಜಲಚರಗಳ ಸುರಕ್ಷತೆಯಿಂದ ಸೇತುವೆಗೆ ಕಬ್ಬಿಣದ ಮೆಶ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಕುಶಾಲನಗರ ಪುರಸಭಾ ಮುಖ್ಯಾಧಿಕಾರಿ ಟಿ.ಜೆ. ಗಿರೀಶ್ ‘ಶಕ್ತಿ’ಗೆ ಮಾಹಿತಿ ನೀಡಿದ್ದಾರೆ.
ಈ ಸಂಬAಧ ಹೆದ್ದಾರಿ ವಿಭಾಗದ ಅಧಿಕಾರಿಗಳು ಕೆಲವು ಷÀರತ್ತುಗಳೊಂದಿಗೆ ಅನುಮತಿಯನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ನದಿಗೆ ಎಸೆಯುವ ಲೋಡುಗಟ್ಟಲೆ ತ್ಯಾಜ್ಯಗಳನ್ನು ತೆರವುಗೊಳಿಸಲು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ನೇತೃತ್ವದಲ್ಲಿ ಸಮೀಪದ ಕೊಪ್ಪ ಭಾರತ ಮಾತಾ ಪದವಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಸೇರಿ ನಿರಂತರವಾಗಿ ಸ್ವಚ್ಛತೆ ಕಾರ್ಯಕ್ರಮ ಮಾಡುತ್ತಿರುವುದು ಕಳೆದ ಹಲವಾರು ವರ್ಷಗಳಿಂದ ನಡೆಯುತ್ತಿರುವುದನ್ನು ಗಮನಿಸಬಹುದು.
ಇತ್ತೀಚೆಗಷ್ಟೇ ೨೫ ವಸಂತಗಳನ್ನು ಕಂಡಿರುವ ಸನಿಹದ ನೂತನ ಸೇತುವೆಗೆ ಸುವರ್ಣ ಸಂಭ್ರಮ ಕಂಡ ರೋಟರಿ ಸಂಸ್ಥೆ ಕುಶಾಲನಗರ ಸ್ವಚ್ಛ ಕಾವೇರಿ ಮತ್ತು ಸ್ವಚ್ಛ ಪಟ್ಟಣಕ್ಕೆ ಅಭಿಯಾನ ರೂಪಿಸಿರುವುದು ಒಂದೆಡೆಯಾದರೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ನೂತನ ಸೇತುವೆಯ ಎರಡು ಬದಿಗಳಲ್ಲಿ ಕಬ್ಬಿಣದ ಮೆಶ್ ಹಾಗೂ ವಿದ್ಯುತ್ ಸಂಪರ್ಕ ಅಳವಡಿಸುವ ಕೆಲಸ ನಡೆದಿದೆ.
ಎರಡು ಸೇತುವೆಗಳನ್ನು ಉತ್ತಮವಾಗಿ ನಿರ್ವಹಣೆ ಮಾಡುವುದರೊಂದಿಗೆ ಜಿಲ್ಲೆಯ ಕುಶಾಲನಗರ ಗಡಿ ಭಾಗವನ್ನು ಸೌಂದರೀಕರಣ ಮಾಡುವುದು ಉದ್ದೇಶವಾಗಿದೆ ಎಂದು ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಶಕ್ತಿಯೊಂದಿಗೆ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಈ ಸಂಬAಧ ಪುರಾತನ ಸೇತುವೆಯನ್ನು ಪುನಶ್ಚೇತನಗೊಳಿಸಲು ತಾನು ಶಾಸಕರ ಅನುದಾನದಲ್ಲಿ ರೂ. ೫ ಲಕ್ಷ ನೀಡುವುದಾಗಿ ಭರವಸೆ ನೀಡಿ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಮತ್ತು ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ಅವರುಗಳು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರ ಮನವಿ ಮೇರೆಗೆ ಈ ಐತಿಹಾಸಿಕ ಸೇತುವೆಗೆ ಕಾಯಕಲ್ಪ ನೀಡುವ ಭರವಸೆ ನೀಡಿದ್ದು ಇದೀಗ ಚಾಲನೆ ಕಾಣುವಂತಾಗಿದೆ.
