ಮಡಿಕೇರಿ, ಮಾ. ೬: ನೈಮ ಸಂಘಟನೆ ವತಿಯಿಂದ ರಂಜಾನ್ ಉಪವಾಸ ಆಚರಣೆಯ ಪ್ರಯುಕ್ತ ಬೃಹತ್ ಇಫ್ತಾರ್ ಸೌಹಾರ್ದ ಸಂಗಮವನ್ನು ನೆಲ್ಯಹುದಿಕೇರಿ ಶಾದಿ ಮಹಲ್ ಸಮುದಾಯ ಭವನದಲ್ಲಿ ಆಯೋಜಿಸಲಾಗಿತ್ತು. ಅರೆಕಾಡು, ನಲ್ವತ್ತೆಕ್ರೆ, ಸಿದ್ದಾಪುರ, ಗುಹ್ಯ, ಒಂಟಿಯAಗಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮಹಲ್ ಖತೀಬ್ ರೌವೂಪ್ ಹುದವಿ ಮಾತನಾಡಿ, ಪವಿತ್ರ ರಂಜಾನ್ ಉಪವಾಸದ ಮಹತ್ವದ ಬಗ್ಗೆ ಮಾರ್ಗದರ್ಶನ ನೀಡಿ ಧಾರ್ಮಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಮುನ್ನಡೆದರೆ ಸೌಹಾರ್ದ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು. ಸಾಮಾಜಿಕ ಕಾರ್ಯಕರ್ತ ನಿಯಾಜ್ ಮಾತನಾಡಿ, ಶಾಂತಿ ಸಹಬಾಳ್ವೆಯ ಸೌಹಾರ್ದ ಸಂಕೇತದ ಆಚರಣೆಗಳನ್ನು ಮಾಡುವುದರ ಮೂಲಕ ಸಹೋದರತ್ವದೊಂದಿಗೆ ಸಹಬಾಳ್ವೆಯ ಜೀವನ ನಡೆಸುವಂತಾ ಗಬೇಕೆಂದು ಆಶಿಸಿದರು.
ನೈಮ ಸಂಘಟನೆಯ ಸಂಯೋಜಕ ಶರ್ಪು ಮಾತನಾಡಿ, ಸಂಘಟನೆ ಸಮಾಜಮುಖಿಯಾಗಿ ತೊಡಗಿಸಿಕೊಂಡಿದ್ದು, ಹತ್ತು ಹಲವು ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿಸಿಸಿ ಸದಸ್ಯ ಕೆ.ಎಂ ಬಶೀರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ಕೆ. ಹಕೀಂ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಕಾರ್ಯದರ್ಶಿ ಕೆ.ಎಂ. ಸೈಯದ್ ಅಲವಿ ಭಾವ, ಕೊಡಗು ಉಮ್ಮತ್ ಒನ್ ಸಂಘಟನೆಯ ಪ್ರಮುಖರಾದ ಖಾಲಿದ್ ಹಾಜಿ, ಪ್ರಮುಖರಾದ ಉನೈಸ್ ಮಡಿಕೇರಿ, ಹುಸೇನ್ ಸಾಬ್, ಅಬ್ದುಲ್ ನಬಿ, ಕ್ರಿಯೇಟಿವ್ ಕಲೀಲ್ ಮಡಿಕೇರಿ, ಹಸೈನಾರ್ ಹಾಜಿ, ಮುಸ್ಲಿಂ ಜಮಾಅತ್ ಅಧ್ಯಕ್ಷ ಓ.ಎಂ. ಅಬ್ದುಲ್ಲ ಹಾಜಿ, ಕಾರ್ಯದರ್ಶಿ ಅಶ್ರಫ್ ಹಾಜಿ, ಎ.ಕೆ ಅಬ್ದುಲ್ಲ, ಮಣಿ ಮಾಸ್ಟರ್, ಪಿ.ಎ. ಅಬ್ದುಲ್ಲ, ನೈಮ ಸಂಘಟನೆ ಅಧ್ಯಕ್ಷ ಓ.ಎಂ ನೌಷದ್, ಉಪಾಧ್ಯಕ್ಷ ಅಪ್ಸಲ್,ಕಾರ್ಯದರ್ಶಿ ಮುಸ್ತಾಫಾ, ಸಹಕಾರ್ಯದರ್ಶಿ ಜಂಶೀರ್, ಕೋಶಾಧಿಕಾರಿ ಅನಸ್, ಪಿಡಿಓ ಅಬ್ದುಲ್ಲ, ಸಹಾಯಕ ಪ್ರಾಧ್ಯಾಪಕ ನೌಶಾದ್, ಯೂಸುಫ್ ಅಲಿ ಅರೆಕಾಡು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.