ಸೋಮವಾರಪೇಟೆ, ಮಾ. ೫: ಇಲ್ಲಿನ ಇನ್ನರ್ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಹಾಸನದ ಚೈತನ್ಯ ಮಂದಿರ ವೃದ್ಧಾಶ್ರಮ ಮತ್ತು ಶಿಶುಕೇಂದ್ರಕ್ಕೆ ಭೇಟಿ ನೀಡಿ ಸಮಾಜಮುಖಿ ಕಾರ್ಯಗಳನ್ನು ನಡೆಸಲಾಯಿತು.
ಕ್ಲಬ್ನ ಸದಸ್ಯರು ಆಶ್ರಮದ ವೃದ್ಧರೊಂದಿಗೆ ಮಾತುಕತೆ ನಡೆಸಿದರು. ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಿದರು. ವಿವಿಧ ಆಟಗಳನ್ನು ಆಡಿಸಿ, ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಈ ಸಂದರ್ಭ ಸಂಸ್ಥೆಯ ಅಧ್ಯಕ್ಷೆ ಹಾಗೂಆಹಾರ ತಜ್ಞೆ ತನ್ಮಯಿ ಪ್ರವೀಣ್ ಮಾತನಾಡಿ, ವೃದ್ಧರ ಆರೋಗ್ಯದ ಕಾಳಜಿ, ಸಮತೋಲನ ಆಹಾರ ಕ್ರಮ ಹಾಗೂ ಶುಚಿತ್ವದ ಮಹತ್ವದ ಬಗ್ಗೆ ತಿಳಿಸಿದರು. ಆಶ್ರಮದ ನಿರ್ವಹಣೆಗೆ ೨೧ ಸಾವಿರ ರೂ.ಗಳ ದೇಣಿಗೆಯನ್ನು ನೀಡಲಾಯಿತು. ಜೊತೆಗೆ ಶಿಶುಕೇಂದ್ರಕ್ಕೆ ಭೇಟಿ ನೀಡಿ ಹಾಲಿನ ಪುಡಿ ವಿತರಿಸಿದರು.
ಕಾರ್ಯಕ್ರಮದಲ್ಲಿ ಆಶ್ರಮದ ಉಪಾಧ್ಯಕ್ಷ ಎಚ್.ಸಿ.ಆನಂದ್, ಇನ್ನರ್ ವೀಲ್ ಕ್ಲಬ್ನ ಉಪಾಧ್ಯಕ್ಷೆ ಲತಾ ಮಂಜು, ಪದಾಧಿಕಾರಿಗಳಾದ ಸಂಧ್ಯಾ ರಾಣಿ, ಸಂಗೀತಾ, ಪ್ರೇಮಾ, ಲತಾ ನಾಗೇಶ್, ಭಾರ್ಗವಿ, ರಾಜೇಶ್ವರಿ, ವನಿತಾ, ದಿವ್ಯಾ, ಚಂದ್ರಿಕಾ ಹಾಗೂ ರಾಣಿ ಭಾಗವಹಿಸಿದ್ದರು.