ಮಡಿಕೇರಿ, ಮಾ. ೬: ಮಡಿಕೇರಿ ಕೊಡವ ಸಮಾಜ ಆವರಣದಲ್ಲಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ನೂತ ಸಭಾ ಭವನ ನಿರ್ಮಾಣ ಕಾರ್ಯಕ್ಕೆ ಶಾಸಕ ಡಾ. ಮಂತರ್ ಗೌಡ ಅವರು ಭೂಮಿಪೂಜೆ ನೆರವೇರಿಸಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಶಾಸಕ ಮಂತರ್ ಅವರ ಮೂಲಕ ಕಟ್ಟಡ ನಿರ್ಮಾಣಕ್ಕೆ ರೂ. ೨೫ ಲಕ್ಷ ಅನುದಾನವನ್ನು ನೀಡಲಾಗಿದೆ. ಬುಧವಾರದಂದು ಈ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕರು, ಪೊಮ್ಮಕಡ ಕೂಟದ ಮನವಿ ಮೇರಿಗೆ ಸಿ.ಎಂ.ಐ.ಡಿ.ಪಿ. ವಿಶೇಷ ಅನುದಾನದಲ್ಲಿ ರೂ. ೨೫ ಲಕ್ಷ ಒದಗಿಸಲಾಗಿದೆ. ಇಷ್ಟು ಮೊತ್ತದಲ್ಲಿ ಸಭಾಭವನ ಪೂರ್ಣಗೊಳಿಸುವಂತೆ ಹೇಳಿದರು. ಒಂದು ವೇಳೆ ಹೆಚ್ಚು ಅನುದಾನ ಬೇಕಾದಲ್ಲಿ ಒದಗಿಸಲು ಪ್ರಯತ್ನಿಸುವುದಾಗಿಯೂ ಅವರು ಭರವಸೆಯಿತ್ತರು.
ಇದಲ್ಲದೆ ಕೊಡವ ಸಮಾಜದ ಒತ್ತಿನಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸಂಬAಧಿಸಿದAತೆ ತಾವು ಸೇರಿದಂತೆ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಸೇರಿ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿದ್ದೇವೆ. ಬೇಸಿಗೆ ಒಳಗೆ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಸಿಗಲಿದೆ ಎಂದು ಹೇಳಿದರು. ಮಡಿಕೇರಿಯ ಹೊರವಲಯದಲ್ಲಿ ಅರ್ಧದಲ್ಲಿ ಉಳಿದಿರುವ ಕೊಡವ ಹೆರಿಟೇಜ್ ಸೆಂಟರ್ ಅನ್ನು ಪೂರ್ಣಗೊಳಿಸುವ ನಿಟ್ಟಿನಲ್ಲೂ ಪ್ರಯತ್ನಿಸಲಾಗುತ್ತಿದ್ದು, ಇದಕ್ಕೆ ಅಗತ್ಯವಿರುವ ಹೆಚ್ಚಿನ ಅನುದಾನ ತರಲಾಗುವುದು. ಪೂರ್ಣಗೊಂಡ ನಂತರ ಇದರ ನಿರ್ವಹಣೆಯ ಬಗ್ಗೆ ಕೊಡವ ಸಮಾಜವೂ ಒಗ್ಗಟ್ಟಾಗಿ ಸೇರಿ ಯಾವ ರೀತಿ ಮುನ್ನಡೆಸಬೇಕು ಎಂಬುದನ್ನು ತಿಳಿಸಲು ಅವರು ಹೇಳಿದರು.
ಸರಕಾರದ ಮೂಲಕವೇ ನಿರ್ವಹಿಸುವುದೊ, ಇಲ್ಲವೆ ಪಿಪಿಪಿ ಮಾದರಿಯಲ್ಲಿ ನಿರ್ವಹಣೆ ಮಾಡುವುದೋ ಅಥವಾ ಕೊಡವ ಸಮಾಜ ಇದನ್ನು ನಿರ್ವಹಣೆ ಮಾಡುವ ಬಗ್ಗೆ ತೀರ್ಮಾನಕ್ಕೆ ಬರಬೇಕಿದೆ. ಈ ಆರ್ಥಿಕ ವರ್ಷದಲ್ಲಿ ಅಗತ್ಯ ಅನುದಾನ ದೊರಕಿಸುವುದಾಗಿ ಮಂತರ್ ಗೌಡ ತಿಳಿಸಿದರು. ಈ ಸಂದರ್ಭ ಕೊಡವ ಸಮಾಜ ಅಧ್ಯಕ್ಷ ಮಂಡುವAಡ ಪಿ ಮುತ್ತಪ್ಪ ಹಾಗೂ ಪದಾಧಿಕಾರಿಗಳು, ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಸೇರಿದಂತೆ ಕೊಟದ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು. ವೀಣಾ ಅಚ್ಚಯ್ಯ ಸೇರಿದಂತೆ ಮೂಡಾ ಅಧ್ಯಕ್ಷ ಬಿ.ವೈ. ರಾಜೇಶ್, ಪ್ರಕಾಶ್ ಆಚಾರ್ಯ, ಮತ್ತಿತರರು ಇದ್ದರು.