ಮಡಿಕೇರಿ, ಮಾ. ೬: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಜಿ. ಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಮಡಿಕೇರಿ ತಾಲೂಕು ಗ್ಯಾರಂಟಿ ಸಮಿತಿ ಸಭೆ ನಡೆಯಿತು.

ಗೃಹಲಕ್ಷ್ಮಿ ಯೋಜನೆ : ಶಿಶುಅಭಿವೃದ್ಧಿ ಇಲಾಖೆಯಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ನವೆಂಬರ್ ಮಾಹೆಯವರೆಗೆ ೧,೧೬,೭೮೧ ಗೃಹಲಕ್ಷ್ಮಿ ಫಲಾನುಭ ವಿಗಳಿಗೆ ರೂ. ೨೩,೩೫,೬೨,೦೦೦ ಹಣ ಪಾವತಿಯಾಗಿದ್ದು, ಎನ್‌ಪಿಸಿಐ, ಇ-ಕೆವೈಸಿ ಮಾಡಿಸಲು ಬಾಕಿ ಉಳಿದಿರುವ ಫಲಾನುಭವಿಗಳ ಸಂಖ್ಯೆ ೭೬೬, ಐ.ಟಿ, ಜಿಎಸ್‌ಟಿ ಪಾವತಿದಾರರು ಎಂದು ತಿರಸ್ಕೃತಗೊಂಡ ಫಲಾನುಭವಿಗಳ ಸಂಖ್ಯೆ ೨,೩೮೩ ಆಗಿರುತ್ತದೆ ಹಾಗೂ ೩೦೨ ಗೃಹಲಕ್ಷ್ಮಿ ಯೋಜನೆಯ ಮಹಿಳಾ ಫಲಾನುಭವಿಗಳು ಮರಣ ಹೊಂದಿದ್ದು, ಅದರಲ್ಲಿ ೬೬ ಫಲಾನುಭವಿಗಳನ್ನು ಗೃಹಲಕ್ಷ್ಮಿ ಯೋಜನೆಯಿಂದ ಡಿಲೀಟ್ ಮಾಡಿದ್ದು ೨೩೬ ಫಲಾನುಭವಿಗಳನ್ನು ಡಿಲೀಟ್ ಮಾಡಲು ಬಾಕಿ ಇರುತ್ತದೆ ಎಂದು ಸಭೆಗೆ ಅವರು ಮಾಹಿತಿ ನೀಡಿದರು.

ಸಮಿತಿ ಸದಸ್ಯರಾದ ಪ್ರಭು ರೈ ಮಾತನಾಡಿ, ಮುಂದಿನ ಸಭೆಗೆ ಮಡಿಕೇರಿ ತಾಲೂಕಿಗೆ ಸಂಬAಧಿಸಿದAತೆ ಗೃಹಲಕ್ಷ್ಮಿ ಯೋಜನೆಯ ಪ್ರಗತಿ ವರದಿಯನ್ನು ನೀಡಲು ಇಲಾಖಾಧಿಕಾರಿಯವರಿಗೆ ತಿಳಿಸಿದರು.

ಶಕ್ತಿಯೋಜನೆ : ಶಕ್ತಿ ಯೋಜನೆಯಲ್ಲಿ ೨೦೨೬ ಫೆಬ್ರವರಿ ಮಾಹೆಯವರೆಗೆ ಒಟ್ಟು ೧,೪೪,೬೮,೫೦೨ ವಯಸ್ಕ ಮಹಿಳಾ ಪ್ರಯಾಣಿಕರು ಮತ್ತು ೩,೪೪,೬೭೧ ಹೆಣ್ಣು ಮಕ್ಕಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿನಿಯರು ಒಟ್ಟಾರೆ ೧,೪೮,೧೩,೧೭೩ ಜನ ಮಹಿಳಾ ಪ್ರಯಾಣಿಕರು ಸಂಸ್ಥೆಯ ವಾಹನದಲ್ಲಿ ಪ್ರಯಾಣಿಸಿ ಯೋಜನೆಯನ್ನು ಪಡೆದುಕೊಂಡಿರುತ್ತಾರೆ ಎಂದರು.

