ಮಡಿಕೇರಿ, ಮಾ. ೭: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಭೇಟಿಯಾಗಿ, ಕೊಡಗು ಕಾಫಿ ಬೆಳೆಗಾರರ ಸಹಕಾರ ಸಂಘ ಲಿಮಿಟೆಡ್‌ನಿಂದ ಭಾರತೀಯ ಕಾಫಿ ಮಂಡಳಿಗೆ ಪಾವತಿಸಬೇಕಾದ ಬಡ್ಡಿಯನ್ನು ಮನ್ನಾ ಮಾಡುವಂತೆ ಮನವಿ ಸಲ್ಲಿಸಿದರು.
ಸಣ್ಣ ಕಾಫಿ ಬೆಳೆಗಾರರನ್ನು ರಕ್ಷಿಸುವ ಮತ್ತು ಈ ಪ್ರಮುಖ ಸಹಕಾರಿ ಸಂಸ್ಥೆಯನ್ನು ಸಂರಕ್ಷಿಸುವ ಹಿತದೃಷ್ಟಿಯಿಂದ, ೨೦೧೫ರಲ್ಲಿ ನೀಡಿದ ಭರವಸೆಯಂತೆ ಸಚಿವರು ಮಧ್ಯಪ್ರವೇಶಿಸಿ ಕಾಫಿ ಮಂಡಳಿಗೆ ಸಂಘ ಪಾವತಿಸಬೇಕಾದ ಬಡ್ಡಿಯನ್ನು ಮನ್ನಾ ಮಾಡಲು ಶಿಫಾರಸು ಮಾಡುವಂತೆ ಮನವಿ ಮಾಡಿದರು. ಇದರಿಂದ ಕೊಡಗಿನ ಸಾವಿರಾರು ಕಾಫಿ ಬೆಳೆಗಾರರು ಮತ್ತು ಕಾರ್ಮಿಕರ ಜೀವನೋಪಾಯವನ್ನು ಕಾಪಾಡುತ್ತದೆ ಮತ್ತು ಸುಮಾರು ಏಳು ದಶಕಗಳಿಂದ ಸಮುದಾಯಕ್ಕೆ ಸೇವೆ ಸಲ್ಲಿಸುತ್ತಿರುವ ಸಹಕಾರಿ ಸಂಸ್ಥೆಯನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಗಮನ ಸೆಳೆದರು.