೧೮೪೬ರಲ್ಲಿ ನಿರ್ಮಾಣಗೊಂಡ ಪ್ರೆಷರ್ ಪೇಟ್ ಸೇತುವೆಯನ್ನು ಅಂದಿನ ಕೊಡಗು ಮೈಸೂರು ಕಮಿಷನರ್ ಆಗಿದ್ದ ಮಾರ್ಕ್ ಕಬ್ಬನ್ ಲೋಕಾರ್ಪಣೆಗೊಳಿಸಿದ್ದರು. ಕುಶಾಲನಗರ ಪುರಸಭೆ ಸಾಮಾನ್ಯ ಸಭೆಯಲ್ಲಿ ಕೂಡ ಪುನಶ್ಚೇತನದ ಬಗ್ಗೆ ಚರ್ಚೆ ನಡೆದು ನಿರ್ಣಯ ಕೈಗೊಳ್ಳಲಾಗಿತ್ತು. ಸುಮಾರು ೧೩೦ ಮೀಟರ್ ಉದ್ದ ಹಾಗೂ ೮ ಮೀಟರ್ ಅಗಲ ಇರುವ ಈ ಸೇತುವೆ ಸಿಮೆಂಟ್ ಬಳಸದೆ ಕೇವಲ ಇಟ್ಟಿಗೆ ಗಾರೆ ಮೂಲಕ ಕಟ್ಟಿದ್ದು ಈಗಲೂ ಒಂದಿAಚೂ ಶಿಥಿಲಗೊಳ್ಳದೆ ಭದ್ರವಾಗಿ ನಿಂತಿರುವುದು ಗಮನಾರ್ಹವಾಗಿದೆ.
ಕೊಡಗು ಜಿಲ್ಲೆಯ ಗಡಿಭಾಗದಲ್ಲಿ ಎರಡು ಸೇತುವೆಗಳನ್ನು ಒಳಗೊಂಡAತೆ ಬೃಹತ್ ಗಾತ್ರದ ಪ್ರವೇಶ ದ್ವಾರ ಕೂಡ ನಿರ್ಮಿಸಲು ಪುರಸಭೆ ಈಗಾಗಲೇ ಕಾರ್ಯ ಯೋಜನೆ ಹಮ್ಮಿಕೊಂಡಿದೆ.
ವಾರಾಂತ್ಯದಲ್ಲಿ ಕೊಡಗು ಜಿಲ್ಲೆಗೆ ಭೇಟಿ ನೀಡುವ ಲಕ್ಷಾಂತರ ಸಂಖ್ಯೆಯ ಪ್ರವಾಸಿಗರಿಗೆ ಮೂಲಭೂತ ಸೌಲಭ್ಯ ಜೊತೆಗೆ ಜಿಲ್ಲೆಯ ಧಾರ್ಮಿಕ ಹಾಗೂ ಪ್ರವಾಸಿ ಕೇಂದ್ರಗಳ ಬಗ್ಗೆ ಕನಿಷ್ಟ ಮಾಹಿತಿ ನೀಡುವ ಕೇಂದ್ರವನ್ನು ಕೂಡ ಇಲ್ಲಿ ಆರಂಭಗೊಳಿಸಲು ಸ್ಥಳೀಯ ಆಡಳಿತ ಚಿಂತನೆ ಹರಿಸಿದೆ.
ಸೇತುವೆಯ ಒಂದು ಬದಿಯಲ್ಲಿ ಕಾವೇರಿ ಪ್ರತಿಮೆ ನಿರ್ಮಾಣವಾಗಿದ್ದು ಇನ್ನೊಂದು ಪಾರ್ಶ್ವವನ್ನು ಅಭಿವೃದ್ಧಿಗೊಳಿಸುವ ಮೂಲಕ ಪ್ರವಾಸಿಗರ ಮನಸೂರೆಗೊಳ್ಳುವ ಯೋಜನೆಗಳ ಕಾಯಕ ಸದ್ಯದಲ್ಲಿಯೇ ರೂಪುಗೊಳ್ಳಲಿದೆ.
- ವನಿತಾ ಚಂದ್ರಮೋಹನ್