ಸಮಿತಿ ಸದಸ್ಯರಾದ ಪ್ರಭು ರೈ ಮಾತನಾಡಿ, ಬೆಂಗಳೂರಿನಿAದ ಮಂಗಳೂರಿಗೆ ರಾತ್ರಿ ವೇಳೆ ತೆರಳುವ ಕೆಎಸ್‌ಆರ್‌ಟಿಸಿ ಬಸ್‌ಗಳು ಬಸ್ ನಿಲ್ದಾಣಕ್ಕೆ ತೆರಳದೆ ಟೋಲ್‌ಗೇಟ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಮಂಗಳೂರಿಗೆ ತೆರಳುತ್ತಿದೆ, ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿರುವ ಬಗ್ಗೆ ಹಾಗೂ ಮಡಿಕೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ರಾತ್ರಿ ೧೦ ಗಂಟೆಯ ನಂತರ ಟಿಸಿ ವ್ಯವಸ್ಥೆಯನ್ನು ಮಾಡಲು ಪತ್ರ ವ್ಯವಹಾರ ಮಾಡುವಂತೆ ಕೆಎಸ್‌ಆರ್‌ಟಿಸಿ ಸಂಸ್ಥೆಯ ಘಟಕ ವ್ಯವಸ್ಥಾಪಕರಿಗೆ ತಿಳಿಸಿದರು.

ಯುವನಿಧಿ : ಯುವನಿಧಿ ಯೋಜನೆಗೆ ಸಂಬAಧಿಸಿದAತೆ ೨೦೨೩-೨೦೨೪ ಮತ್ತು ೨೦೨೫-೨೦೨೬ ರಲ್ಲಿ ಪದವಿ ಮತ್ತು ಡಿಪ್ಲೋಮಾ ಉತ್ತೀರ್ಣರಾಗಿ ಕನಿಷ್ಟ ೬ ತಿಂಗಳ ಅವಧಿಯವರೆಗೆ ಸರ್ಕಾರಿ/ ಖಾಸಗಿ ಉದ್ಯೋಗ ಹೊಂದಿಲ್ಲದವರು, ಸ್ವಯಂ ಉದ್ಯೋಗ ಹೊಂದಿಲ್ಲದವರು, ಉನ್ನತ ವಿದ್ಯಾಭ್ಯಾಸ ಮುಂದುವರಿಸದೇ ಇರುವವರು ಈ ಯೋಜನೆಗೆ ಅರ್ಹರಾಗಿರುತ್ತಾರೆ ಎಂದರು.

ಗೃಹಜ್ಯೋತಿ ಯೋಜನೆ : ಇಲಾಖೆ ಅಧಿಕಾರಿಗಳು ಮಾತನಾಡಿ, ಮಡಿಕೇರಿ ತಾಲೂಕಿನಲ್ಲಿ ೫೨,೪೩೩ ಅರ್ಹ ವಿದ್ಯುತ್ ಸ್ಥಾವರಗಳಿದ್ದು, ಗೃಹಜ್ಯೋತಿ ಯೋಜನೆಯಡಿ ೫೨,೦೨೭ ನೋಂದಣಿಗೊAಡ ಅರ್ಜಿಗಳಾಗಿದ್ದು, ೪೦೬ ಬಾಕಿ ಇರುವ ಸ್ಥಾವರಗಳಿದ್ದು ಶೇ. ೯೯.೨೩ ಪ್ರಗತಿಯಾಗಿದ್ದು ಡಿಸೆಂಬರ್-೨೦೨೫ ಹಾಗೂ ಜನವರಿ - ೨೦೨೬ ಮಾಹೆಯಲ್ಲಿ ೧೩೮೦ ಸ್ಥಾವರಗಳು ಹೊಸದಾಗಿ ಸಂಪರ್ಕಗೊAಡಿದ್ದು ಮಾಸಾಂತ್ಯದೊಳಗೆ ಗೃಹಜ್ಯೋತಿ ಯೋಜನೆಯಡಿ ನೋಂದಾಯಿಸಲ್ಪಡುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು. ಅಧ್ಯಕ್ಷರು ಮಾತನಾಡಿ, ಮರಗೋಡುವಿನಲ್ಲಿ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವಂತೆ ಇಲಾಖೆಯ ಅಧಿಕಾರಿಯವರಿಗೆ ಸೂಚಿಸಿದರು.ಇಲಾಖಾಧಿಕಾರಿಯವರು ಮಾತನಾಡಿ, ಮರಗೋಡುವಿನಲ್ಲಿ ವಿದ್ಯುತ್ ಕಂಬಗಳು ತೋಟದ ಮಧ್ಯೆ ಹಾದೂ ಹೋಗುವುದರಿಂದ ಮರಗಳು ಬಿದ್ದು ವಿದ್ಯುತ್ ಕಂಬ ತುಂಡಾಗುತ್ತಿದ್ದು ಸದರಿ ಸಮಸ್ಯೆಯನ್ನು ಪರಿಹರಿಸುವುದಾಗಿ ಸಭೆಯಲ್ಲಿ ತಿಳಿಸಿದರು.

