ಚೆಯ್ಯಂಡಾಣೆ, ಮಾ. ೬: ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿ ಶಸ್ತçಚಿಕಿತ್ಸೆ ನಡೆಸಲಾಗಿದ್ದು, ೪೭ ವರ್ಷದ ಮಹಿಳೆಯೊಬ್ಬರ ಗರ್ಭಾಶಯದಲ್ಲಿದ್ದ ೭ ಕೆ.ಜಿ. ತೂಕದ ಗಡ್ಡೆಯನ್ನು ಹೊರತೆಗೆಯಲಾಗಿದೆ.

ವೀರಾಜಪೇಟೆಯ ಸ್ಥಳೀಯ ನಿವಾಸಿ ಮಹಿಳೆಯೊಬ್ಬರು ಹೊಟ್ಟೆನೋವಿನಿಂದ ಬಳಲುತ್ತಿದ್ದರು. ಆಸ್ಪತ್ರೆಯ ಶಸ್ತç ಚಿಕಿತ್ಸಾ ವೈದ್ಯರಾದ ಡಾ.ವಿಶ್ವನಾಥ್ ಸಿಂಪಿಯವರು ಹಲವು ಪರೀಕ್ಷೆಗಳನ್ನು ನಡೆಸಿದಾಗ ಮಹಿಳೆಯ ಗರ್ಭಾಶಯದಲ್ಲಿ ದೊಡ್ಡ ಗಡ್ಡೆ ಇರುವುದು ಗೊತ್ತಾಗಿದೆ.

ನಂತರ ತಾ.೬ ರಂದು ಶಸ್ತç ಚಿಕಿತ್ಸಾ ವೈದ್ಯರಾದ ವಿಶ್ವನಾಥ್ ಸಿಂಪಿಯವರ ನೇತೃತ್ವದಲ್ಲಿ ನಡೆದ ಶಸ್ತç ಚಿಕಿತ್ಸೆಗೆ ಡಾ.ಪ್ರಜ್ವಲ್ ಕುಮಾರ್ (ಶಸ್ತçಚಿಕಿತ್ಸಕರು), ಡಾ. ಶಾಂತಕುಮಾರ್ (ಅರವಳಿಕೆ) ಮತ್ತು ಡಾ. ಮಧುರಾ (ಮಹಿಳಾ ಮತ್ತು ಪ್ರಸೂತಿ) ಹಾಗೂ ಸಿಬ್ಬಂದಿಗಳಾದ ಮಾಲಾ,ಕೇಶ್ವರಿ, ಡಿ ಗ್ರೂಪ್ ನ ಪೂವಿ ಮತ್ತು ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಮಮತಾ ಸಹಕರಿಸಿದರು. ವೀರಾಜಪೇಟೆ ಸರಕಾರಿ ಆಸ್ಪತ್ರೆಯ ಮುಖ್ಯ ಶಸ್ತ್ರ ಚಿಕಿತ್ಸಾ ವೈದ್ಯರಾದ ಡಾ.ವಿಶ್ವನಾಥ್ ಪಿ.ಸಿಂಪಿ ಮಾತನಾಡಿ, ವೀರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಗೆ ಯಶಸ್ವಿ ಶಸ್ತç ಚಿಕಿತ್ಸೆ ಮಾಡಲಾಗಿದೆ, ಇದಕ್ಕೂ ಮೊದಲು ಇವರು ಮಂಗಳೂರು ಆಸ್ಪತ್ರೆಗೆ ಭೇಟಿ ಮಾಡಿ ಪರೀಕ್ಷಿಸಿದರು. ಇಲ್ಲಿ ಪರಿಚಯಸ್ಥರು ಇರುವ ಕಾರಣ ಇಲ್ಲಿಯೇ ಶಸ್ತç ಚಿಕಿತ್ಸೆ ಮಾಡಲು ತೀರ್ಮಾನಿಸಿದರು, ಇದಕ್ಕೆ ನಾವು ಶಸ್ತçಚಿಕಿತ್ಸೆ ಮಾಡಿ ೭ ಕೆಜಿ ತೂಕ ವಿರುವ ಗೆಡ್ಡೆ ಹೊರ ತೆಗೆಯಲಾಗಿದೆ. ನಮ್ಮಲ್ಲಿ ಅನಸ್ತೇಶಿಯ ಡಾಕ್ಟರ್ ಇಲ್ಲ ನಾವು ಶಾಸಕರಿಗೆ ಮನವಿ ಮಾಡಿ ವಾರಕ್ಕೆ ಎರಡು ದಿನ ಬೇೆರೆಡೆಯಿಂದ ಡಾ. ಶಾಂತಕುಮಾರ್ ಬರುತ್ತಿದ್ದಾರೆ. ಆದರಿಂದ ಇಂದು ಶಸ್ತç ಚಿಕಿತ್ಸೆಗೆ ನೆರವಾಗಿದೆ, ಚಿಕಿತ್ಸೆ ಪಡೆದ ಮಹಿಳೆ ಆರೋಗ್ಯವಾಗಿದ್ದಾರೆ ಎಂದು ಮಾಹಿತಿ ನೀಡಿದರು. - ಅಶ್ರಫ್