ಮಡಿಕೇರಿ, ಮಾ. ೬: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಂಡಿಸಿರುವ ರಾಜ್ಯ ಬಜೆಟ್ ರಾಜ್ಯದ ಎಲ್ಲಾ ವರ್ಗದ ಜನರಿಗೆ ಅನುಕೂಲಕರವಾಗಿದೆ ಎಂದು ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಬಜೆಟ್ ಅನ್ನು ಸ್ವಾಗತಿಸಿದ್ದಾರೆ.
ಇದರೊಂದಿಗೆ ಕೊಡಗು ಜಿಲ್ಲೆಗೆ ಸಂಬAಧಿಸಿದAತೆ ಈ ಬಾರಿಯ ಬಜೆಟ್ನಲ್ಲಿ ನೀಡಲಾಗಿರುವ ಯೋಜನೆಗಳ ಕುರಿತಾಗಿಯೂ ಅವರು ಮಾಹಿತಿ ನೀಡಿದ್ದಾರೆ. ವಿಶೇಷವಾಗಿ ಬಹುನಿರೀಕ್ಷಿತ ಕೊಡವ ಅಭಿವೃದ್ಧಿ ನಿಗಮ ಘೋಷಣೆಯಾಗಿದೆ. ಈ ಹಿಂದೆ ಬೊಮ್ಮಾಯಿ ಅವರ ಅವಧಿಯಲ್ಲಿ ಘೋಷಣೆಯಾಗಿ ಸ್ಪಷ್ಟತೆ ಇಲ್ಲದೆ ನಿಂತಿದ್ದ ಅಭಿವೃದ್ಧಿ ನಿಗಮಕ್ಕೆ ಈ ಬಾರಿ ಬಜೆಟ್ ಮೂಲಕ ಘೋಷಣೆ ಮಾಡಲಾಗಿದೆ. ಕೊಡವ ಸೇರಿದಂತೆ ಹಲವು ಜನಾಂಗಗಳನ್ನು ಒಳಗೊಂಡ ಕರ್ನಾಟಕ ಆದಿವಾಸಿ ನಿಗಮಕ್ಕೆ ಒಪ್ಪಿಗೆಯಾಗಿದೆ ಎಂದು ಪೊನ್ನಣ್ಣ ಅವರು ತಿಳಿಸಿದ್ದಾರೆ.
ಸಣ್ಣ ನೀರಾವರಿ ಇಲಾಖೆ ಮೂಲಕ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೆರೆಗಳ ಅಭಿವೃದ್ಧಿ, ತಡೆಗೋಡೆ ನಿರ್ಮಾಣಕ್ಕೆ ವಿಶೇಷ ಯೋಜನೆ ನೀಡಲಾಗಿದೆ. ಅರಣ್ಯದಂಚಿನ ಆದಿವಾಸಿಗಳಿಗೆ ತಲಾ ರೂ. ೪.೫೦ ಲಕ್ಷ ವೆಚ್ಚದಂತೆ ಹಲವು ಮನೆಗಳಿಗೆ ಅನುಮೋದನೆಯಾಗಿದೆ. ವೀರಾಜಪೇಟೆ, ಸೋಮವಾರಪೇಟೆಗೆ ಕಾರ್ಮಿಕ ಇಲಾಖೆ ಮೂಲಕ ಶ್ರಮಿಕ ವಸತಿ ಶಾಲೆ ನೀಡಲಾಗಿದೆ. ವೀರಾಜಪೇಟೆ ಕ್ಷೇತ್ರಕ್ಕೆ ಹೊಸದಾಗಿ ಮೊರಾರ್ಜಿ ವಸತಿ ಶಾಲೆಯೊಂದು ದೊರೆತಿದೆ. ಹಲವು ಕಾಲು ಸೇತುವೆಗಳಿಗೆ ಒಪ್ಪಿಗೆಯಿದೆ. ರಾಜ್ಯದಲ್ಲಿ ಪಿಡಬ್ಲುö್ಯಡಿ ಇಲಾಖೆ ಮೂಲಕ ರಾಜ್ಯ ಹೆದ್ದಾರಿ, ಜಿಲ್ಲಾ ಪ್ರಮುಖ ರಸ್ತೆಗಳ ಅಭಿವೃದ್ಧಿಗೆ ಇದ್ದ ಅನುದಾನ ಹೆಚ್ಚಳ ಮಾಡಲಾಗಿದ್ದು, ಇದು ಕೊಡಗಿಗೂ ಪ್ರಯೋಜನವಾಗಲಿದೆ. ವೀರಾಜಪೇಟೆ ತಾಲೂಕಿನಲ್ಲಿ ಪ್ರಾರಂಭವಾಗಿರುವ ಕ್ರೀಡಾ ತರಬೇತಿ ಕೇಂದ್ರಕ್ಕೆ ಅನುದಾನದೊಂದಿಗೆ ಒಪ್ಪಿಗೆ ನೀಡಲಾಗಿದೆ. ಕೆಪಿಟಿಸಿಎಲ್ ಮೂಲಕ ೭ ಉಪಕೇಂದ್ರ ಸೆಸ್ಕ್ ಮೂಲಕ ೨ ಕೇಂದ್ರಕ್ಕೆ ಪ್ರಸ್ತಾವನೆಯಾಗಿದೆ. ಮಾನವ ವನ್ಯಜೀವಿ ಸಂಘರ್ಷ ತಡೆಗೆ ರಾಜ್ಯದಲ್ಲಿ ೧೫೦೦ ಕೋಟಿ ಮೀಸಲಿಡಲಾಗಿದೆ. ಇದರಲ್ಲಿ ತಿತಿಮತಿ ಹಾಗೂ ಮಾಲ್ದಾರೆ ಭಾಗದಲ್ಲಿನ ಯೋಜನೆಯಿದ್ದು, ತಿತಿಮತಿ ಯೋಜನೆಗೆ ಶನಿವಾರ ಚಾಲನೆ ಸಿಗುತ್ತಿದೆ ಎಂದು ಶಾಸಕರು ವಿವರವಿತ್ತಿದ್ದಾರೆ. ರಾಜ್ಯದಲ್ಲಿ ೪ ಸಾವಿರದಷ್ಟು ಹೊಸ ಬಸ್ಗಳ ವ್ಯವಸ್ಥೆಯಾಗಲಿದ್ದು, ಕೊಡಗಿಗೂ ಹೆಚ್ಚುವರಿ ಬಸ್ ಸೌಲಭ್ಯ ಸಿಗಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತರು, ಬುಡಕಟ್ಟು ಜನಾಂಗ, ಯುವಕರಿಗೆ ಹಲವು ಯೋಜನೆಗಳಿದ್ದು, ಹಂತಹAತವಾಗಿ ಜಾರಿಯಾಗಲಿದ್ದು, ಮುಂದಿನ ವರ್ಷದೊಳಗೆ ಪೂರ್ಣಗೊಳ್ಳಲಿದೆ ಎಂದು ಅವರು ತಿಳಿಸಿದರು. ಆರೋಗ್ಯ ಇಲಾಖೆಗೆ ಸಂಬAಧಿಸಿದAತೆ ಘೋಷಣೆಯಾಗಿರುವ ಯೋಜನೆಗಳೂ ಅನುಷ್ಠಾನವಾಗಲಿದೆ ಎಂದು ಪೊನ್ನಣ್ಣ ವಿವರ ನೀಡಿದ್ದಾರೆ.