ಅನ್ನಭಾಗ್ಯ : ಅನ್ನಭಾಗ್ಯ ಯೋಜನೆಗೆ ಸಂಬAಧಿಸಿದAತೆ ಮಡಿಕೇರಿ ತಾಲೂಕಿನಲ್ಲಿ ಒಟ್ಟು ೩೮,೨೭೧ ಪಡಿತರ ಚೀಟಿ ಇದ್ದು ೧,೨೦,೯೭೦ ಒಟ್ಟು ಫಲಾನುಭವಿಗಳಿರುತ್ತಾರೆ. ಅದರಲ್ಲಿ ೧,೯೦೨ ಎಎವೈ ಪಡಿತರ ಚೀಟಿ ಇದ್ದು ೭,೫೬೫ ಎಎವೈ ಫಲಾನುಭವಿಗಳು ಇರುತ್ತಾರೆ, ೨೧೭೦೦ ಪಿ.ಹೆಚ್ ಹೆಚ್ ಪಡಿತರ ಚೀಟಿ ಇದ್ದು ೭೦,೨೦೬ ಫಲಾನುಭವಿಗಳು, ೧೪,೬೬೯ ಎನ್ ಪಿಹೆಚ್‌ಹೆಚ್ ಪಡಿತರ ಚೀಟಿ ಇದ್ದು ೪೩,೧೯೯ ಫಲಾನುಭವಿಗಳು ಇದ್ದಾರೆ ಎಂದು ಮಾಹಿತಿ ನೀಡಿದರು.

ತಾಲೂಕು ಗ್ಯಾರಂಟಿ ಸಮಿತಿಯ ಅಧ್ಯಕ್ಷ ಎಂ.ಜಿ. ಮೋಹನ್ ದಾಸ್ ಮಾತನಾಡಿ, ಮಡಿಕೇರಿ ತಾಲೂಕಿನಲ್ಲಿ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅನುಷ್ಠಾನ ಇಲಾಖೆಗಳು ಉತ್ತಮ ಪ್ರಗತಿಯನ್ನು ಸಾಧಿಸಿದ್ದು ಮುಂದಿನ ದಿನಗಳಲ್ಲಿಯೂ ಸಹ ಸಮಿತಿಯ ಎಲ್ಲಾ ಸದಸ್ಯರು ಹಾಗೂ ಅಧಿಕಾರಿ ವರ್ಗದವರು ಸರ್ಕಾರದ ಮಹಾತ್ವಾಕಾಂಕ್ಷಿ ೦೫ ಗ್ಯಾರಂಟಿ ಯೋಜನೆಯನ್ನು ಎಲ್ಲಾ ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡಲು ಶ್ರಮಿಸಬೇಕು ಎಂದು ತಿಳಿಸಿದರು.