ಮಡಿಕೇರಿ, ಮಾ. ೬: ಮಡಿಕೇರಿ ತಾಲೂಕು ಮದೆ ಗ್ರಾಮದ ಶ್ರೀ ಮದೆ ಮಾದೂರಪ್ಪ ದೇವರ ವಾರ್ಷಿÀಕೋತ್ಸವ ಪ್ರಯುಕ್ತ ತಾ. ೯ ರಂದು ರಾತ್ರಿ ೧೨ ಗಂಟೆಗೆ ಶ್ರೀ ದೇವರು ಬನಕ್ಕೆ ತೆರಳುವುದು, ತಾ. ೧೦ ರಂದು ಬೆಳಿಗ್ಗೆ ೭.೩೦ಕ್ಕೆ ಮುದ್ಯನ ಗದ್ದೆಯಲ್ಲಿ ಎತ್ತೇರಾಟ, ಮಧ್ಯಾಹ್ನ ೨ ಗಂಟೆಗೆ ಮಲೆಮಾವುನಲ್ಲಿ ಎತ್ತೇರಾಟ, ಶ್ರೀ ದೇವರ ನೃತ್ಯಬಲಿ, ಹರಕೆ ಕಾಣಿಕೆ ಒಪ್ಪಿಸುವುದು ಹಾಗೂ ಪ್ರಸಾದ ವಿತರಣೆ ನಡೆಯಲಿದೆ. ತಾ. ೧೧ ರಂದು ಸಂಜೆ ೫ ಗಂಟೆಗೆ ಶ್ರೀ ದೇವರ ಜಳಕ ಹಾಗೂ ಬೆಳಕುಮಾನಿಯಲ್ಲಿ ನೃತ್ಯ ಬಲಿ ಬಳಿಕ ದೇವಸ್ಥಾನಕ್ಕೆ ತೆರಳುವುದು. ತಾ. ೧೨ ರಂದು ಬೆಳಿಗ್ಗೆ ಕಲಶಪೂಜೆ, ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ಅಧ್ಯಕ್ಷರು, ತಕ್ಕಮುಖ್ಯಸ್ಥರು ತಿಳಿಸಿದ್ದಾರೆ.