ಸೋಮವಾರಪೇಟೆ, ಮಾ. ೬: ತಾಲೂಕಿನ ಗರ್ವಾಲೆ ಗ್ರಾಮದ ಕೋಟೆಬೆಟ್ಟ ಬೊಟ್ಲಪ್ಪ ದೇವರ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.ಗರ್ವಾಲೆ ಗ್ರಾಮದ ಓಡಿಯಂಡ ಕುಟುಂಬದ ಮನೆಯಿಂದ ದೇವರ ಭಂಡಾರ ತಂದು ಪೂಜೆ, ಮಹಾಮಂಗಳಾರತಿ, ಹರಕೆ ಒಪ್ಪಿಸುವುದು ಸೇರಿದಂತೆ ವಿವಿಧ ಪೂಜಾ ಕೈಂಕ ರ್ಯಗಳು ನಡೆದವು.
ಗ್ರಾಮಸ್ಥರಿಂದ ಸಾಂಪ್ರದಾಯಿಕ ಬೊಳ ಕಾಟ್ ನೃತ್ಯ ಪ್ರದರ್ಶನ ನಡೆಯಿತು. ದೇವಸ್ಥಾನ ಸಮಿತಿ ವತಿಯಿಂದ ಭಕ್ತಾದಿಗಳಿಗೆ ಅನ್ನದಾನದ ವ್ಯವಸ್ಥೆ ಕಲ್ಪಿಸಲಾಗಿತ್ತು. ತಕ್ಕಮುಖ್ಯಸ್ಥರಾದ ಸೋಮಯ್ಯ, ಐಮುಡಿಯಂಡ ಭೀಮಯ್ಯ, ಆರುಡ ರಾಜಪ್ಪ, ತಾಚಮಂಡ ಈರಪ್ಪ, ಪಾಸುರ ಗಣಪತಿ ನೇತೃತ್ವದಲ್ಲಿ ಸಾಂಪ್ರದಾಯಿಕ ಆಚರಣೆಗಳು ನಡೆದವು.