ಮಡಿಕೇರಿ, ಮಾ.೭: ಪವರ್‌ಮ್ಯಾನ್ - ಲೈನ್‌ಮ್ಯಾನ್‌ಗಳು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯುತ್ ಕೆಲಸವು ಸೂಕ್ಷö್ಮ ಆಗಿರುವುದರಿಂದ ಒತ್ತಡಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಸಲಹೆ ನೀಡಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವತಿಯಿಂದ ನಗರದ ಸೆಸ್ಕ್ ವಿಭಾಗೀಯ ಕಚೇರಿಯಲ್ಲಿ ಶನಿವಾರ ನಡೆದ ಪವರ್‌ಮ್ಯಾನ್ - ಲೈನ್‌ಮ್ಯಾನ್‌ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪವರ್ ಮ್ಯಾನ್‌ಗಳು ಪ್ರತಿನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಯಾವುದೇ ಕಾರಣಕ್ಕೂ ವಿಚಲಿತರಾಗದೇ ವಿದ್ಯುತ್ ನಿಯಮಗಳನ್ನು ಖಾತರಿಪಡಿಸಿಕೊಂಡು ಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಬೇಕು. ಮನೆ, ಕಚೇರಿ, ಕೈಗಾರಿಕೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ವಿದ್ಯುತ್ ಪೂರೈಕೆ ಅನಿವಾರ್ಯ ಮತ್ತು ಅತ್ಯಗತ್ಯ.
ಕೊಡಗು ಜಿಲ್ಲೆಯಲ್ಲಿ ಮಳೆಗಾಲದ ಸಂದರ್ಭದಲ್ಲಿ ಹೆಚ್ಚಿನ ವಿದ್ಯುತ್ ಕಂಬಗಳು ಹಾಗೂ ವಿದ್ಯುತ್ ಪರಿವರ್ತಕಗಳು ಹಾನಿಯಾಗುವ ಸಾಧ್ಯತೆ ಇದ್ದು, ವಿದ್ಯುತ್ ಕೆಲಸದ ಸಂದರ್ಭದಲ್ಲಿ ಹೆಲ್ಮೆಟ್, ಕೈಗವಸು ಅಳವಡಿಸಿಕೊಂಡು ಕರ್ತವ್ಯ ನಿರ್ವಹಿಸಬೇಕು. ಲೈನ್‌ಮ್ಯಾನ್‌ಗಳು ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕು. ಆದರೆ ಅತಿಯಾದ ಆತ್ಮವಿಶ್ವಾಸ ಬೇಡ.
ಲೈನ್‌ಮ್ಯಾನ್‌ಗಳು ಪ್ರತಿನಿತ್ಯ ಸುರಕ್ಷತೆ ಮತ್ತು ಭದ್ರತೆಗೆ ಒತ್ತು ನೀಡಬೇಕು. ಸಮಸ್ಯೆಗಳಿದ್ದಲ್ಲಿ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷÀ ಮಂದ್ರೀರ ಮೋಹನ್‌ದಾಸ್ ಅವರು ಮಾತನಾಡಿ, ಲೈನ್‌ಮ್ಯಾನ್‌ಗಳು ಪ್ರತಿನಿತ್ಯ ಒಂದಲ್ಲ ಒಂದು ರೀತಿ ಕಠಿಣ ಪರಿಸ್ಥಿತಿ ಎದುರಿಸಿ, ಸಮರ್ಪಕವಾಗಿ ವಿದ್ಯುತ್ ಪೂರೈಸುತ್ತಿರುವುದು ಶ್ಲಾಘನೀಯ ಎಂದರು. ಲೈನ್‌ಮ್ಯಾನ್‌ಗಳು ತೆರೆಯ ಹಿಂದೆ ಕ್ರೀಯಾಶೀಲತೆಯಿಂದ ಕೆಲಸ ಮಾಡುತ್ತಾರೆ. ಮಳೆಗಾಲದ ಸಂದರ್ಭದಲ್ಲೂ ಹೆಚ್ಚಿನ ಕೆಲಸ ನಿರ್ವಹಿಸುತ್ತಾರೆ ಎಂದು ನುಡಿದರು.
ಹಿರಿಯ ಲೈನ್‌ಮ್ಯಾನ್ ರತ್ನಯ್ಯ ಮತ್ತು ಶಿವಣ್ಣ ಅವರು ಮಾತನಾಡಿ, ಪವರ್ ಮ್ಯಾನ್‌ಗಳು ಶ್ರದ್ಧೆಯಿಂದ ಪ್ರತಿನಿತ್ಯ ಕೆಲಸ ನಿರ್ವಹಿಸುತ್ತಿದ್ದಾರೆ. ವಿದ್ಯುತ್ ನಿಯಮಗಳನ್ನು ಪಾಲಿಸಿಕೊಂಡು ಕರ್ತವ್ಯ ನಿರ್ವಹಿಸಿದರೂ ಆಗಾಗ ಅಪಾಯಗಳು ಸಂಭವಿಸುತ್ತವೆ. ಇಂತಹ ಅಪಾಯಗಳು ಕಂಡು ಬರದಂತೆ ಎಚ್ಚರ ವಹಿಸಬೇಕು ಎಂದರು. ಸೆಸ್ಕ್ ಕಾರ್ಯಪಾಲಕ ೪ಐದನೇ ಪುಟಕ್ಕೆ
ಇಂಜಿನಿಯರ್ ರಾಮಚಂದ್ರ ಮಾತನಾಡಿ ಲೈನ್‌ಮ್ಯಾನ್‌ಗಳ ಕೊರತೆ ನಡುವೆಯೂ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗದAತೆ ಶ್ರಮಿಸಲಾಗುತ್ತಿದೆ ಎಂದು ಹೇಳಿದರು. ಸಹಾಯಕ ಕಾರ್ಯಪಾಲಕ ಅಭಿಯಂತ ವಿನಯ್‌ಕುಮಾರ್ ಮಾತನಾಡಿದರು. ಸಹಾಯಕ ಇಂಜಿನಿಯರ್ ತೇಜಾ, ಹೇಮಂತ್ ಕುಮಾರ್, ಲೆಕ್ಕಾಧಿಕಾರಿ ದರ್ಶನ್, ಸುದೀಪ್, ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಕಾರ್ಯದರ್ಶಿ ಮಮತಾರಾಜ್, ನಾಗರಾಜು ಇತರರು ಇದ್ದರು. ಕೇಕ್ ಕತ್ತರಿಸುವ ಮೂಲಕ ಪವರ್‌ಮ್ಯಾನ್‌ಗಳ ದಿನಾಚರಣೆಯನ್ನು ಸಂತಸದಿAದ ಆಚರಿಸಲಾಯಿತು. ಸಿಬ್ಬಂದಿಗಳಾದ ರತ್ನಮಂಜರಿ ಪ್ರಾರ್ಥಿಸಿದರು, ಪದ್ಮಶ್ರೀ ನಿರೂಪಿಸಿದರು.